HEALTH TIPS

No title

          ಪ್ರತಿಭಾ ಪ್ರದರ್ಶನಕ್ಕೆ ಉತ್ತಮ ವೇದಿಕೆ ಶಾಲಾ ವಾಷರ್ಿಕೋತ್ಸವ
    ಪೆರ್ಲ: ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲಾ ವಾಷರ್ಿಕೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು. ಬಿ.ಜಿ.ರಾಮ ಭಟ್ ಧ್ವಜಾರೋಹಣಗೈದರು. ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಎಣ್ಮಕಜೆ ಗ್ರಾಮ ಪಂಚಾಯತು ಅಧ್ಯಕ್ಷೆ ರೂಪವಾಣಿ ಆರ್.ಭಟ್ ಉದ್ಘಾಟಿಸಿ ಮಾತನಾಡಿ, ಬೆಳೆಯುತ್ತಿರುವ ಮಕ್ಕಳು ಆಧುನಿಕತೆಯ ಪ್ರಭಾವ ಮತ್ತು ಕೆಲವೊಂದು ಮಾಧ್ಯಮಕ್ಕೆ ಆಕಷರ್ಿತರಾಗಿ ತಮ್ಮ ಜೀವನವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಇಂದಿನ ದಿನ ಆತಂಕದ ಬೆಳವಣಿಗೆ. ಶಾಲಾ ವಾಷರ್ಿಕೋತ್ಸವ ಮಕ್ಕಳಲ್ಲಿನ ಕೀಳರಿಮೆ, ಒತ್ತಡಗಳನ್ನು ದೂರಮಾಡಿ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಉತ್ತಮ ವೇದಿಕೆ ಅಥವಾ ಅವಕಾಶವನ್ನು ಕಲ್ಪಿಸಿಕೊಡುತ್ತೆ. ಅಂತಹ ಅವಕಾಶಗಳಿಂದ ವಿದ್ಯಾಥರ್ಿಗಳು ವಂಚಿತರಾಗದೆ ಅವಕಾಶವನ್ನು ಸದುಪಯೋಗಿಸಿಕೊಳ್ಳಬೇಕು. ಗುರು ಹಿರಿಯರ ಆದರ್ಶ, ವ್ಯಕ್ತಿತ್ವಗಳನ್ನು ಪಾಲಿಸಿ ಕಲಿಯುವುದರೊಂದಿಗೆ ಇನ್ನಿತರ ಪ್ರತಿಭೆಗಳೊಂದಿಗೆ ಹೆತ್ತವರಿಗೂ ಗುರುಗಳಿಗೂ ಕಲಿತ ಶಾಲೆಗೂ ಕೀತರ್ಿಯನ್ನು ತರುವಲ್ಲಿ ಯಶಸ್ವಿಯಾಗಬೇಕೆಂದು ಹೇಳಿದರು.
   ಮುಖ್ಯ ಅತಿಥಿಯಾಗಿ ವಿಠಲ ಶೆಟ್ಟಿ ಕುದ್ವ ಉಪಸ್ಥಿತರಿದ್ದರು. ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕೈಲಾಸಮೂತರ್ಿ ಶುಭಹಾರೈಸಿದರು. ಸತ್ಯನಾರಯಣ ಪ್ರೌಢಶಾಲಾ ಹಳೆ ವಿದ್ಯಾಥರ್ಿ ಸಂಘಟನೆಯ ಅಧ್ಯಕ್ಷ ರಾಜಾರಾಮ ಬಾಳಿಗ, ಶಾಲಾ ಪ್ರಬಂಧಕ ಪಿ.ಎಸ್.ವಿಶ್ವಾಮಿತ್ರ, ಗ್ರಾ.ಪಂ. ಸದಸ್ಯ ಅಬೂಬಕ್ಕರ್ ಸಿದ್ದಿಕ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಗುರುವಪ್ಪ ಪೆಲ್ತಾಜೆ ಶುಭಾಶಂಸನೆಗೈದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಎಣ್ಮಕಜೆ ಗ್ರಾಮ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷೆ ಆಯಿಷಾ ಎ.ಎ. ವಹಿಸಿದ್ದರು.  ಮುಖ್ಯೋಪಾಧ್ಯಾಯ ಬಿ.ರಾಜೇಂದ್ರ ಅವರು ಪ್ರಸ್ತುತ ವರ್ಷದ ಶಾಲಾ ವರದಿಯನ್ನು ವಾಚಿಸಿದರು. ಶಾಲಾ ಹಿರಿಯ ಅಧ್ಯಾಪಕ ಎನ್ ಕೇಶವ ಪ್ರಕಾಶ್ ಸ್ವಾಗತಿಸಿ, ಐ.ಮಹಾಬಲ ಭಟ್ ವಂದಿಸಿದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries