HEALTH TIPS

No title

                   ಫೆ.28-ಮಾ.5 : ಅಂಬಾರು ಸದಾಶಿವ ದೇವಸ್ಥಾನ ಬ್ರಹ್ಮಕಲಶೋತ್ಸವ
      ಉಪ್ಪಳ:  ಅತೀ ಪುರಾತನವೂ ಕಾರಣಿಕ ಪ್ರಸಿದ್ಧವೂ ಆದ ಅಂಬಾರು ಶ್ರೀ ಸದಾಶಿವ ದೇವಸ್ಥಾನದಲ್ಲಿ ನವೀಕರಣ ಅಷ್ಟಬಂಧ ಬ್ರಹ್ಮಕಲಶೋತ್ಸವವು ಫೆ.28 ರಿಂದ ಮಾಚರ್್ 5 ರ ವರೆಗೆ ಬಡಾಜೆ ಬೂಡು ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಹಾಗೂ ಪರಮಪೂಜ್ಯ ಯೋಗಾನಂದ ಸರಸ್ವತೀ ಸ್ವಾಮೀಜಿ ಕೊಂಡೆವೂರು  ಇವರ ಮಾರ್ಗದರ್ಶನದಲ್ಲಿ ವಿವಿಧ ವೈದಿಕ, ಧಾಮರ್ಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದೆಂದು ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದಶರ್ಿ ರಾಮಚಂದ್ರ ಸಿ. ಸುದ್ದಿಗೋಷ್ಠಿಯಲ್ಲಿ  ತಿಳಿಸಿದರು.
  ಅತೀ ಅಗತ್ಯವಿರುವ  ನವೀಕರಣದ ಕೆಲಸಗಳನ್ನು ಪೂರೈಸಿಕೊಂಡು ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ನಡೆಯುವಂತಹ ಹೊರೆಕಾಣಿಕೆ ಮೆರವಣಿಗೆಯು ಫೆ.28 ರಂದು ಮಧ್ಯಾಹ್ನ 3 ಗಂಟೆಗೆ ಐಲ ಶ್ರೀ ದುಗರ್ಾಪರಮೆಶ್ವರಿ ಕ್ಷೇತ್ರದಿಂದ ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆಯೊಂದಿಗೆ ಕ್ಷೇತ್ರಕ್ಕೆ ಅಗಮಿಸಲಿದೆ. ಮಾಚರ್್ 3 ರಂದು ಪೂವರ್ಾಹ್ನ 10.35 ರ ಶುಭಲಗ್ನದಲ್ಲಿ  ಶ್ರೀ ನಾಗದೇವರ ಹಾಗೂ ಪರಿವಾರ ದೈವಗಳ ಪ್ರತಿಷ್ಠೆ ನಡೆಯಲಿದ್ದು ಮಾಚರ್್ 5 ರಂದು ಬೆಳಿಗ್ಗೆ 7.41 ರ ಮೀನ ಲಗ್ನದಲ್ಲಿ  ಅಂಬಾರು ಸದಾಶಿವ ದೇವರಿಗೆ ಬ್ರಹ್ಮಕಲಶಾಭಿಷೇಕ ನಡೆಯಲಿದೆ.
   ಮಾಚರ್್ 6 ರಿಂದ 13 ರ ತನಕ ವಷರ್ಾವ ಕ್ಷೇತ್ರೋತ್ಸವ, 14 ರಂದು ಗುಳಿಗ ದೈವದ ಕೋಲ  ಹಾಗೂ ರಕ್ತೇಶ್ವರಿ ದೈವದ ನೇಮೋತ್ಸವವು ಜರಗಲಿದೆ. ಫೆಬ್ರವರಿ 28 ರಿಂದ ಮಾಚರ್್ 14 ರ ತನಕ ಪ್ರತಿದಿನ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನಾ ಸೇವೆ ಹಾಗೂ ಪ್ರತಿದಿನ ಅನ್ನಸಂತರ್ಪಣೆ ನಡೆಯಲಿದೆ. ಮಾಚರ್್ 1 ರಿಂದ 5 ರ ತನಕ  ಪ್ರತಿದಿನ ಸಾಯಂಕಾಲ ಧಾಮರ್ಿಕ ಸಭಾ ಕಾರ್ಯಕ್ರಮ ನಡೆಯಲಿದ್ದು  ಹಲವಾರು ಸ್ವಾಮೀಜಿಗಳು ಹಾಗೂ ಧಾಮರ್ಿಕ ಮುಂದಾಳುಗಳು ಭಾಗವಹಿಸಲಿರುವರು. ಮಾಚರ್್ 2 ರಂದು ಮಾತೃ ಸಂಗಮ ಕಾರ್ಯಕ್ರಮ ಮತ್ತು ಪ್ರತಿದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ ಎಂದು ತಿಳಿಸಿದರು.
   ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಡಿ.ಕೃಷ್ಣಪ್ಪ ಪೂಜಾರಿ ದೇರಂಬಳ, ದೇವಸ್ಥಾನದ ಆಡಳಿತ ಮೊಕ್ತೇಸರ ಕೊರಗಪ್ಪ ಎಸ್. ಶೆಟ್ಟಿ, ಮೊಕ್ತೇಸರ ಬಾಲಕೃಷ್ಣ ಅಂಬಾರು,ಪ್ರಚಾರ ಸಮಿತಿ ಸಂಚಾಲಕ ದಿನೇಶ್ ಚೆರುಗೋಳಿ ಉಪಸ್ಥಿತರಿದ್ದರು.
         

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries