HEALTH TIPS

No title

              ಮಕ್ಕಳು ಆಟ ಪಾಠಗಳೊಂದಿಗೆ ಬೆಳೆಯಲಿ-ಡಾ.ಭಾಗ್ಯಲಕ್ಷ್ಮಿ
   ಬದಿಯಡ್ಕ: ಮಕ್ಕಳು ಅಳು-ನಗುವಿನೊಂದಿಗೆ ಸಹಜವಾಗಿಯೇ ಬೆಳೆದುಬರಬೇಕು. ಅಳಬೇಕಾದಾಗ ಅಳಬೇಕು. ನಗಬೇಕಾದಾಗ ನಗಬೇಕು. ಆ ಸ್ವಾತಂತ್ರ್ಯ ಅವರಿಗೆ ಕೊಡಬೇಕು. ಹೆತ್ತವರ ಕೈಗೊಂಬೆಯಾಗಿ ಅವರ ಕನಸುಗಳನ್ನು ಸಾಕಾರಗೊಳಿಸುವ ಮಾಧ್ಯಮ ಮಾತ್ರವಾಗಿ ಮಕ್ಕಳನ್ನು ಬೆಳೆಸಬಾರದು. ಬಾಲ್ಯವನ್ನು ಅನುಭವಿಸುವ, ಆ ಸವಿನೆನಪುಗಳನ್ನು ಜೀವನದುದ್ದಕ್ಕೂ ಕೊಂಡೊಯ್ಯುವ ಅವಕಾಶವನ್ನು ಅವರಿಗೂ ನೀಡಬೇಕು ಎಂದು ಹೆಸರಾಂತ ಲೇಖಕಿ ಡಾ.ಭಾಗ್ಯಲಕ್ಷ್ಮಿ ಅಭಿಪ್ರಾಯ ವ್ಯಕ್ತಪಡಿಸಿದರು.
   ಅವರು ಚೆಂಗಳ ಪಿಲಾಂಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗಾಗಿ ಏರ್ಪಡಿಸಿದ್ದ ವರ್ಣಂ-2018 ದ್ವಿದಿನ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿ  ಭಾಗವಹಿಸಿ ಮಾತನಾಡಿದರು. 
ನಾವು ಕಲಿಸುವ ಉತ್ತಮ ಸಂದೇಶಗಳು, ತೋರುವ ಕಾಳಜಿ ಹಾಗೂ ಸಮಾಜದಲ್ಲಿ ಇತರ ಮಕ್ಕಳೊಂದಿಗೆ ಹಾಗೂ ಗುರುಹಿರಿಯರೊಂದಿಗೆ ಹೇಗೆ ನಡೆದುಕೊಳ್ಳಬೇಕೆಂಬ ಪಾಠ ಮಕ್ಕಳ ವ್ಯಕ್ತಿತ್ವವನ್ನು ರೂಪಿಸುತ್ತದೆ.  ಸ್ಪಧರ್ಾತ್ಮಕ ಇಂದಿನ ಯುಗದ ಸ್ಪಧರ್ೆಗಳಲ್ಲಿನ ಸೋಲುಗೆಲುವನ್ನು ಒಂದೇ ತಕ್ಕಡಿಯಲ್ಲಿ ತೂಗುವ ಗುಣವನ್ನು ಹೆತ್ತವರು ಪಾಲಿಸಿದಾಗ ಮಕ್ಕಳು ನಿರಾಳತೆಯನ್ನು ಹೊಂದಲು ಸಾಧ್ಯ. ಇತರ ಮಕ್ಕಳೊಂದಿಗೆ ತಮ್ಮ ಮಕ್ಕಳನ್ನು ಹೋಲಿಸಿ, ಹೀಯಾಳಿಸಿ ತಮ್ಮ ಮಕ್ಕಳ ಮಾನಸಿಕ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮವನ್ನುಂಟುಮಾಡುವ ಹವ್ಯಾಸ ಕೊನೆಗೊಳ್ಳಬೇಕು ಎಂದು ಅವರು ಸಲಹೆಯನಿತ್ತರು.
  ಚೆಂಗಳ ಗ್ರಾಮ ಪಂಚಾಯತು ಅಧ್ಯಕ್ಷ ಶಾಹಿನಾ ಸಲೀಮ್. ಉಪಾಧ್ಯಕ್ಷ ಶಾಂತಕುಮಾರಿ.ಸ್ಥಾಯಿ ಸಮಿತಿ ಅಧ್ಯಕ್ಷ ಹಾಜಿರ, ಎ.ಅಹಮ್ಮದ್ ಹಾಜಿ, ಅಬ್ದುಲ್ ಕುಂಞಿ ಕೋಳಾರಿ, ತಾಹಿರ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮರೀಟಿಯ ಅಬ್ರಹಾಮ್,ಬಿಅರ್.ಸಿಯ ಕಾಸಿಂ ಜಿ.ಜೆ.,  ಶಾಲಾ ಮುಖ್ಯೋಪಾಧ್ಯಾಯ ಪ್ರಕಾಶ್, ನಿರ್ಮಲ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.ಕಾರ್ಯಕ್ರಮದ ಕೊನೆಯಲ್ಲಿ ಶಿಬಿರದ ಭಾಗವಾಗಿ ಪುಟಾಣಿ ಮಕ್ಕಳಿಂದ ಬಾನಂಗಳದಲ್ಲಿ ಬಣ್ಣ ಬಣ್ಣದ ಕನಸುಗಳನ್ನು ತುಂಬುವ ಬಣ್ಣದ ಚಿತ್ತಾರ ಬರೆದ ಗಾಳಿಪಟಗಳನ್ನು ಹಾರಿಸಲಾಯಿತು.
 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries