ವಿದ್ಯಾಗಿರಿಯಲ್ಲಿ ವಿಜ್ಞಾನೋತ್ಸವ
ಬದಿಯಡ್ಕ: ವೈಜ್ಞಾನಿಕ ಆಶಯಗಳ ಮನವರಿಕೆ ಎಳೆಯ ಪ್ರಾಯದ ಮಗುವಿನಲ್ಲಿ ರೂಪುಗೊಂಡು ಭವಿಷ್ಯದ ವಿಜ್ಞಾನಿಗಳು ಸೃಷ್ಟಿಯಾಗಲಿ ಎಂದು ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಹೇಳಿದರು.
ಅವರು ವಿದ್ಯಾಗಿರಿ ಶಾಲೆಯಲ್ಲಿ ಇತ್ತೀಚೆಗೆ ನಡೆದ ಬದಿಯಡ್ಕ ಪಂಚಾಯಿತಿ ಮಟ್ಟದ ವಿಜ್ಞಾನೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಕಲಿತ ಮಗು ಇಸ್ರೋದಂತಹಾ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯ ಎಂದು ತೋರಿಸಿಕೊಟ್ಟಿದ್ದ ವಿದ್ಯಾಗಿರಿಯಲ್ಲಿ ಇನ್ನಷ್ಟು ಪ್ರತಿಭೆಗಳು ಹೊರಹೊಮ್ಮಲಿ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯ ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ಉಪಜಿಲ್ಲಾ ಸಹ ಶಿಕ್ಷಣಾಧಿಕಾರಿ ಕೈಲಾಸಮೂತರ್ಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸುಧಾಕರನ್, ಮಾತೃ ಸಂಘದ ಬೀನಾ, ಬಿಆರ್ಸಿಯ ಸಜಿನಿ ಟೀಚರ್ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಲಲಿತಾಂಬಿಕಾ ಸ್ವಾಗತಿಸಿ, ಶಿಕ್ಷಕಿ ಅನಿತಾ ವಂದಿಸಿದರು. ಎರಡು ದಿನಗಳ ಕಾಲ ನಡೆದ ಶಿಬಿರದಲ್ಲಿ ವೈಜ್ಞಾನಿಕ ಪ್ರಯೋಗ, ಉಪಕರಣಗಳ ನಿಮರ್ಾಣ, ಸಾಬೂನು ತಯಾರಿ ಮೊದಲಾದ ಚಟುವಟಿಕೆಗಳು ನಡೆದವು.