ಯಕ್ಷತೂಣೀರ ಸಂಪ್ರತಿಷ್ಠಾನ ತೃತೀಯ ವಾಷರ್ಿಕೋತ್ಸವ
ಮುಳ್ಳೇರಿಯ: ಮುಳಿಯಾರಿನ ಯಕ್ಷತೂಣೀರ ಸಂಪ್ರತಿಷ್ಠಾನದ ತೃತೀಯ ವಾಷರ್ಿಕೋತ್ಸವ ಫೆ.11 ರಂದು ಸಂಜೆ 4 ರಿಂದ ನೆಕ್ರಂಪಾರೆಯ ಸ್ಕಂದ ಕೈಗಾರಿಕಾ ಸಂಸ್ಥೆಯ ವಠಾರದ ಕಾತರ್ಿಕೇಯ ಸಭಾಂಗಣದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಯಕ್ಷತೂಣೀರ - 2018 ಸಕಾಲಿಕ ಸಂಚಿಕೆ ಮತ್ತು ಯಕ್ಷಗಾನ ಕೃತಿ ಸೌಭಾಗ್ಯ ಸುಂದರಿ ಬಿಡುಗಡೆ ಮತ್ತು ಆಶೀರ್ವಚನವನ್ನು ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರು ನೀಡುವರು. ವಿದ್ವಾನ್ ರಾಜಗೋಪಾಲ ಪುಣಿಂಚತ್ತಾಯ ಅಧ್ಯಕ್ಷತೆ ವಹಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕ ಚಂದ್ರಹಾಸ ರೈ ಬಿ. ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು. ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದ ಪ್ರಬಂಧಕ ಸೀತಾರಾಮ ಬಳ್ಳುಳ್ಳಾಯ ಅತಿಥಿಯಾಗಿ ಉಪಸ್ಥಿತರಿರುವರು. ಕಲಾ ಪೋಷಕ ವೇಣುಗೋಪಾಲ ತತ್ವಮಸಿ ಶುಭಾಶಂಸನೆಗೈಯ್ಯುವರು. ಹಿರಿಯ ಕನ್ನಡ ಹೋರಾಟಗಾರ ಎಂ.ವಿ.ಬಳ್ಳುಳ್ಳಾಯ, ಹಿರಿಯ ಯಕ್ಷಗಾನ ಕಲಾವಿದರಾದ ರಾಧಾಕೃಷ್ಣ ಭಟ್ ಎ, ಗೋವಿಂದ ಬಳ್ಳಮೂಲೆ ಅವರನ್ನು ಸಮ್ಮಾನಿಸಲಾಗುವುದು. ಅನೂಪ್ ರಮಣ ಎನ್.ಎಂ. ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು. ಸಂಜೆ 6 ರಿಂದ ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಮಂಡಳಿಯಿಂದ ಭಸ್ಮಾಸುರ ಮೋಹಿನಿ - ಗಜೇಂದ್ರ ಮೋಕ್ಷ ಕಾಲಮಿತಿಯ ಯಕ್ಷಗಾನ ಬಯಲಾಟ ಜರಗಲಿದೆ.