HEALTH TIPS

No title

                "ಆವರಣದೊಳಗೆ ಹಾವು"! ಸ್ವರ್ಗದಲ್ಲಿ ಕಿರುಚಿತ್ರ
                   ನಲುಗುವ ಕುಡಿಗಳಿಂದ ಹೀಗೊಂದು ಕಿರುಚಿತ್ರ ನಿಮರ್ಾಣ.
   ಪೆರ್ಲ: ಇಂದಿನ ಆಧುನಿಕ ಶಿಕ್ಷಣ ವ್ಯವಸ್ಥೆ ವಿದ್ಯಾಥರ್ಿಗಳಿಗೆ ಪಠ್ಯಗಳ ಹೊರತಾಗಿ ಸೃಜನಾತ್ಮಕ ಬೆಳವಣಿಗೆಗಳಿಗೂ ಹೆಚ್ಚು ಬೆಂಬಲ ನೀಡುತ್ತದೆ. ಶಾಲಾ ಕಾಲೇಜುಗಳಲ್ಲಿ ಇದಕ್ಕಾಗಿಯೇ ಪ್ರತ್ಯೇಕ ಸಂದರ್ಭಗಳನ್ನು ರೂಪಿಸಲಾಗುತ್ತಿದೆ. ಕಲೋತ್ಸವ, ಕ್ರೀಡೋತ್ಸವಗಳು, ವಿಜ್ಞಾನ ಮೇಳ, ಕ್ವಿಝ್ ಸ್ಪಧರ್ೆಗಳೇ ಮೊದಲಾದ ವೈವಿಧ್ಯಮಯ ಚಟುವಟಿಕೆಗಳ ಮೂಲಕ ವಿದ್ಯಾಥರ್ಿಗಳಲ್ಲಿ ಅಂತರ್ಗತಗೊಂಡಿರುವ ಸೃಜನಾತ್ಮಕ ಸಾಮಥ್ರ್ಯವನ್ನು ಒರೆಗೆಹಚ್ಚಿ ಬೆಂಬಲ ನೀಡಿ ಸೂಕ್ತ ಮಾರ್ಗದರ್ಶನ ನೀಡುವ ಹೊಣೆ ಶಿಕ್ಷಕರು ಮತ್ತು ಮಕ್ಕಳ ಹೆತ್ತವರಿಗೆ ಇಂದು ಹೆಚ್ಚಿದೆ.ಸರಕಾರವೂ ಅದನ್ನೇ ಹೇಳುತ್ತದೆ ಕೂಡ.
   ಜಿಲ್ಲೆಯ ಅತೀ ಹಿಂದುಳಿದಿರುವ ಗ್ರಾಮೀಣ ಪ್ರದೇಶವಾದ ಗಡಿ ಗ್ರಾಮ ಎಣ್ಮಕಜೆಯ ಹೆಚ್ಚು ಅರಿಯಲ್ಪಡುವ ಪುಟ್ಟ ಹಳ್ಳಿ ಸ್ವರ್ಗ. ಮಾರಕ ಕೀಟನಾಶಕ ಎಂಡೋಸಲ್ಫಾನ್ ನ ದುಷ್ಪರಿಣಾಮದಿಂದ ಬದುಕು ಹೈರಾಣಗೊಂಡು ಇಂದಿಗೂ ನಲುಗುತ್ತಿರುವ ನೂರಾರು ಕುಟುಂಬಗಳಿಗೆ ಭರವಸೆಯ ಆಶಾಕಿರಣವಾಗಿ ಇರುವುದೊಂದೇ ಶಾಲೆ; ಅದು ಸ್ವರ್ಗ ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ. ಮನುಷ್ಯನ ವ್ಯಾವಹಾರಿಕ ವಿಕೃತಿಯ ಫಲವಾಗಿ ಜಿನುಗುತ್ತಿರುವ ನೋವಿನ ಮಧ್ಯೆ ಇಲ್ಲಿಯ ಹೊಸ ತಲೆಮಾರಿನ ಪುಟ್ಟ ಕಂದಮ್ಮಗಳನ್ನು ಮನೋವಿಕಾಸದ ಮೂಲಕ ಸುದೃಢಗೊಳಿಸುವಲ್ಲಿ ಈ ಶಾಲೆಯ ಶಿಕ್ಷಕರು, ಆಡಳಿತ ವರ್ಗ, ಸ್ಥಳೀಯ ಪ್ರಮುಖರು ವಹಿಸುತ್ತಿರುವ ಕಾಳಜಿ, ಮಕ್ಕಳ ಮುಖದಲ್ಲಿ ಭರವಸೆಯ ಭವಿಷ್ಯ ಕಂಡುಕೊಳ್ಳಲು ಮಾರ್ಗದಶರ್ಿಯಾಗಿ ಕಲಿಕೆಯ ಭಾಗವಾಗಿಯೇ ಅಳವಡಿಸುವ ಹೊಸ-ಹೊಸ ವಿಚಾರಗಳು ಒಂದಷ್ಟು ಪ್ರೇರಣದಾಯಿಯಾಗಿದೆ. ಈ ನಿಟ್ಟಿನಲ್ಲಿ "ಸ್ವರ್ಗ ವಿಷನ್" ಎಂಬ ಮುದ್ರಿತ ಮತ್ತು ಆನ್ಲೈನ್ ವಾರಪತ್ರಿಕೆಯನ್ನು ಶಾಲೆ ಹೊರತುತ್ತಿದ್ದು, 2017ರ ಜೂನ್ ತಿಂಗಳಿಂದ ತನ್ನ ಪ್ರಕಟಣೆ ಆರಂಭಿಸಿದ ಇದು ಈವರೆಗೆ 36 ಸಂಚಿಕೆಗಳನ್ನು ಹೊರತಂದಿರುವುದು ಸ್ವರ್ಗ ಶಾಲೆಯ ವಿದ್ಯಾಥರ್ಿಗಳು ಮತ್ತು ಶಿಕ್ಷಕರ ಶ್ರಮದ ಸಂಕೇತ. ಶಾಲಾ ಚಟುವಟಿಕೆಗಳ ವರದಿಗಳು, ವಿದ್ಯಾಥರ್ಿಗಳ ಸ್ವರಚಿತ ಕವನ, ಕಥೆ, ಪ್ರಬಂಧ, ಚಿತ್ರಗಳೇ ಮೊದಲಾದ ಹಲವು ಹತ್ತು ವಿಷಯ ವೈವಿಧ್ಯತೆಯಿಂದ ಗಮನ ಸೆಳೆಯುತ್ತಿದೆ ಈ ಮಕ್ಕಳ ಪತ್ರಿಕೆ. ಜೊತೆಗೆ ಕಲಿಕಾ ವೀಡಿಯೋ, ಶಾಲಾ ಕ್ಯಾಲೆಂಡರ್, ಸ್ವರ್ಗ ವಿಷನ್ ತರಗತಿ ಲೈಬ್ರರಿಗಳನ್ನು ಇದರ ಭಾಗವಾಗಿ ಈಗಾಗಲೇ ರಚಿಸಲಾಗಿದ್ದು, ಇದೀಗ ಮಹತ್ವಾಕಾಂಕ್ಷಿ ಕಿರು ಚಿತ್ರ ನಿಮರ್ಾಣದ ಮೂಲಕ ಗಮನ ಸೆಳೆಯುತ್ತಿದೆ.
    ಕೇರಳದ ಏಳನೇ ತರಗತಿ ಆಂಗ್ಲ ಭಾಷಾ ಪಠ್ಯದ "ಎ ಸ್ನೇಕ್ ಇಂದಿ ಗ್ರಾಸ್" ನ ಕಥೆಯನ್ನಾದರಿಸಿ 13 ನಿಮಿಷಗಳ ಕಿರು ಚಿತ್ರವನ್ನು ನಿಮರ್ಿಸಲಾಗಿದೆ. ಆವರಣದೊಳಗೆ ನುಗ್ಗಿದ ಹಾವು ಮತ್ತು ಅದನ್ನು ಕೇಂದ್ರವಾಗಿಸಿ ಜನಸಾಮಾನ್ಯರ ವಿವಿಧ ಮನೋಸ್ಥಿತಿ, ದೃಷ್ಟಿಕೋನಗಳನ್ನು ಕಥಾಹಂದರವಾಗಿರುವ ಈ ಕಿರುಚಿತ್ರ ಅತ್ಯಂತ ಸುಂದರವಾಗಿ ಪುಟ್ಟ ಬಾಲಕಲಾವಿದರಿಂದ ಮೂಡಿಬಂದಿದೆ. ಶಿಕ್ಷಕ ಮಂಜುನಾಥ ಭಟ್ ಅವರು ನಿದರ್ೇಶಿಸಿರುವ ಈ ಕಿರುಚಿತ್ರದಲ್ಲಿ ಏಳನೇ ತರಗತಿ ವಿದ್ಯಾಥರ್ಿಗಳಾದ ಅಕ್ಷಯ, ಶ್ರುತಿ, ಶ್ರಾವಣ್ಯ, ಆಶ್ರಿತ್, ಹೇಮಂತಕೃಷ್ಣ, ಸಚಿನ್, ಮನೋಜ್, ಅಶ್ವಿನ್, ಪ್ರಜ್ವಲ್, ನಿರಂಜನ, ಧನುಷ್ ವಿವಿಧ ಪಾತ್ರಗಳಿಗೆ ಮನೋಜ್ಞವಾಗಿ ಜೀವತುಂಬಿ ಯಶಸ್ವಿಗೊಳಿಸಿದ್ದಾರೆ.  ಕಿರುಚಿತ್ರ ನಿಮರ್ಾಣಕ್ಕೆ ಬೇಕಾಗಿಯೇ ಶಿಕ್ಷಕ ಮಂಜುನಾಥ ಭಟ್ ಹೊಸ ಕ್ಯಾಮರಾ ಖರೀಧಿಸಿದ್ದು, ಒಟ್ಟು 50 ರಿಂದ 60 ಸಾವಿರ ರೂ. ವೆಚ್ಚತಗಲಿದೆ.
   ಮಕ್ಕಳ ಸೃಜನಾತ್ಮಕತೆ, ಆಸಕ್ತಿಯ ಕ್ಷೇತ್ರಗಳನ್ನು ಗುರುತಿಸಿ ಬೆಳೆಸುವಲ್ಲಿ  ಗ್ರಾಮೀಣ ಪ್ರದೇಶದ ಶಾಲೆಯೊಂದು ಇಟ್ಟಿರುವ ಇಂತಹ ದೈತ್ಯ ಹೆಜ್ಜೆ ನಿಜವಾಗಿಯೂ ಶ್ಲಾಘನೀಯ ಮತ್ತು ಅನುಸರಣೀಯ. ಜೊತೆಗೆ ಇನ್ನಷ್ಟು ಮಾರ್ಗದರ್ಶನ, ತರಬೇತಿ, ಆಥರ್ಿಕ ಸಹಕಾರಗಳಿದ್ದಲ್ಲಿ ದೊಡ್ಡ ಮಟ್ಟದಲ್ಲಿ ಮುಂದುವರಿಯಲು ಸಾಧ್ಯವಿದೆ.
 




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries