ಭ್ರಷ್ಟಾಚಾರದ ವಿರುದ್ದ ಎಂ ಎಂ ಪೌಲೋಸ್ ನಡೆಸುವ ಕೇರಳ ಯಾತ್ರೆಗೆ ಚಾಲನೆ
ಮಂಜೇಶ್ವರ: ಭ್ರಷ್ಟಾಚಾರದ ವಿರುದ್ದ ತಿರುವನಂತಪುರದ ಸಾಮಾಜಿಕ ಸೇವಾ ಕಾರ್ಯಕರ್ತ ಎಂ ಎಂ ಪೌಲೋಸ್ ನಡೆಸುವ ಕೇರಳ ಯಾತ್ರೆಗೆ ಕನರ್ಾಟಕ ಕೇರಳ ಗಡಿಪ್ರದೇಶವಾದ ತಲಪಾಡಿಯಲ್ಲಿ ಬುಧವಾರ ಚಾಲನೆ ದೊರಕಿತು.
ಸಮಾಜದ ಎಲ್ಲಾ ಘಟಕದಲ್ಲೂ ಅಬರ್ುದದ ರೀತಿಯಲ್ಲಿ ಹರಡುತ್ತಿರುವ ಭ್ರಷ್ಟಾಚಾರವನ್ನು ತಡೆಗಟ್ಟುವ ಉದ್ದೇಶದಿಂದ ಈ ಕೇರಳ ಯಾತ್ರೆಯನ್ನು ಆರಂಭಿಸಲಾಗಿದೆ. ಈ ಮೊದಲು ಇದೇ ಪೌಲೋಸ್ 2015 ಫೆಬ್ರವರಿ ಒಂದರಿಂದ ಮಾಚರ್್ ಎರಡರ ತನಕ ಇದೇ ರೀತಿಯ ಯಾತ್ರೆಯನ್ನು ಕೈ ಗೊಂಡಿದ್ದರು.
ರಾಜಕೀಯ ಮುಕ್ತವಾದ ಪೌಲೋಸ್ ರವರ ಈ ಸಲದ ಯಾತ್ರೆಯು ಫೆಬ್ರವರಿ 7 ರಿಂದ ಅರಂಭಗೊಂಡಿದ್ದು, ಕೊನೆಯ ದಿನಾಂಕವನ್ನು ನಿಗದಿ ಪಡಿಸದೇ ಇದ್ದರೂ ಪ್ರತಿಯೊಂದು ಗ್ರಾಮಗಳಲ್ಲೂ ಸಂಚರಿಸಿ ಭ್ರಷ್ಟಾಚಾರದ ವಿರುದ್ದ ಜನರು ಎದ್ದೇಳುವಂತೆ ಜಾಗೃತಿ ಮೂಡಿಸುವುದು ಯಾತ್ರೆಯ ಲಕ್ಷ್ಯವಾಗಿದ್ದು, ತಿರುವಂನಂತಪುರದಲ್ಲಿ ಕೇರಳ ಯಾತ್ರೆ ಸಮಾಪ್ತಿ ಗೊಳ್ಳಲಿದೆ ಎಂದು ಫೌಲೋಸ್ ತಿಳಿಸಿರುವರು.
ತಲಪಾಡಿಯಲ್ಲಿ ಕೆ ಪಿ ಸೋಮಶೇಖರ್ ರವರ ಅಧ್ಯಕ್ಷತೆಯಲ್ಲಿ ನಡೆದ ಕೇರಳ ಯಾತ್ರೆಯನ್ನು ಸ್ಥಳೀಯ ವೈದ್ಯ ಕೆ ಎ ಖಾದರ್ ಉದ್ಘಾಟಿಸಿ ಚಾಲನೆ ನೀಡಿದರು. ಈ ಸಂದರ್ಭ ಜಾಥ ನಾಯಕ ಎಂ ಎಂ ಪೌಲೋಸ್, ಬಿ ನಾರಾಯಣ, ಸಿ ನಾರಾಯಣ ಮಾಸ್ಟರ್, ಕೃಷ್ಣಪ್ಪ ಪೂಜಾರಿ, ಎಂ ಈಶ್ವರ ಮಾಸ್ಟರ್ ಸಹಿತ ಹಲವರು ಉಪಸ್ಥಿತರಿದ್ದರು.