HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                   ಪತ್ರಿಕೆಗಳಿಗೆ ನಿಮರ್ಾಣ ಮತ್ತು ನಿಮರ್ೂಲನ ಮಾಡುವ ಶಕ್ತಿಗಳಿದೆ-ಡಾ.ಬನಾರಿ
                         ಎಡನೀರಿನಲ್ಲಿ ಗಮನ ಸೆಳೆದ ಬಲ್ಲಿರೇನಯ್ಯ ಐದನೇ ವಾಷರ್ಿಕೋತ್ಸವ
    ಬದಿಯಡ್ಕ: ಯಕ್ಷಗಾನದ ಯಾವ ಪ್ರಕಾರವೇ ಆಗಲಿ ಅದು ಯಕ್ಷಗಾನೀಯವಾಗಿದ್ದಾಗ ಬಹುಜನರಿಗೆ ಸಹ್ಯವಾಗುತ್ತದೆ. ಯಕ್ಷಗಾನ ಸಂಸ್ಕೃತಿಯ ಸಾರ್ವಭೌಮ ಕಲೆಯಾಗಿದ್ದು, ಯಕ್ಷಗಾನದ ಅಮೂಲ್ಯ ವಿಷಯಗಳನ್ನು ದಾಖಲೀಕರಣಗೊಳಿಸುವಲ್ಲಿ ಯಕ್ಷಗಾನ ಸಂಬಂಧಿ ಪತ್ರಿಕೆಗಳು ಇನ್ನಷ್ಟು ಬೆಳೆಯಬೇಕು. ಪ್ರಾಮಾಣೀಕತೆ, ನಿಲರ್ಿಪ್ತೆ ಮತ್ತು ಶ್ರದ್ದೆ ಪತ್ರಿಕೆಗಳನ್ನು ಬೆಳೆಸುವಲ್ಲಿ ಪ್ರಧಾನ ಪಾತ್ರವಹಿಸುತ್ತದೆ ಎಂದು ಹಿರಿಯ ವೈದ್ಯ, ಸಾಹಿತಿ, ಯಕ್ಷಗಾನ ಅರ್ಥಧಾರಿ ಡಾ.ರಮಾನಂದ ಬನಾರಿ ಅಭಿಪ್ರಾಯ ವ್ಯಕ್ತಪಡಿಸಿದರು.
     ಯಕ್ಷಗಾನ ಮಾಸಪತ್ರಿಕೆ "ಬಲ್ಲಿರೇನಯ್ಯ" ಭಾನುವಾರ ಶ್ರೀಮದ್ ಎಡನೀರು ಮಠದಲ್ಲಿ ಆಯೋಜಿಸಿದ್ದ ತನ್ನ ಐದನೇ ವಷರ್ಾಚರಣೆಯ ವಿಶೇಷ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
   ಪತ್ರಿಕೆಗಳಿಗೆ ನಿಮರ್ಾಣ ಮತ್ತು ನಿಮರ್ೂಲನ ಮಾಡುವ ಶಕ್ತಿಗಳಿದೆ ಎಂದು ತಿಳಿಸಿದ ಅವರು, ಕಲೆ ಸಂಬಂಧಿ ಪತ್ರಿಕೆಗಳು ಸಾಮಾಜಿಕ ನ್ಯಾಯ ಕಾಯ್ದುಕೊಳ್ಳುವಲ್ಲಿ ಪರಿಶ್ರಮಿಸಬೇಕು ಎಂದು ಅವರು ತಿಳಿಸಿದರು. 
   ವೇದಿಕೆಯಲ್ಲಿ ಉಪಸ್ಥಿತರಿದ್ದು ಆಶೀರ್ವಚನಗೈದ ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳು ಮಾತನಾಡಿ, ಯಕ್ಷಗಾನದ ಪರಂಪರೆ, ಹಿರಿಯ ತಲೆಮಾರಿನ ರಂಗತಂತ್ರಗಳನ್ನು ಇಂದಿನ ಕಾಲಘಟ್ಟದಲ್ಲಿ ನಿಂತು ಅವಲೋಕಿಸಿ ಪರಿಚಯಿಸುವ ಹೊಣೆ ಮಾಧ್ಯಮಗಳಿಗಿವೆ ಎಂದು ತಿಳಿಸಿದರು. ಹೊಸತನ ಮತ್ತು ಸರಳ ನಿರೂಪಣೆಯ ಬಲ್ಲಿರೇನಯ್ಯ ಮಾಸಪತ್ರಿಕೆ ಕಲೆ, ಕಲಾವಿದರು ಹಾಗೂ ಸಹೃದಯ ಪ್ರೇಕ್ಷಕರು, ಕಲೋಪಾಸಕರ ನಡುವಿನ ಕೊಂಡಿಯಾಗಿ ಪರಸ್ಪರ ವಿಚಾರ ವಿನಿಮಯದ ಮೂಲಕ ಆರೋಗ್ಯಕರ ಸನ್ನಿವೇಶವನ್ನು ಸೃಷ್ಟಿಸಿರುವ ಸಾಧನೆ ಶ್ಲಾಘನೀಯ ಎಂದು ತಿಳಿಸಿದರು.
   ಶುಭಾಶಂಸನೆಗೈದು ಮಾತನಾಡಿದ ಕಾಸರಗೋಡು ಸರಕಾರಿ ಕಾಲೇಜಿನ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕ ಡಾ. ರತ್ನಾಕರ ಮಲ್ಲಮೂಲೆಯವರು ಮಾತನಾಡಿ, ಯಕ್ಷಗಾನ ಕಲೆಯ ಸವರ್ಾಂಗೀಣ ದಾಖಲೀಕರಣ ಯತ್ನಗಳ ಹಿಂದೆ ಯಕ್ಷಗಾನ ಪತ್ರಿಕೆಗಳ ಸಾಧನೆ ಭವಿಷ್ಯದ ಕಲೋಪಾಸಕರು, ಕಲಾಪ್ರೇಮಿಗಳಿಗೆ ಪ್ರಮುಖ ಆಕರ ಗ್ರಂಥಗಳಾಗಿ ಸ್ಥಾನ ಪಡೆಯುತ್ತವೆ. ವೈವಿಧ್ಯಮಯವಾದ ಯಕ್ಷಗಾನದ ವಿವಿಧ ಪ್ರಕಾರಗಳನ್ನು ವಿಶ್ಲೇಶಿಸಿ ಓದುಗರಿಗೆ ಕಟ್ಟಿಕೊಡುವ ಕಲೆಗಾರಿಕೆ ಸಿದ್ದಿಸಿದಾಗ ಪತ್ರಿಕೆ ಜನಮನ್ನಣೆ ಪಡೆಯುತ್ತದೆ. ಬಲ್ಲಿರೇನಯ್ಯದ ಐದು ವರ್ಷಗಳ ಸಾಧನೆ ಅಪೂರ್ವವಾದುದು ಎಂದು ತಿಳಿಸಿದರು.   
   ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನರ್ಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಟಿ.ಶ್ಯಾಮ್ ಭಟ್ ಅವರು ಮಾತನಾಡಿ ಕಲಾಭಿರುಚಿಯನ್ನು ಪಸರಿಸುವಲ್ಲಿ ಪ್ರಧಾನ ಪಾತ್ರವಹಿಸುವ ಯಕ್ಷಗಾನ ಪತ್ರಿಕೆಗಳು ಸಮಗ್ರ ಯಕ್ಷಗಾನದ ಪ್ರೇರಕ ಶಕ್ತಿಯಾಗಿದೆ. ಅಭಿವ್ಯಕ್ತಗೊಳ್ಳುವಿಕೆಗೆ ಮುಕ್ತವಾಗಿ ತೆರೆದುಕೊಂಡಾಗ ವಿಸ್ತಾರವಾಗಿ ಬೆಳೆಯಲು ಅವಕಾಶವೊದಗುತ್ತದೆ ಎಂದು ಅವರು ತಿಳಿಸಿದರು. ಪರಂಪರೆಯ ಬಯಲಾಟಗಳು, ಕಲಾವಿದರು, ಆಗುಹೋಗುಗಳ ಬಗ್ಗೆ ನಿಖರತೆಯೊದಗಿಸುವುದರ ಜೊತೆಗೆ ಆರೋಗ್ಯಪೂರ್ಣ ಚಚರ್ೆಗಳಿಗೆ ವೇದಿಕೆಯಾಗಿ ಸವರ್ಾಂಗೀಣ ಬೆಳವಣಿಗೆಗೆ ಯಕ್ಷಮಾಸ ಪತ್ರಿಕೆಗಳು ಬಲುದೊಡ್ಡ ಕೊಡುಗೆಯನ್ನು ನೀಡಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸದರು.
  ಸಮಾರಂಭದಲ್ಲಿ ಉದ್ಯಮಿ ದಿವಾಣ ಗೋವಿಂದ ಭಟ್ ಉಪಸ್ಥಿತರಿದ್ದು ಮಾತನಾಡಿದರು. ಯಕ್ಷಗಾನ ಸಂಘಟಕ ಟಿ.ಎನ್.ರಮೇಶ್ ಹಾಗೂ ಬಡಗುತಿಟ್ಟಿನ ಹಿರಿಯ ಬಣ್ಣದ ವೇಶಧಾರಿ ಎಳ್ಳಂಪಳ್ಳಿ ಜಗನ್ನಾಥ ಆಚಾರ್ಯ ರನ್ನು ಈ ಸಂದರ್ಭ ಗೌರವಿಸಲಾಯಿತು. ಬಲ್ಲಿರೇನಯ್ಯ ಪತ್ರಿಕೆಯ ಸಂಪಾದಕ ತಾರಾನಾಥ ಬಲ್ಯಾಯ ವಕರ್ಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಪತ್ರಿಕೆ ಸಾಗಿಬಂದ ದಾರಿಯ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು. ರಾಜೇಂದ್ರ ಕಲ್ಲೂರಾಯ ಸ್ವಾಗತಿಸಿ, ತಾರಾನಾಥ ವಕರ್ಾಡಿ ವಂದಿಸಿದರು. ಆಜ್ಞಾ ಸೋಹಮ್ ವಕರ್ಾಡಿ ಕಾರ್ಯಕ್ರಮ ನಿರೂಪಿಸಿದರು. ಜಯರಾಮ ಮಂಜತ್ತಾಯ ಎಡನೀರು, ಬಲ್ಲಿರೇನಯ್ಯ ಮಾಸಪತ್ರಿಕೆಯ ವ್ಯವಸ್ಥಾಪಕಿ ಡಾ.ಪ್ರೇಮಲತಾ, ಶ್ರೀಶಕುಮಾರ್ ಪಂಜಿತ್ತಡ್ಕ ಮೊದಲಾದವರು ಸಹಕರಿಸಿದರು.
    ಪತ್ರಿಕೆಯ ಐದನೇ ವಷರ್ಾಚರಣೆಯ ಅಂಗವಾಗಿ ಯಕ್ಷಗಾನ ಕಣಿತ ಸ್ಪಧರ್ೆ ಏರ್ಪಡಿಸಲಾಗಿತ್ತು. ಸ್ಪಧರ್ೆಯಲ್ಲಿ ಸ್ವಸ್ತಿಕ್ ಶಮರ್ಾ ಪಳ್ಳತ್ತಡ್ಕ ಪ್ರಥಮ, ಕಿಶನ್ ಎ.ಎಸ್.ದ್ವಿತೀಯ ಹಾಗೂ ಚಿತ್ತರಂಜನ್ ಕಡಂದೇಲು ತೃತೀಯ ಬಹುಮಾನಗಳನ್ನು ಪಡೆದರು. ದತ್ತೇಶ್ ಮಾವಿನಕಟ್ಟೆ, ಸ್ಮೃತಿ ಎಂ, ಅರವಿಂದ ವಾಸಿಷ್ಟ ಶಮರ್ಾ ಉಡುಪಮೂಲೆ, ಶ್ರೀಗಿರಿ ಕೆ, ಉಪಾಸನಾ ಪಂಜರಿಕೆ ಸಮಧಾನಕರ ಬಹುಮಾನಗಳನ್ನು ಪಡೆದರು. ಬಳಿಕ ಶ್ರೀಎಡನೀರು ಮೇಳದವರಿಂದ ತಾರಾನಾಥ ಬಲ್ಯಾಯ ವಿರಚಿತ ಪ್ರಸಂಗದ ಯಕ್ಷಗಾನ ಪ್ರದರ್ಶನ ನಡೆಯಿತು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries