ಸಂಸ್ಕಾರ ಕಲಿಸುವ ಬಾಲಗೋಕುಲಗಳು ಅಗತ್ಯ-ವೇ.ಮೂ.ಶಿವರಾಮ ಭಟ್
ಬದಿಯಡ್ಕ : ನಮ್ಮ ಸಂಸ್ಕಾರ, ಆಚರಣಾ ಪದ್ಧತಿಗಳನ್ನು ಅಥರ್ೈಸಿಕೊಂಡು ಜೀವನವನ್ನು ಮಾಡಬೇಕು. ಆಚರಣೆಗಳು ಕುಂಠಿತವಾಗದೆ ಸರಿಯಾದ ತಿಳುವಳಿಕೆಯಿಂದ ಸನಾತನ ಧರ್ಮಕ್ಕೆ ಚ್ಯುತಿಬಾರದಂತೆ ಸಂಸ್ಕಾರವಂತ ನಾಗರಿಕನಾಗಿ ಬದುಕನ್ನು ಸಾಗಿಸಬೇಕು ಎಂದು ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರದ ಪ್ರಧಾನ ಅರ್ಚಕ ವೇ.ಮೂ.ಶಿವರಾಮ ಭಟ್ ನುಡಿದರು.
ಅವರು ಭಾನುವಾರ ಮಾವಿನಕಟ್ಟೆ ದ್ವಾರಕಾ ನಗರದಲ್ಲಿ ಆರಂಭವಾದ `ಕೃಷ್ಣಲೀಲಾ' ಬಾಲಗೋಕುಲವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ಮುಂದಿನ ಪೀಳಿಗೆಗೆ ಧರ್ಮದ ಅರಿವನ್ನು ಮೂಡಿಸುವಲ್ಲಿ ಇಂತಹ ತರಬೇತಿಗಳು ಸಹಕಾರಿಯಾಗಿದ್ದು, ನಾವು ಪಾಶ್ಚಾತ್ಯರಲ್ಲ, ನಾವು ಭಾರತೀಯರು ಎಂಬುದನ್ನು ನಮ್ಮ ಸಂಸ್ಕಾರದಿಂದ ತೋರ್ಪಡಿಸಬೇಕು. ದೇವಾಲಯಗಳನ್ನು ಸಂದಶರ್ಿಸುವಾಗ ವಸ್ತ್ರಸಂಹಿತೆಯನ್ನು ರೂಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ ಹಿಂದೂಐಕ್ಯವೇದಿಯ ಸಂಘಟನಾ ಕಾರ್ಯದಶರ್ಿ ರಾಜನ್ ಮುಳಿಯಾರು ಮಾತನಾಡುತ್ತಾ ಸಹಸ್ರ ಸಹಸ್ರ ವರ್ಷಗಳ ಪಾರಂಪರ್ಯವಿರುವ ಸನಾತನ ಹಿಂದೂ ಧರ್ಮವನ್ನು ಯಾವ ದುಷ್ಟಶಕ್ತಿಗಳಿಂದಲೂ ನಾಶಪಡಿಸಲು ಸಾಧ್ಯವಿಲ್ಲ. ದೇಶದ ಮಹಾತ್ಮರಾರೂ ಉನ್ನತ ವಿದ್ಯಾವಂತರಲ್ಲ, ಆದರೆ ಅವರಲ್ಲಿ ಉತ್ತಮ ಸಂಸ್ಕಾರವಿತ್ತು. ಸಂಸ್ಕಾರವು ನಮ್ಮನ್ನು ಮಹಾಪುರುಷರನ್ನಾಗಿಸುತ್ತದೆ ಎಂದು ಹೇಳಿದ ಅವರು ಇಂದಿನ ದೂರದರ್ಶನ ಮುಂತಾದ ಮಾಧ್ಯಮಗಳಲ್ಲಿ ಬರುವಂತಹ ಧಾರಾವಾಹಿಗಳು ನಮ್ಮ ಸಂಸ್ಕಾರವಂತ ಜೀವನಕ್ಕೆ ಕೊಡಲಿಯೇಟಾಗಿದ್ದು, ಅದಕ್ಕೆ ಮನೆಮಂದಿ ಮರುಳಾಗದೆ ಮಕ್ಕಳ ಭದ್ರ ಭವಿಷ್ಯಕ್ಕೆ ಹೆತ್ತವರು ಕಾರಣಕರ್ತರಾಗಬೇಕು. ವಾರಕ್ಕೆ ಕೇವಲ ಒಂದು ಗಂಟೆಗಳ ಕಾಲ ಮಕ್ಕಳನ್ನು ಬಾಲಗೋಕುಲಗಳಿಗೆ ಕರೆದು ತಂದು ಮಕ್ಕಳ ಜೊತೆ ಹೆತ್ತವರೂ ಧರ್ಮದ ಅರಿವನ್ನು ಪಡೆದುಕೊಳ್ಳಲು ತಯಾರಿರಬೇಕು ಎಂದರು.
ಕೃಷ್ಣ ಮಾವಿನಕಟ್ಟೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ರಾಜೇಶ್ ಕುಮಾರ್ ಎ. ಸ್ವಾಗತಿಸಿ, ರಾಜೇಶ್ ವಂದಿಸಿದರು. ಪ್ರಾರಂಭದಲ್ಲಿ ವಿದ್ಯಾಥರ್ಿನಿಯರು ಗಣಪತಿ ಸ್ತುತಿಯನ್ನು ಹಾಡಿದರು. ಪರಿಸರದ 50ಕ್ಕೂ ಹೆಚ್ಚು ಮಕ್ಕಳೊಂದಿಗೆ ಪಾಲಕರು ಹಾಗೂ ಊರವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.