HEALTH TIPS

ಯಾವುದೇ ಶೀರ್ಷಿಕೆಯಿಲ್ಲ

        ಹಲವು ಕಾಲಗಳ ಬಳಿಕ ನಡೆದ ಎಂಡೋ ಸೆಲ್ ಸಭೆ-ಎಂಡೋ ದುರಂತ ಬಾಧಿತರಿಗೆ ಸರಕಾರ ಎಲ್ಲಾ ನೆರವು ನೀಡುವುದು-ಸಚಿವ ಇ ಚಂದ್ರಶೇಖರನ್
   ಕಾಸರಗೋಡು: ಎಂಡೋ ಸಂಕಷ್ಟ ಅನುಭವಿಸುವ ಎಲ್ಲಾ ಸಂಕಷ್ಟಗಳ ನಿವಾರಣೆಗಳಿಗೆ ಸಹಾಯ ನೀಡುವ ಯಾವುದೇ ಯೋಜನೆಗಳನ್ನು ಸರಕಾರ ಮಾಡಿಯೇ ಸಿದ್ದ. ಈವರೆಗೆ ಯಾವೆಲ್ಲ ನೆರವು ನೀಡಲು ಘೋಷಿಸಿವೆಯೋ, ಅದರ ಜೊತೆಗೆ ಇನ್ನೇನು ಮಾಡಬಹುದಾಗಿದೆಯೋ ಅವೆಲ್ಲವನ್ನೂ ಪೂರೈಸಲು ಸರಕಾರ ಹಿಂದೇಟು ಹಾಕದು. ಸಂಕಷ್ಟ ಅನುಭವಿಸುವವರಿಗೆ ಒದಗಿಸಬಹುದಾದ ಗರಿಷ್ಠ ನೆರವನ್ನು ಸರಕಾರ ಈಗಾಗಲೇ ನೀಡುತ್ತಿದೆ. ಜೊತೆಗೆ ಮತ್ತೆ ಇನ್ನೇನು ಬೇಕೆಂಬುದನ್ನೂ ಸರಕಾರ ಸ್ಪಷ್ಟವಾಗಿ ಅರಿತಿದೆ ಎಂದು ರಾಜ್ಯ ಕಂದಾಯ ಸಚಿವ ಇ.ಚಂದ್ರಶಖರನ್ ತಿಳಿಸಿದರು.
   ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಭಾರೀ ಕಾಲಾವಧಿಯ ಬಳಿಕ ನಡೆದ ಎಂಡೋಸಲ್ಫಾನ್ ಸೆಲ್ ಸಭೆಯ ಬಳಿಕ ಎಂಡೋ ದುರಿತರ ನಿವೇದನೆಯನ್ನು ಸ್ವೀಕರಿಸಿ ಅವರು ಮಾತನಾಡಿದರು.
   ಎಂಡೋ ಸಂಕಷ್ಟ ಅನುಭವಿಸುವವರ ತಾಯಂದಿರ ಹಾಗೂ ಮಕ್ಕಳ ವಿಷಯದಲ್ಲಿ ಸರಕಾರ ಯಾವತ್ತೂ ಮೃದು ಧೋರಣೆಯನ್ನು ಅನುಸರಿಸಿ ನೆರವು ನೀಡುತ್ತಿದೆ. ಸಾಲ ಸ್ವೀಕರಿಸಿದವರ ಬಗ್ಗೆ ಸರಕಾರ ವಿಶೇಷ ನಿಲುವು ತಳೆದಿದೆ. ಸಾಲ ಮನ್ನಾಗೊಳಿಸಬೇಕಾದವರನ್ನು ಗುರುತಿಸಿ ಪರಿಶೀಲನೆ ನಡೆಸಿ ತೀಮರ್ಾನ ಕೈಗೊಳ್ಳಲಾಗುವುದೆಂದು ಸಚಿವರು ತಿಳಿಸಿದರು. ಮಕ್ಕಳ ಚಿಕಿತ್ಸಾ ನೆರವು ಸಹಿತ ಇತರ ವಿಷಯಗಳಲ್ಲಿ ಅಗತ್ಯ ತೀಮರ್ಾನಗಳನ್ನು ಸರಕಾರ ಶೀಘ್ರ ತಳೆಯಲಿದೆ ಎಂದ ಅವರು ಇತರ ಅಗತ್ಯದ ಕ್ರಮಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಿದೆ ಎಂದರು. ರಾಜ್ಯದ ಪ್ರಸ್ತುತ ಸರಕಾರ ಅಧಿಕಾರ ರೂಢಗೊಂಡ ಬಳಿಕ ಈವರೆಗೆ 57 ಕೋಟಿ ರೂ.ಗಳ ಸಹಾಯ ಧನವನ್ನು ಎಂಡೋಸಲ್ಫಾನ್ ದುರಂತ ಅನುಭವಿಸುವವರಿಗೆ ನೆರವಿಗಾಗಿ ಬಿಡುಗಡೆಗೊಳಿಸಿದೆ. ದಿನಗಳ ಹಿಂದೆ ಮಂಡಿಸಲ್ಪಟ್ಟ ರಾಜ್ಯ ಮುಂಗಡಪತ್ರದಲ್ಲೂ 50 ಕೋಟಿ ಕೂಗಳನ್ನು ಮತ್ತೆ ಮೀಸಲಿರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಇದೀಗ ಸಮಪರ್ಿಸಲಾದ ಹೊಸ ಅಪೇಕ್ಷೆಗಳನ್ನು ಪರಿಶೀಲಿಸಿ ಕ್ರಮ ಕ್ಯಗೊಳ್ಳಲಾಗುವುದೆಂದು ಸಚಿವರು ಭರವಸೆ ನೀಡಿದರು.
   ಎಂಡೋಸಲ್ಫಾನ್ ದುರಂತರ ಬಾಧಿತರ ಹೊಸ ಪಟ್ಟಿಯಲ್ಲಿ ಸೇರ್ಪಡೆಗೊಳ್ಳದಿರುವ 1618 ಮಂದಿ ಅರ್ಹರನ್ನು ಹೊಸ ಪಟ್ಟಿಗೆ ಸೇರ್ಪಡೆಗೊಳಿಸಲು ಕ್ರಿಯಾತ್ಮಕವಾಗ ಪರಿಶೀಲನೆ ನಡೆಸಲಾಗುವುದು. ಎಂಡೋ ಪೀಡಿತ 11 ಗ್ರಾಮ ಪಂಚಾಯತುಗಳಲ್ಲಿ ಪರಿಶೀಲನಾ ಕೇಂದ್ರ ಆರಂಭಿಸಲಾಗುವುದೆಂದು ಸಚಿವರು ತಿಳಿಸಿದರು.
   ಎಣ್ಮಕಜೆ, ಬದಿಯಡ್ಕ, ಬೆಳ್ಳೂರು, ಕುಂಬ್ಡಾಜೆ, ಕಾರಡ್ಕ, ಅಜಾನೂರು, ಕಳ್ಳಾರ್, ಕಯ್ಯೂರ್-ಚೀಮೇನಿ, ಮುಳಿಯಾರ್, ಪನತ್ತಡಿ, ಪುಲ್ಲೂರ್ ಪೆರಿಯ ಗ್ರಾಮ ಪಂಚಾಯತುಗಳಲ್ಲಿ ವಿಶೇಷ ಶಿಬಿರ ನಡೆಸಿ ಹೊಸತಾಗಿ ಪಟ್ಟಿಗೆ ಸೇರ್ಪಡೆಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದೆಂದು ಸಚಿವರು ವಿವರವಾದ ಮಾಹಿತಿ ನೀಡಿದರು. ಜ.22 ಹಾಗೂ 23 ರಂದು 12 ಗ್ರಾ.ಪಂ. ಕೇಂದ್ರೀಕರಿಸಿ ಪರಿಶೀಲನಾ ಶಿಬಿರ ನಡೆಯಲಿದೆ.
   ಜಿಲ್ಲಾಧಿಕಾರಿಗಳ ಕಾಯರ್ಾಲಯದಲ್ಲಿ ನಡೆದ ಸೆಲ್ ಸಭೆಯಲ್ಲಿ ಶಾಸಕರುಗಳಾದ ಎನ್.ಎ.ನೆಲ್ಲಿಕುನ್ನು, ಕೆ.ಕುಂಞಿರಾಮನ್, ಎಂ.ರಾಜಗೋಪಾಲನ್, ಜಿ.ಪಂ. ಅಧ್ಯಕ್ಷ ಎ.ಜಿ.ಸಿ.ಬಶೀರ್, ಜಿಲ್ಲಾಧಿಕಾರಿ ಜೀವನ್ ಬಾಬು ಕೆ, ಜಿಲ್ಲಾ ಕಂದಾಯ ಅಧಿಕಾರಿ ಸಿ.ಬಿಜು, ವಿವಿಧ ಬ್ಲಾಕ್, ಗ್ರಾ.ಪಂ. ಅಧ್ಯಕ್ಷರುಗಳ ಸಹಿತ ವಿವಿಧ ವಿಭಾಗದ ಅಧಿಕಾರಿಗಳು ಪಾಲ್ಗೊಂಡಿದ್ದರು. ಎಂಡೋ ಸೆಲ್ ನ ಜವಾಬ್ದಾರಿ ಹೊಂದಿರುವ ಉಪಜಿಲ್ಲಾಧಿಕಾರಿ ವಿ.ಪಿ.ಅಬ್ದುಲ್ ರಹಿಮಾನ್ ವರದಿ ವಾಚಿಸಿದರು.     

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries