HEALTH TIPS

No title

                 ಕನ್ನಡ ಸಂತ ಪುರುಷೋತ್ತಮರವರ ಅಭಿನಂದನಾ ಕಾರ್ಯಕ್ರಮಕ್ಕೆ ಭರದ ಸಿದ್ಧತೆ
   ಕಾಸರಗೋಡು: ಕನ್ನಡ ಯುವಬಳಗ ಕಾಸರಗೋಡು ಇದರ ನೇತೃತ್ವದಲ್ಲಿ ಅಪೂರ್ವ ಕಲಾವಿದರು ಕಾಸರಗೋಡು ಹಾಗೂ ಕಾಸರಗೋಡಿನ ಕನ್ನಡ ಪತ್ರಕರ್ತರ ಸಂಘದ ಸಹಯೋಗದೊಂದಿಗೆ  ಕನ್ನಡದ ಕಟ್ಟಾಳು, ಗಡಿನಾಡ ಕನ್ನಡ ಸಂತ, ಕಾಸರಗೋಡಿನ ಬಾಪು, ಶಿಕ್ಷಣ ತಜ್ಞ, ವಿಶ್ರಾಂತ ಮುಖ್ಯೋಪಾಧ್ಯಾಯ  ಬಿ. ಪುರುಷೋತ್ತಮ ಅವರ ಅಭಿನಂದನೆಗೆ ಕಾಸರಗೋಡಿನ ಕನ್ನಡ ಯುವಬಳಗದ ಭರದ ಸಿದ್ಧತೆ ನಡೆಯುತ್ತಿದೆ. ಕಾರ್ಯಕ್ರಮದ ಪೂರ್ವಭಾವಿ ಸಭೆ ಭಾನುವಾರ  ಕಾಳ್ಯಂಗೋಡಿನ ಸರಸ್ವತಿ ನಿಲಯದಲ್ಲಿ ಜರಗಿತು.
    ಸಭೆಯ ಅಧ್ಯಕ್ಷತೆ ವಹಿಸಿದ ರತ್ನಾಕರ ಮಲ್ಲಮೂಲೆ ಮಾತನಾಡಿ, ಕಳ್ಳಿಗೆ ಮಹಾಬಲ ಭಂಡಾರಿ, ಯು. ಪಿ. ಕುಣಿಕುಳ್ಳಾಯರಂತೆ ತಮ್ಮ ವೈಯಕ್ತಿಕ ಬದುಕಿನ ಸುಖಸೌಖ್ಯಗಳನ್ನು ಕಡೆಗಣಿಸಿ ಕಾಸರಗೋಡಿನ ಕನ್ನಡಿಗರಿಗಾಗಿ ದುಡಿದವರು ಬಿ. ಪುರುಷೋತ್ತಮರವರು. ಕಳ್ಳಿಗೆ, ಕುಣಿಕುಳ್ಳಾಯರ ಬಳಿಕ  ಮುಂದೇನು ಎಂಬ ಪ್ರಶ್ನೆ ಕಾಸರಗೋಡಿನ ಕನ್ನಡಿಗರ ಮುಂದೆ ಬಂದಾಗ ತಮ್ಮ ಕ್ರಿಯಾತ್ಮಕ ಕನ್ನಡ ಚಟುವಟಿಕೆಗಳ ಮೂಲಕ ಕಳ್ಳಿಗೆ, ಕುಣಿಕುಳ್ಳಾಯರ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವವರು  ಪುರುಷೋತ್ತಮರು.
    ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದಂತಹ ಮಹತ್ತರ ಸಂಘ-ಸಂಸ್ಥೆಗಳನ್ನು ಸ್ಥಾಪಿಸಲು  ಮುಖ್ಯ ಕಾರಣರಾದವರು ಪುರುಷೋತ್ತಮರವರು. ಮಾತ್ರವಲ್ಲ ಕಾಸರಗೋಡು ಜಿಲ್ಲೆಯಾದ್ಯಂತ ಇರುವ  ಕನ್ನಡ ಶಾಲೆ-ಕಾಲೇಜುಗಳ  ಕನ್ನಡ ಭಾಷಾ ಅಧ್ಯಾಪಕರಲ್ಲಿ ಬಹುತೇಕರು  ಪುರುಷೋತ್ತಮರವರ ಶಿಷ್ಯರು. ಈ ಮಣ್ಣಿನ ಭಾಷೆ, ಸಾಹಿತ್ಯ, ಸಂಸ್ಕೃತಿ ಉಳಿಸಬೇಕಾದರೆ  ಮುಖ್ಯವಾಗಿ  ಕ್ರಿಯಾತ್ಮಕ ಚಟುವಟಿಕೆಗಳು ನಡೆಯಬೇಕು. ಸಮ್ಮೇಳನಗಳು, ಪುಸ್ತಕ ಪ್ರದರ್ಶನಗಳು, ಅಭಿನಂದನೆಗಳು ಅದಕ್ಕೆ ಪೂರಕ ಮಾತ್ರ. ಆದರೆ  ಕನ್ನಡಕ್ಕೆ ಅಪಚಾರವಾದಗಲೆಲ್ಲ  ತಕ್ಷಣ ಸಂಬಂಧಪಟ್ಟವರಲ್ಲಿ ಮನವಿ ಮೂಲಕ, ಭೇಟಿಯ ಮೂಲಕ ಎಚ್ಚರಿಸುವಲ್ಲಿ  ಇಲ್ಲಿನ ಪ್ರತಿಯೊಬ್ಬ ಕನ್ನಡಿಗನು ತಮ್ಮನ್ನು ತಾವು  ತೊಡಗಿಸಿಕೊಳ್ಳದಿದ್ದರೆ ಇತರ ಕನ್ನಡ ಚಟುವಟಿಕೆಯಿಂದ ಪ್ರಯೋಜನವಿಲ್ಲ ಎಂಬುದು ಇಲ್ಲಿನ ಕನ್ನಡ ಸಮಸ್ಯೆಯ ವಾಸ್ತವ. ಕನ್ನಡಕ್ಕಾಗುವ ಸಮಸ್ಯೆಯೊಂದು ತಿಳಿದ ತಕ್ಷಣ  ಹಗಲು ಇರುಳೆನ್ನದೆ  ತನ್ನ ಕುಟುಂಬ, ತನ್ನ ವೈಯಕ್ತಿಕ ಕೆಲಸಕಾರ್ಯಗಳನ್ನು ಕಡೆಗಣಿಸಿ  ತಕ್ಷಣ ಅದಕ್ಕಾಗಿ ಕೆಲಸ ಮಾಡಿದವರು ಪುರುಷೋತ್ತಮರು.  ಆದಕಾರಣ ಕಳ್ಳಿಗೆ, ಕುಣಿಕುಳ್ಳಾಯರ  ನಂತರ ಯಾರು ಎಂಬ ಪ್ರಶ್ನೆಗೆ ಪುರುಷೋತ್ತಮರು ಎಂಬ ಉತ್ತರಕ್ಕೆ ಯಾವ ಸಂದೇಹವೂ ಇಲ್ಲ. ಆದರೆ  ಪುರುಷೋತ್ತಮರ ಸೇವೆಗೆ  ತಕ್ಕ ಮಾನ್ಯತೆ ಇದುವರೆಗೆ  ಸಿಕ್ಕಿಲ್ಲ. ಇಂದು ವಯೋಸಹಜವಾದ  ಅನಾರೋಗ್ಯದಿಂದ ಅವರು ಬಳಲುತ್ತಿದ್ದಾರೆ. ಕಾಸರಗೋಡಿನ ಕನ್ನಡಿಗರ ನಾಳೆಗಾಗಿ  ದುಡಿದ ಈ ಮಹಾತ್ಮನ ಸೇವೆಯನ್ನು  ಇನ್ನಾದರೂ ತಿಳಿಯದವರಿಗೆ  ತಿಳಿಸದೆ ಹೋದರೆ  ಅದು ಕನ್ನಡಕ್ಕಾಗುವ ಅಪಚಾರ. ಯಾವುದೇ ಆಡಂಬರ ಇಲ್ಲದೆ ಕಾಸರಗೋಡಿನ ಕನ್ನಡ ವಿದ್ಯಾಥರ್ಿಗಳು, ಯುವಕರ ನೇತೃತ್ವದಲ್ಲಿ  ನಡೆಯಲಿರುವ ಈ ಸರಳ ಅಭಿನಂದನೆ ಕಾರ್ಯಕ್ರಮ  ಮುಂದೆ ಅವರ ಸಾಧನೆಗಳ ಕುರಿತು ದಾಖಲಾತಿ ಮಾಡುವ  ಮಹಾತ್ಕಾರ್ಯಕ್ಕೆ ಮುನ್ನುಡಿಯಾಗಬೇಕು. ಪುರುಷೋತ್ತಮರು ಎನು ಎಂಬುದಕ್ಕೆ ಉತ್ತರವಾಗಬೇಕು.  ಕಾಸರಗೋಡಿನ ಸಮಸ್ತ ಕನ್ನಡ ಜನತೆಗೆ ಮಾದರಿಯಾಗಬಲ್ಲ  ಈ ವ್ಯಕ್ತಿತ್ವವನ್ನು ಅನುಸರಿಸುವ  ಒಮದಿಬ್ಬರಾದರೂ ಸೃಷ್ಟಿಯಾಗಬೇಕು. ಹಾಗಾದ್ದಲ್ಲಿ ಈ ಕಾರ್ಯಕ್ರಮ ಸಾರ್ಥಕ ಎಂದರು.
   ಕನ್ನಡ ಅಧ್ಯಾಪಕ ಸಂಘ ಸ್ಥಾಪನೆಗಾಗಿ ಪುರುಷೋತ್ತಮರೊಂದಿಗೆ  ದುಡಿದವರೂ, ಜಿಲ್ಲಾ ಶಿಕ್ಷಣಾಕಾರಿಯಾಗಿ ನಿವೃತ್ತರಾಗಿರುವ ಎನ್. ಕೆ. ಮೋಹನ್ದಾಸ್ ಮಾತನಾಡಿ, ಪುರುಷೋತ್ತಮ ಅವರು  ಕಾಸರಗೋಡಿನ ಕನ್ನಡ ಅಧ್ಯಾಪಕ  ಬಂಧುಗಳನ್ನು  ಒಗ್ಗೂಡಿಸುವ  ದೃಷ್ಟಿಯಿಂದ ಬಹಳಷ್ಟು  ಪ್ರಾರಂಭದಲ್ಲಿ  ಕೇರಳ  ಸ್ಟೇಟ್  ಗವನರ್್ಮೆಂಟ್ ಸ್ಕೂಲ್ ಕನ್ನಡ ಮೀಡಿಯಂ ಟೀಚಸರ್್ ಫಾರಂ ಎಂಬ ಸಂಘಟನೆಯನ್ನು ಸ್ಥಾಪಿಸಿ  1990ರಿಂದ 1997ರ ವರೆಗೆ  ಅನೇಕ ಅಧ್ಯಾಪಕರನ್ನು ಸೇರಿಸಿಕೊಂಡು ಸರಕಾರಿ ವಲಯದಲ್ಲಿರುವ ಕನ್ನಡಿಗರ ಸವಲತ್ತುಗಳ ಬಗ್ಗೆ ಮತ್ತು ಅದರೊಂದಿಗೆ  ಸಾರ್ವಜನಿಕ ವಲಯದಲ್ಲಿರುವ ಕನ್ನಡಿಗರ ಸಮಸ್ಯೆಗಳ ಬಗ್ಗೆ ನಿರಂತರ  ಪತ್ರವ್ಯವವಹಾರವನ್ನು ಮಾಡಿಕೊಂಡು ಅನೇಕ ಆದೇಶ ಮತ್ತು ಸುತ್ತೋಲೆಗಳನ್ನು ಪೂರ್ಣರೂಪಕ್ಕೆ ಜಾರಿಗೆ ತರಲು  ಅವರಿಂದ ಸಾಧ್ಯವಾಗಿದೆ. 1997  ಆಗಸ್ಟ್ ತಿಂಗಳಲ್ಲಿ ಜರಗಿದ ಕಾಸರಗೋಡು  ಜಿಲ್ಲಾಕಾರಿ ಕಚೇರಿ ಜಾಥಾ  ಸಂದರ್ಭದಲ್ಲಿ  ಕನ್ನಡ ಮಾಧ್ಯಮ ಅಧ್ಯಾಪಕರ ತಾತ್ಕಾಲಿಕ ಸಮಿತಿಗೆ ಪೂರ್ಣ ಮಾರ್ಗದರ್ಶಕರಾಗಿದ್ದರು. ಈ  ಜಿಲ್ಲಾಕಾರಿ ಜಾಥಾದ ಬಳಿಕ  ಕನ್ನಡ ಮಾಧ್ಯಮ ಅಧ್ಯಾಪಕರು ಸೇರಿ  ಒಂದು ಶಾಶ್ವತ ಸಂಘಟನೆ ರಚಿಸಬೇಕು ಎಂದು ಪ್ರಯತ್ನಿಸಿದ ಮಹಾನುಭಾವರು ಅವರಾಗಿದ್ದಾರೆ. ಇದರ ಪರಿಣಾಮವಾಗಿ  ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಉದಯವಾಗಿ  ಮೊದಲ ಬಾರಿಗೆ  ಮಂಜೇಶ್ವರ ಕಾಲೇಜಿನ ಪ್ರಾಧ್ಯಾಪಕರಾಗಿದ್ದ  ಬಿ. ಸದಾಶಿವ ಅಧ್ಯಕ್ಷರಾಗಿಯೂ, ಎನ್. ಕೆ. ಮೊಹನ್ದಾಸ್ ಪ್ರಧಾನ ಕಾರ್ಯದಶರ್ಿಯಾಗಿಯೂ  ಆಯ್ಕೆಗೊಂಡು ಅಧ್ಯಾಪಕರ ಸಂಘ ಉದಯವಾಯಿತು. ಈ ಸಂಘಟನೆಯು  ನ. 15 1997ರಂದು  ನೋಂದಣಿ ಸಂಘಟನೆಯಾಯಿತು. ಅಲ್ಲಿಂದ ಪ್ರಾರಂಭವಾಗಿ 2014 ಮಾಚರ್್ ವರೆಗೆ ಕನ್ನಡ ಮಾಧ್ಯಮ ಅದ್ಯಾಪಕ ಸಂಘಟನೆಯ ಪ್ರತಿಯೊಂದು ಕಾರ್ಯಕ್ರಮದಲ್ಲೂ ಕೇಂದ್ರ ಸಮಿತಿಯ ಹೆಚ್ಚಿನ ಎಲ್ಲ ಸಭೆಗಳಲ್ಲೂ ಉಪಸ್ಥಿತರಿದ್ದು, ಸಂಘಟನೆಯನ್ನು ಉತ್ತಮ ರೀತಿಯಲ್ಲಿ ಕೊಂಡೊಯ್ಯಲು  ಪದಾಕಾರಿಗಳಿಗೆ ಸರ್ವ ವಿಧದ ಮಾರ್ಗದರ್ಶನ ನೀಡುತ್ತಿದ್ದರು. 1998ರಿಂದ ಪ್ರಾರಂಭಗೊಂಡು ಆರು ವರ್ಷಗಳ ಕಾಲ ಸುದೀರ್ಘವಾದ  ಪರಿಶ್ರಮದಿಂದ 2004 ಫೆಬ್ರವರಿಯಲ್ಲಿ  ಕೇರಳ ಸರಕಾರದ ಮಾನ್ಯತೆ ಈ ಸಂಘಟನೆಗೆ ದೊರಕಿತು. ಇದರ ಹಿಂದೆ  ದುಡಿದವರಲ್ಲಿ ಪುರುಷೊತ್ತಮರ ಪಾತ್ರ ಪ್ರಮುಖವಾದುದು. ಈ ಸಂಘಟನೆಯು  1998ರಂದು ಪ್ರಥಮವಾಗಿ ಹೊರಡಿಸಿದ ವಾಷರ್ಿಕ ಸಂಚಿಕೆಗೆ `ಅಧ್ಯಾಪಕ ಧ್ವನಿ' ಎಂದು ಹೆಸರನ್ನು ನೀಡಿ ಪ್ರತಿವರ್ಷವೂ  ಈ ಸಂಚಿಕೆ ಹೊರಬರುವಂತೆ  ಮಾರ್ಗದರ್ಶನ ನೀಡಿದ ವ್ಯಕ್ತಿಯಾಗಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಅವರ ಉಪಸ್ಥಿತಿಯಲ್ಲಿ  2002 ಮಾ. 2ರಂದು ಕನ್ನಡ ಮಾಧ್ಯಮ ಅಧ್ಯಾಪಕ ಸಂಘ ಮೊದಲ ಬಾರಿಗೆ ಸಂಯೋಜಿಸಿದ ರಾಜ್ಯಮಟ್ಟದ ಕನ್ನಡ ಮಾಧ್ಯಮ ಶೈಕ್ಷಣಿಕ ಸಮಾವೇಶದ ಯಶಸ್ಸಿಗೆ ಪುರುಷೋತ್ತಮ ಮಾಸ್ತರ್ ಕಾರಣರಾಗಿದ್ದರು. ಈ ಸಂದರ್ಭ ಪ್ರಕಟವಾದ  `ಅಧ್ಯಾಪಕ ಧ್ವನಿ' ಸ್ಮರಣ ಸಂಚಿಕೆಯಲ್ಲಿ  ಕಾಸರಗೋಡಿನ ಕನ್ನಡಿಗರ ಸಮಸ್ಯೆಗಳ ಬಗ್ಗೆ  ಸಮಗ್ರ ಲೇಖನಗಳಿವೆ. ಒಬ್ಬ ವ್ಯಕ್ತಿತನ್ನ ವಿಶ್ರಾಂತ ಜೀವನ ಪ್ರಾರಂಭದ ನಂತರ ಇಂತಹ ಒಂದು ಪ್ರಬಲ ಸಂಘಟನೆ ಸ್ಥಾಪಿಸಲು, ಅದನ್ನು ಉತ್ತಮ ರೀತಿಯಲ್ಲಿ ಕೊಂಡೊಯ್ಯಲು ಮತ್ತು ಕಾಸರಗೋಡು ಜಿಲ್ಲೆಯ ಎಲ್ಲ ಕನ್ನಡ ಮಾಧ್ಯಮ ಅಧ್ಯಾಪಕರಿಗೆ ಮತ್ತು ವಿದ್ಯಾಥರ್ಿಗಳಿಗೆ ಸಹಾಯಕವಾಗುವ ಒಂದು ಸಂಘಟನೆಗೆ ಪುರುಷೋತ್ತಮರು ಚೈತನ್ಯಮೂತರ್ಿಯಾಗಿರುತ್ತಾರೆ ಎಂದರು.
   ಕನ್ನಡ ಸಮನ್ವಯ ಸಮಿತಿ  ಸಂಚಾಲಕ ಜೋಗೇಂದ್ರನಾಥ್  ವಿದ್ಯಾನಗರ ಮಾತನಾಡಿ, ಆಡಳಿತ ಭಾಷೆ ಕಡ್ಡಾಯವಾದಾಗ, ಭಾಷಾ ಮಸೂದೆ ಜಾರಿಯಾಗುವ ಸಂದರ್ಭ, ಡಾ. ಪ್ರಭಾಕರನ್ ಆಯೋಗ ಕಾಸರಗೋಡಿಗೆ ಬಂದಾಗ ಕನ್ನಡಿಗರ ಮೂಲಭೂತ  ಸವಲತ್ತುಗಳನ್ನು ಸಂರಕ್ಷಿಸಬೇಕು ಎಂದು ಪಟ್ಟುಹಿಡಿದ ಪುರುಷೋತ್ತಮರು ತಮ್ಮೆಲ್ಲವನ್ನು  ಕನ್ನಡಕ್ಕಾಗಿ ಮುಡಿಪಾಗಿಟ್ಟವರು. ಕ್ರಿಯಾತ್ಮಕ ಚಟುವಟಿಕೆಯಿಂದ ಮಾತ್ರ  ಕನ್ನಡ ಉಳಿಸಲು ಸಾಧ್ಯ ಎಂದು ಬಲವಾಗಿ ನಂಬಿದ ಅವರು  ಅದರಲ್ಲಿ ಯಶಸ್ವಿಯಾದರು. ಕಾಸರಗೋಡಿನ ಕನ್ನಡಿಗರು ಅನುಭವಿಸುತ್ತಿರುವ ಹಲವಾರು ಸವಲತ್ತುಗಳಿಗೆ  ಕಳ್ಳಿಗೆ, ಕುಣಿಕುಳ್ಳಾಯರು ಹೇಗೆ ಕಾರಣರೋ ಹಾಗೆಯೇ  ಪುರುಷೋತ್ತಮರು ಕಾರಣ ಎಂದರು.
   ಫೆ. 25ರಂದು ಬೆಳಿಗ್ಗೆ 9.30ರಿಂದ  ಸಂಜೆ 4 ಗಂಟೆ ವರೆಗೆ ನಡೆಯಲಿರುವ  ಕಾರ್ಯಕ್ರಮದ ರೂಪುರೇಖೆಯನ್ನು ಸಭೆಯಲ್ಲಿ  ತೀಮರ್ಾನಿಸಲಾಯಿತು.  ಕಾಸರಗೋಡಿನ ಸಮಸ್ತ ವಿದ್ಯಾಥರ್ಿ ಸಂಘಟನೆಗಳನ್ನು  ಆಹ್ವಾನಿಸಿ ಅವರಿಗೆ  ಪುರುಷೋತ್ತಮರ ಸಾಧನೆ ತಿಳಿಸುವ ಪ್ರಯತ್ನ ಮಾಡುವ ಕುರಿತು  ಯೋಜನೆ ಹಾಕಿಕೊಳ್ಳಲಾಯಿತು, ಕನ್ನಡ ಯುವಬಳಗದ ಕಾರ್ಯದಶರ್ಿ ರಾಜೇಶ್ ಪಿ. ಎಸ್., ವಿನೋದ್ ಕುಮಾರ್ ಸಿ. ಎಚ್., ಸೌಮ್ಯ ಪ್ರಸಾದ್, ಅಬ್ದುಲ್ ರಶೀದ್, ಸುಜಿತ್ ಕುಮಾರ್, ಕೀರ್ತನ್ ಕುಮಾರ್ ಸಿ. ಎಚ್., ಸ್ವಾತಿ ಕೆ. ವಿ. ಸರಳಿ, ಅಮೃತಾ ಕೆ. ಎಸ್., ಗಣೇಶ್  ಕೋಟೆಕಣಿ,  ಪ್ರದೀಪ್ ಕುಮಾರ್ ಬಿ. ಎಸ್., ಸುಜಾತ ಸಿ. ಎಚ್., ಹರಿಕಿರಣ್ ಎಚ್., ಅಜಿತ್ ಶೆಟ್ಟಿ,  ರಂಗನಾಥ ಕೂಡ್ಲು ಮತ್ತಿತರರು ಸಭೆಯಲ್ಲಿ ಮಾತನಾಡಿದರು. ಕನ್ನಡ ಯುವಬಳಗದ ಸಂಚಾಲಕ  ರಕ್ಷಿತ್ ಪಿ. ಎಸ್. ಸ್ವಾಗತಿಸಿದರು. ಸಹಸಂಚಾಲಕ ಪ್ರಶಾಂತ್ ಹೊಳ್ಳ ವಂದಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries