HEALTH TIPS

ಯಾವುದೇ ಶೀರ್ಷಿಕೆಯಿಲ್ಲ

Top Post Ad

Click to join Samarasasudhi Official Whatsapp Group

Qries

              ಪೆರಿಯಾ : ಕೇಂದ್ರ ವಿ.ವಿ.ಯಲ್ಲಿ  ಯೋಗ ಕೋಸರ್್ ಆರಂಭ 
   ಕಾಸರಗೋಡು: ಪೆರಿಯಾದಲ್ಲಿರುವ ಕೇರಳ ಕೇಂದ್ರ ವಿಶ್ವವಿದ್ಯಾನಿಲಯದಲ್ಲಿ  ಯೋಗ ವಿಷಯದಲ್ಲಿ  ಸ್ನಾತಕೋತ್ತರ ಡಿಪ್ಲೊಮಾ ತರಗತಿಯನ್ನು  ಆರಂಭಿಸಲಾಗಿದೆ. ಈ ಬಗ್ಗೆ  ಪೆರಿಯಾ ತೇಜಸ್ವಿನಿ ಹಿಲ್ಸ್  ಕ್ಯಾಂಪಸ್ನಲ್ಲಿ  ಜರಗಿದ ಕಾರ್ಯಕ್ರಮವನ್ನು  ಕೇಂದ್ರ ವಿವಿ ಉಪಕುಲಪತಿ ಪ್ರೊ|ಡಾ.ಜಿ.ಗೋಪಕುಮಾರ್ ದೀಪಬೆಳಗಿಸಿ ಉದ್ಘಾಟಿಸಿದರು.
   ಯೋಗ ಅಥವಾ ವ್ಯಾಯಾಮವು ಭಾರತ ವಿಶ್ವಕ್ಕೇ ನೀಡಿದ ಮಹತ್ತರವಾದ ಕೊಡುಗೆಗಳಲ್ಲಿ  ಒಂದಾಗಿದೆ. ವಿದೇಶಗಳಲ್ಲಿ  ಪ್ರತ್ಯೇಕವಾಗಿ ಪಾಶ್ಚಿಮಾತ್ಯ ದೇಶಗಳಲ್ಲಿ  ಯೋಗ ಹಾಗೂ ಆಯುವರ್ೇದಗಳಿಗೆ ಭಾರೀ ಪ್ರಚಾರ ಲಭಿಸುತ್ತಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಪಾಶ್ಚಿಮಾತ್ಯರು ಯೋಗ ಒಂದು ಆರೋಗ್ಯ ಸಂರಕ್ಷಣಾ ಮಾರ್ಗ ಎಂಬ ನೆಲೆಯಲ್ಲಿ  ಫಲಪ್ರದವಾಗಿ ಉಪಯೋಗಿಸುತ್ತಾರೆ. ಭಾರತದ ಪರಂಪರಾಗತ ಯೋಗಶಾಸ್ತ್ರವನ್ನು  ಅಕಾಡೆಮಿ ಮಟ್ಟದಲ್ಲಿ  ಶಾಸ್ತ್ರೀಯವಾಗಿ ಕಲಿಸುವುದರೊಂದಿಗೆ ಯೋಗದಿಂದ ಲಭಿಸುವ ಎಲ್ಲಾ  ಸಾಧ್ಯತೆಗಳ ಕುರಿತು ಅಧ್ಯಯನ ನಡೆಸಲು ಕೇರಳ ಕೇಂದ್ರ ವಿವಿಯ ಈ ಕೋಸರ್್ ಪ್ರಯೋಜನವಾಗಲಿದೆ ಎಂದು ಅವರು ನುಡಿದರು.
   ಕೇಂದ್ರ ವಿವಿ ಪರೀಕ್ಷಾ  ಕಂಟ್ರೋಲರ್ ಡಾ.ಎಂ.ಮುರಳೀಧರನ್ ನಂಬಿಯಾರ್, ಸಾಂಸ್ಕೃತಿಕ ಅಧ್ಯಯನ ವಿಭಾಗದ ಡೀನ್ ಡಾ.ಕೆ.ಜಯಪ್ರಸಾದ್, ಸ್ಕೂಲ್ ಆಫ್ ಮೆಡಿಸಿನ್ ಆ್ಯಂಡ್ ಪಬ್ಲಿಕ್ ಹೆಲ್ತ್ ಡೀನ್ ಡಾ.ರಾಜೇಂದ್ರ ಪಿಲಾಂಕಟ್ಟೆ , ಯೋಗ ವಿಭಾಗ ಅಕಾಡೆಮಿಕ್ ಸಂಯೋಜಕ ಡಾ.ಪಿ.ಸುಬ್ರಹ್ಮಣ್ಯ, ಸಹಾಯಕ ರಿಜಿಸ್ಟ್ರಾರ್ ಸುರೇಂದ್ರನ್ ಕೆ. ಮೊದಲಾದವರು ಉಪಸ್ಥಿತರಿದ್ದರು.
  ಒಂದು ವರ್ಷದ ಯೋಗ ಕೋಸರ್್ ಎರಡು ಸೆಮಿಸ್ಟರ್ಗಳಲ್ಲಿ  ಪೂತರ್ಿಗೊಳ್ಳಲಿದೆ. ಇದಲ್ಲದೆ ಯೋಗ ಇಲಾಖೆಯ ಅಧೀನದಲ್ಲಿ  ಎಂಎಸ್ಸಿ ಇನ್ ಯೋಗ ಕೋಸರ್್ ಆರಂಭಿಸಲಾಗುವುದು. ಯೋಗ ಇಲಾಖೆಯ ಔಪಚಾರಿಕ ಉದ್ಘಾಟನೆಯನ್ನು  ಮಾಚರ್್ 2ರಂದು ಕೇಂದ್ರ ವಿವಿಯಲ್ಲಿರುವ 9ನೇ ಸ್ಥಾಪಕ ದಿನಾಚರಣೆಯಂದು ಬೆಂಗಳೂರು ಎಸ್- ವ್ಯಾಸ ಕೇಂದ್ರ ವಿವಿಯ ಪ್ರಧಾನ ಉಪಕುಲಪತಿ ಪ್ರೊ.ಡಾ.ಕೆ.ಸುಬ್ರಹ್ಮಣ್ಯ ನಿರ್ವಹಿಸುವರು.
ಯೋಗ ವಿಭಾಗ ಆರಂಭಿಸಲು ಅನುಮತಿ ಲಭಿಸಿದ ಭಾರತದ ಆರು ಕೇಂದ್ರ ವಿವಿಗಳಲ್ಲಿ  ಕೇರಳ ಕೇಂದ್ರ ವಿವಿ ಒಂದಾಗಿದೆ. ಪೆರಿಯಾದ ಕೇರಳ ಕೇಂದ್ರ ವಿಶ್ವವಿದ್ಯಾನಿಲಯವು ಕೇರಳದಲ್ಲಿ  ವಿವಿ ಮಟ್ಟದಲ್ಲಿ  ಯೋಗ ಕೋಸರ್್ ಆರಂಭಿಸುವ ಮೊದಲ ವಿ.ವಿ.ಯಾಗಿದೆ ಎಂಬ ಹೆಗ್ಗಳಿಕೆ ಪಡೆದಿದೆ.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries