HEALTH TIPS

ಯಾವುದೇ ಶೀರ್ಷಿಕೆಯಿಲ್ಲ

         ಕಟ್ಟೆಯೊಡೆದ ಆಕ್ರೋಶ-ರಸ್ತೆ ತಡೆ
  ಪೆರ್ಲ :ಸಂಪೂರ್ಣ ಹದಗೆಟ್ಟಿರುವ ಚೆರ್ಕಳ-ಕಲ್ಲಡ್ಕ ಅಂತರ್ ರಾಜ್ಯ ಹೆದ್ದಾರಿಯನ್ನು ಸಂಪೂರ್ಣ ಡಾಮರೀಕರಣಗೊಳಿಸುವ ವರೆಗೆ ರಸ್ತೆಗೆ ವಾಹನ ತರಲಾರೆವೆಂದು ಪಟ್ಟುಹಿಡಿದು ಸೋಮವಾರದಿಂದ ಖಾಸಗೀ ಬಸ್ ಕಾಮರ್ಿಕರು ಹೂಡಿರುವ ಮುಷ್ಕರಕ್ಕೆ ಬಲನೀಡಲೋ ಎಂಬಂತೆ  ಬುಧವಾರ ನಾಗರಿಕರ ಪ್ರವೇಶವಾಗಿ  ತೀವ್ರ ಸ್ವರೂಪದ ಪ್ರತಿಭಟನೆಗೆ ಕಾರಣವಾಯಿತು.
  ಲೋಕೋಪಯೋಗಿ ಇಲಾಖೆ ಅಧಿಕಾರಿ ಮತ್ತು ಕೇರಳ ಸರಕಾರದಿಂದ ನಿರ್ಲಕ್ಷಸಲ್ಪಟ್ಟ ಕಲ್ಲಡ್ಕ -ಚೆರ್ಕಳ ರಸ್ತೆಯ ಶೋಚನೀಯ ಸ್ಥಿತಿ ಖಾಸಗಿ ಬಸ್ ಕಾಮರ್ಿಕರ ಮುಷ್ಕರದ  ಬೆನ್ನಲ್ಲೆ ಪೆರ್ಲ ಅಡ್ಕಸ್ಥಳ ನಾಗರಿಕರು ,ಟ್ಯಾಕ್ಸಿ ಚಾಲಕರು ರಸ್ತೆ ತಡೆ ನಡೆಸಿ ತಮ್ಮ ಅಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನೂ ಕೂಡಾ ತರಾಟೆಗೆ ತೆಗೆದುಕೊಂಡು ನಾವು ಧರ್ಮಕ್ಕೆ ಸಂಚಾರ ಮಾಡುತ್ತಿಲ್ಲ ತೆರಿಗೆ ಪಾವತ್ತಿಸುತ್ತಾ ಬಂದಿದ್ದೇವೆ. ರಸ್ತೆ ದುರವಸ್ಥೆಯ ಕಾರಣ ವಾಹನಗಳು ಆಗಾಗ ದುರಸ್ತಿ ಮಾಡಬೇಕಾಗಿ ಬರುತ್ತಿದೆ. ನಿಮ್ಮ ನಿರ್ಲಕ್ಷ್ಯದಿಂದ , ಅಧಿಕಾರಿಗಳ ಕರ್ತವ್ಯ ಲೋಪದಿಂದಾಗಿ ಇಂದು ಅನೇಕ ವಿದ್ಯಾಥಿಗಳು ಶಾಲೆ, ಪರೀಕ್ಷೆ ತರಗತಿ ಮೊಟಕುಮಾಡುತ್ತಿದ್ದಾರೆ.ಇಡೀ ಕೇರಳದಲ್ಲಿ ಕಾಸರಗೋಡು ಮಾತ್ರ ಈ ರೀತಿಯ ಹೀನ ಸ್ಥಿತಿಯಲ್ಲಿರುವುದು ಕಾಸರಗೋಡಿನ ಜನತೆಯ ಬಗ್ಗೆ ಇರುವ ತಾತ್ಸರ ಮತ್ತು ನಿರ್ಲಕ್ಷ್ಯದ ಭಾವನೆ ಮತ್ತು ಅಧಿಕಾರಿಗಳ ಬೇಜವಬ್ಧಾರಿತನವನ್ನು ತೋರುತ್ತದೆ. ಚುನಾವಣೆ ಸಮೀಪಿಸುವಾಗ ಪೊಳ್ಳು ಭರವಸೆ , ವಾಗ್ಧನಗಳನ್ನು ಕೊಡುವ ರಾಜಕೀಯ ಪುಢಾರಿಗಳಿಗೆ ಈಗ ಕಣ್ಣು ಕಿವಿ ಕೇಳಿಸೋದಿಲ್ಲ , ಬಾಯಿ ಬಾರದ ಮೂಕರಂತೆ ಕುಳಿತುಕೊಂಡಿದ್ದಾರೆ.  ಎಂದು ಸಾರ್ವಜನಿಕರು ತಮ್ಮ ಅಕ್ರೋಶಿತ , ಅಳಲನ್ನು ತೋಡಿಕೊಂಡರು.ಪೆರ್ಲ -ಅಡ್ಕಸ್ಥಳ ಮತ್ತು ಬದಿಯಡ್ಕದಲ್ಲಿ ರಸ್ತೆ ತಡೆ ನಡೆಸಿದರು.
   ಟಾರು ಬಂದಿದೆ:
  ಈ ಮಧ್ಯೆ ಲೋಕೋಪಯೋಗಿ ಇಲಾಖೆ ಪ್ರತಿಭಟನಕಾರರನ್ನು ಹತ್ತಿಕ್ಕಲೋ ಎಂಬಂತೆ ಈವರೆಗೆ ಇಲ್ಲವೆಂದು ಹೇಳುತ್ತಿದ್ದ ಡಾಮರೀಕರಣದ ಟಾರು ಇದೀಗ ಬಂದಿದ್ದು, ಕಾಮಗಾರಿ ಆರಂಭಿಸಿದ್ದೇವೆಂದು ತಿಳಿಸಿದ್ದು, ನೆಲ್ಲಿಕಟ್ಟೆಯಿಂದ ಕಾಮಗಾರಿ ಆರಂಭಿಸಿದೆ.
   ಚಿತ್ರ :- ಮಣಿರಾಜ್ ವಾಂತಿಚ್ಚಾಲು



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries