HEALTH TIPS

No title

                  ಕಲೆ, ಕಲಾವಿದರಿಗೆ ಪ್ರೋತ್ಸಾಹ-ಸುಭಿಕ್ಷ ಸಮಾಜ-ಟಿ.ಎಸ್.ನಾಗಾಭರಣ
                       ಎಡನೀರಿನಲ್ಲಿ ಲೋಕಕಲಾ ಮಹೋತ್ಸವಕ್ಕೆ ಚಾಲನೆ
    ಬದಿಯಡ್ಕ: ಸಂಸ್ಕೃತಿಯ ಪ್ರತೀಕಗಳಾದ ಕಲಾ ಪ್ರಕಾರ ನೆಲ, ಜಲ, ಭಾಷೆಗಳಿಗೆ ಅತೀತವಾಗಿ ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುವ ಮಾಧ್ಯಮಗಳಾಗಿ ವರ್ತಮಾನ ಕಾಲಕ್ಕೆ ಅಗತ್ಯವಿದೆ. ವೈವಿಧ್ಯತೆಯ ವಿಶಾಲ ಕಲಾ ಪ್ರಕಾರಗಳನ್ನು ಪರಸ್ಪರ ಹಂಚಿಕೊಳ್ಳುವಲ್ಲಿ ಕಲಾ ಮಹೋತ್ಸವಗಳು ಪರಸ್ಪರ ಶೋಧಿಸಿಕೊಳ್ಳಲು ಸಹಕಾರಿ ಎಂದು ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದರು.
  ನವದೆಹಲಿಯ ಅಖಿಲ ಭಾರತ ಜಾನಪದ ಮತ್ತು ಬುಡಕಟ್ಟು ಕಲಾ ಪರಿಷತ್ತಿನ ನೇತೃತ್ವದಲ್ಲಿ ಭಾರತ ಸರಕಾರದ ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಕನರ್ಾಟಕ ಸಹಸ ಕಲಾ ಅಕಾಡೆಮಿ ಸಹಕಾರದೊಂದಿಗೆ ಶ್ರೀಮದ್ ಎಡನೀರು ಮಠದ ಸಹಯೋಗದಲ್ಲಿ ಶನಿವಾರ ಎಡನೀರು ಮಠದ ಪರಿಸರದಲ್ಲಿ ಆಯೋಜಿಸಲಾಗಿದ್ದ ಅಖಿಲ ಭಾರತ ಲೋಕ ಕಲಾ ಮಹೋತ್ಸವವನ್ನು ದೀಪ ಪ್ರಜ್ವಲನೆಗೊಳಿಸಿ ಉದ್ಘಾಟಿಸಿ ಅವರು ಮಾತನಾಡಿದರು.
   ಸಮಾರಂಭವನ್ನು ಶ್ರೀಗಳ ಸಮಕ್ಷಮ ನಗಾರಿ ಬಾರಿಸಿ ಉದ್ಘಾಟಿಸಿದ ಅಂತರಾಷ್ಟ್ರೀಯ ಖ್ಯಾತಿಯ ಚಲನಚಿತ್ರ ನಿದರ್ೇಶಕ ಟಿ.ಎಸ್ ನಾಗಾಭರಣ ಮಾತನಾಡಿ, ಮನುಷ್ಯ-ಮನುಷ್ಯರಲ್ಲಿ ಅಂತರಾಳದ ಪ್ರೇಮ, ಮಾನವೀಯತೆಯನ್ನು ಬೆಳೆಸುವಲ್ಲಿ ಕಲಾ ವೇದಿಕೆಗಳ ಮೂಲಕ ಸಾಧ್ಯವಿದೆ.ಕಲೆ, ಕಲಾವಿದರಿಗೆ ಯಾವ ಸಮಾಜದಲ್ಲಿ ಪ್ರೋತ್ಸಾಹ ಲಭ್ಯವಾಗುತ್ತದೋ ಆ ಸಮಾಜ ಗೊಂದಲಗಳಿಲ್ಲದೆ ಬೆಳೆಯಬಲ್ಲದು ಎಂದು ತಿಳಿಸಿದರು. ಭರತ ಖಂಡದ ಮೂಲ ಕಲೆಯ ಸ್ವರೂಪ ಅದು ಲೋಕಕಲೆಯ ಮಟ್ಟದಲ್ಲಿ ಕಾಣಿಸಿಕೊಳ್ಳುವಂತವುಗಳಾಗಿದ್ದು, ಇಂದು ಆಧುನಿಕತೆಯ ಫಲವಾಗಿ ಅಂತಹ ಮೂಲ ಕಲೆಗಳನ್ನು ಮರೆತಿರುವುದರಿಂದ ಅಸ್ವಸ್ಥೆಗಳು ಹಿಂಬಾಲಿಸುತ್ತವೆ ಎಂದು ಖೇದ ವ್ಯಕ್ತಪಡಿಸಿದರು. ಕಲಾ ಪ್ರಕಾರಗಳು ಕೇವಲ ಪ್ರಚಾರಕ್ಕೆ ಬಳಸುವುದನ್ನು ನಿಯಂತ್ರಿಸಿ, ಮೂಲ ಸ್ವರೂಪದಲ್ಲಿ ಬೆಳೆಸುವ ನಿಟ್ಟಿನಲ್ಲಿ ಕ್ರಿಯಾತ್ಮಕವಾಗಿ ಕಾರ್ಯಯೋಜನೆ ಹಮ್ಮಿಕೊಳ್ಳಬೇಕು ಎಂದು ಅವರು ತಿಳಿಸಿದರು. ಈ ಹಿನ್ನೆಲೆಯಲ್ಲಿ ಜಾನಪದ ಕಲೆ, ಸಂಸ್ಕೃತಿ ಸಂವರ್ಧನೆಗೆ ಸಂಸ್ಥೆಗಳನ್ನು ಹುಟ್ಟುಹಾಕಬೇಕು. ಗುರು ಶಿಷ್ಯ ಪರಂಪರೆ ಬೆಳೆಯಬೇಕು ಎಂದು ಅವರು ತಿಳಿಸಿದರು. ಜನರ ಹೃದಯಗಳನ್ನು ಪರಸ್ಪರ ಬೆಸೆಯುವ, ಮಾನವೀಯತೆ, ಪ್ರೀತಿ, ಹೃದಯವಂತಿಕೆ ಬೆಳೆಸಲು ಕಲಾ ಪ್ರಕಾರಗಳಿಂದ ಮಾತ್ರ ಸಾಧ್ಯವಿದೆ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದರು.
   ಕನರ್ಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಬಿ.ಟಾಕಪ್ಪ, ಉದುಮ ಶಾಸಕ ಕುಂಞಿರಾಮನ್, ಅಖಿಲ ಭಾರತ ಜಾನಪದ ಮತ್ತು ಬುಡಕಟ್ಟು ಪರಿಷತ್ತಿನ ಅಧ್ಯಕ್ಷ ನಿರ್ಮಲ್ ವೈದ್ಯ, ಭಾರತ ಸರಕಾರದ ಸಂಸ್ಕೃತಿ ಇಲಾಖೆಯ ನಿದರ್ೇಶಕ ಸಮಿತಿ ಸದಸ್ಯ ಅಶ್ವಥ್ ಹರಿತೂಸ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
   ಅಖಿಲ ಭಾರತ ಲೋಕಕಲಾ ಮಹೋತ್ಸವ ಸಮಿತಿ ಅಧ್ಯಕ್ಷ ಜಯರಾಮ ಮಂಜತ್ತಾಯ ಎಡನೀರು, ಜಾನಪದ ಸಂಶೋಧಕ ಸಿರಿಗಂಧಚ ಶ್ರೀನಿವಾಸ್, ಕವಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಕೇರಳ ತುಳು ಅಕಾಡೆಮಿ ಅಧ್ಯಕ್ಷ ಪಿ.ಎಸ್.ಪುಣಿಚಿತ್ತಾಯ, ಉದ್ಯಮಿ ಜಲಾಲುದ್ದೀನ್, ಸಂಘಟಕ ಬಾಲಕದೃಷ್ಣ ವೊಕರ್ೂಡ್ಲು, ಕಥಕ್ಕಳಿ ಕಲಾವಿದ ಅನಿಲ್ ಕುಮಾರ್, ಸಂಘಟಕ ಹಾಸನ್ ರಘು, ಡಾ.ರಾಜೇಶ್ ಆಳ್ವ ಬದಿಯಡ್ಕ, ಹರ್ಷ ರೈ ಪುತ್ರಕಳ ಮೊದಲಾದವರು ಉಪಸ್ಥಿತರಿದ್ದರು.
  ವಿವಿಧ ಜಾನಪದ ಕಲಾ ಪ್ರಕಾರಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಕಲಾವಿದರುಗಳಾದ ಉದುಮ ಶಾಸಕ ಕುಂಞಿರಾಮನ್(ಪೂರಕ್ಕಳಿ), ಶಂಕರ ಸ್ವಾಮಿಕೃಪಾ(ಮಾಂಕಾಳಿ ನಲಿಕೆ), ಉಸ್ತಾದ್ ಹಸನ್ ಬಾಯಿ(ಶೆಹನಾಯಿ ವಾದನ), ರಾಜಾ ಬೆಳ್ಚಡ ಉದ್ಯಾವರ(ದೈವ ನರ್ತನ ನುಡಿಕಟ್ಟು), ಗುರುಸದನಂ ರಾಮನ್ ಕುಟ್ಟಿ ನಾಯರ್(ಕಥಕ್ಕಳಿ), ದಯಾನಂದ ಜಿ.ಕತ್ತಲ್ಸಾರ್(ಭೂತ ನರ್ತನ), ಚಂದುಕುಟ್ಟಿ ನಂಬ್ಯಾರ್(ಕೋಲ್ಕಳಿ) ಲೀಕ ಕಲಾಶ್ರೀ ಪ್ರಶಸ್ತಿ ನಿಡಿ ಗೌರವಿಸಲಾಯಿತು.
   ಅಖಿಲ ಭಾರತ ಜಾನಪದ ಮತ್ತು ಬುಡಕಟ್ಟು ಪರಿಷತ್ತಿನ ರಾಷ್ಟ್ರೀಯ ಸಂಚಾಲಕ ಜೋಗಿಲ ಸಿದ್ದರಾಜು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ವಂದಿಸಿದರು. ಪತ್ರಕರ್ತ ಎಂ.ನಾ.ಚಂಬಲ್ತಿಮಾರ್ ಕಾರ್ಯಕ್ರಮ ನಿರೂಪಿಸಿದರು.
   ಬಳಿಕ ಕೇರಳ, ಕನರ್ಾಟಕ, ತಮಿಳುನಾಡು, ಪಾಂಡಿಚೇರಿ, ತೆಲಂಗಣ ಮತ್ತು ಆಂಧ್ರಪ್ರದೇಶದ ವಿವಿಧ ಜಾನಪದ ಕಲಾತಮಡಗಳಿಂದ ವೈವಿಧ್ಯಮಯ ಜಾನಪದ ಕಾರ್ಯಕ್ರಮಗಳು ಪ್ರಸ್ತುತಗೊಂಡವು. 
   



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries