ರಂಗಕುಟೀರದಿಂದ ಹೊಸದುರ್ಗದಲ್ಲಿ ಯಕ್ಷಗಾನ ಪ್ರದರ್ಶನ
ಕುಂಬಳೆ: ಆಧುನಿಕ ವೈಜ್ಞಾನಿಕ ಯುಗದ ಯಾಂತ್ರಿಕ ಬದುಕಿನ ಮಧ್ಯೆ ಪರಂಪರೆಯ ದ್ಯೋತಕಗಳಾದ ಯಕ್ಷಗಾನದಂತಹ ಸಾಂಸ್ಕೃತಿಕತೆಗೆ ಯುವ ಸಮೂಹ ಆಸಕ್ತಿಯಿಂದ ತೊಡಗಿಸಿಕೊಳ್ಳಬೇಕು. ಗಡಿನಾಡು ಕಾಸರಗೋಡಿನ ಕನ್ನಡ ಭಾಷೆ, ಯಕ್ಷಗಾನ ಕಲೆಗೆ ನೀಡಿರುವ ಮಹತ್ವಪೂರ್ಣ ಕೊಡುಗೆಗಳು ಸಮಗ್ರ ಕನರ್ಾಟಕದ ಹೆಮ್ಮೆ ಎಂದು ಚಿತ್ರದುರ್ಗದ ಶಾಸಕ ಬಿ.ಜಿ.ಗೋವಿಂದ ಪ್ರಸಾದ್ ತಿಳಿಸಿದರು.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ರಾಗ ಸುಹಾಸ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಏಣಗಿ ಬಾಳಪ್ಪ ನೆನಪಿನಂಗಳದ "ಶಿಶಿರ ರಾಗ ಸಂಗೀತೋತ್ಸವ 2018 ಎಂಬ ವಿನೂತನ ಕಾರ್ಯಕ್ರಮವನ್ನು ಹೊಸದುರ್ಗ ಗಣೇಶ ಸದನದಲ್ಲಿ ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕನರ್ಾಟಕ ನಾಟಕ ಅಕಾಡೆಮಿಯ ನಿಕಟಪೂರ್ವ ಸದಸ್ಯ ಎಂ.ಉಮೇಶ್ ಸಾಲ್ಯಾನ್ ಕಾಸರಗೋಡು ಮಾತನಾಡಿ, ಕಂಪ್ಯೂಟರ್-ಅಂತಜರ್ಾಲಗಳಲ್ಲಿ ಮುಳುಗಿ ಮನಸ್ಸನ್ನು ಮುದುಡಿಸಿಕೊಂಡಿರುವ ಹೊಸ ತಲೆಮಾರಿಗೆ ಸಂಸ್ಕೃತಿ, ಜೀವನ ಪ್ರೀತಿ, ಸಂಬಂಧಗಳ ಮಹತ್ವಗಳನ್ನು ತಿಳಿಯಪಡಿಸುವ ಯಕ್ಷಗಾನದಂತಹ ಮನಸ್ಸು ಅರಳಿಸುವ ಕಲಾಪ್ರಕಾರಗಳ ಆಸಕ್ತಿ ಮೂಡಿಸುವ ಯತ್ನಗಳು ವಿಸ್ತರಿಸಬೇಕು. ಆತ್ಮಹತ್ಯೆ, ಕೊಲೆಗೆಡುಕುತನದಂತಹ ಕುಕೃತ್ಯಗಳಿಗೆ ಎಳಸುವ ಮನಸ್ಸುಗಳಿಗೆ ಮಹೋನ್ನತ ಕಲಾಪ್ರಕಾರವಾದ ಯಕ್ಷಗಾನ ಪ್ರದರ್ಶನವನ್ನು ವೀಕ್ಷಿಸಲು ಅವಕಾಶ ದೊರೆತಲ್ಲಿ ಬದಲಾವಣೆಗೆ ಸಾಧ್ಯತೆಗಳಿದ್ದು, ಅಂತಹ ಶಕ್ತಿ ಈ ಕಲೆಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಕಾಸರಗೊಡಿನ ರಂಗಕುಟೀರ ಸಂಘವು ಚಂದ್ರಹಾಸ ಕಯ್ಯಾರು ನೇತೃತ್ವದಲ್ಲಿ "ವೀರ ಅಭಿಮನ್ಯು" ಪ್ರಸಂಗದ ಯಕ್ಷಗಾನ ಬಯಲಾಟ ಪ್ರದರ್ಶನವನ್ನು ನೀಡಿ ಗಮನ ಸೆಳೆದರು. ತಂಡದಲ್ಲಿ ಚಂದ್ರಹಾಸ ಕಯ್ಯಾರು, ಚೇವಾರು ಶಂಕರ ಕಾಮತ್, ರಾಜಾರಾಮ ಬಲ್ಲಾಳ್ ಚಿಪ್ಪಾರು, ಶ್ರಾವ್ಯಾ ಕುಬಣೂರು, ಹಾಗೂ ರಕ್ಷಾ ಕಾಮತ್ ಭಾಗವಹಿಸಿದ್ದರು.
ವೇದಿಕೆಯಲ್ಲಿ ರಂಗಸುಹಾಸ ದ ಕಾರ್ಯದಶರ್ಿ ಮಲ್ಲಯ್ಯಶ್ರೀಮಠ, ಜಿಲ್ಲಾ ಪಂಚಾಯತು ಸದಸ್ಯ ಕೆ.ಅನಂತ್, ಪ್ರಶಸ್ತಿ ಪುರಸ್ಕೃತ ಕಲಾವಿದ ಜಿ.ಎಸ್.ಶಂಕರಮೂತರ್ಿ ಭದ್ರಾವತಿ, ರಂಗಕಮರ್ಿ ಮಲ್ಲಿಕಾಜರ್ುನ ಮಹಾಮನೆ, ಕೆ.ರೇವಣ್ಣ, ಗುಬ್ಬಿ ಪ್ರಕಾಶ್, ಚಲನಚಿತ್ರ ನಿದರ್ೇಶಕ ರಾಧಾಕೃಷ್ಣ ಪಲ್ಲಕ್ಕಿ, ಬಾಲವಿಕಾಸ ಅಕಾಡೆಮಿ ಸದಸ್ಯ ನಾಗತೀಹಳ್ಳಿ ಮಂಜುನಾಥ ಮೊದಲಾದವರು ಉಪಸ್ಥಿತರಿದ್ದರು.