HEALTH TIPS

No title

       ಹಲಸಿಗೆ ಮೌಲ್ಯವರ್ಧನೆಗೊಳಿಸಿದಲ್ಲಿ ಕೃಷಿಕರಿಗೆ ಸಹಕಾರಿ-ಎಂ.ಅಸೈನಾರ್
          ಮಂಗಲ್ಪಾಡಿಯಲ್ಲಿ ವಿಚಾರಗೋಷ್ಠಿ
   ಉಪ್ಪಳ: ಹಲಸು ಉತ್ತಮ ಪೋಷಕಾಹಾರವಾಗಿದ್ದು, ಆಧುನಿಕರೀತಿಯಲ್ಲಿ ಹಲಸನ್ನು ಸಂಸ್ಕರಿಸಿ, ವಿವಿಧ ಆಹಾರ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆ ಸೃಷ್ಟಿಸಿದಲ್ಲಿ ಆಥರ್ಿಕವಾಗಿ ಕೃಷಿ ವರಮಾನಗಿಟ್ಟಿಸಲು ಸಾಧ್ಯ ಎಂದು ಕೇರಳ ಕೃಷಿ ವಿಶ್ವ ವಿದ್ಯಾನಿಲಯದ ಆಡಳಿತ ಸಮಿತಿ ಸದಸ್ಯ ಎಂ.ಅಸೈನಾರ್ ಹೇಳಿದರು.
   ವಕರ್ಾಡಿಯ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಮಂಗಲ್ಪಾಡಿ ಗ್ರಾ.ಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಕೃಷಿ ತರಬೇತಿ ಹಾಗೂ ಹಲಸಿನ ಹಣ್ಣಿನ ಮೌಲ್ಯ ವಧರ್ಿತ ಉತ್ಪನ್ನಗಳ ಬಗ್ಗೆ ನಡೆದ ಏಕದಿನ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
  ಕೃಷಿ ವಿಜ್ಞಾನಕೇಂದ್ರದ ಸಹಾಯದ ಮೂಲಕ ಹೊಸ ತಂತ್ರಜ್ಞಾನ, ಕೃಷಿ ಅವಿಷ್ಕಾರ, ಯಂತ್ರೋಪಕರಣಗಳನ್ನು ಉಪಯೋಗಿಸಿ ಪೂರಕಕೃಷಿಯ ಮೂಲಕ ಕೃಷಿಕರು ಅಭಿವೃದ್ಧಿ ಪಥದಲ್ಲಿ ಮುನ್ನಡಯಬಹುದಾಗಿದೆ ಎಂದು ಅವರು ಹೇಳಿದರು. ಹಲಸು ಒಂದು ಸಮೃದ್ಧ ಬೆಳೆಯಾಗಿದೆ. ಹಲಸನ್ನು ಆಹಾರ ವಸ್ತುವಾಗಿಸಿ, ಸಂಸ್ಕರಣೆ ಹಾಗೂ ಮೌಲ್ಯವರ್ಧನೆಗೆ ಹೆಚ್ಚಿನ ಪ್ರೇರಣೆ ನೀಡಿದಲ್ಲಿ ಕೃಷಿಕರ ಅಭ್ಯುದಯ ಸಾಧ್ಯವಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
  ರಾರ್ಸ್ ಪಿಲಿಕೋಡ್ ಇದರ ಸಹಾಯಕ ನಿದರ್ೇಶಕ ಡಾ. ಪಿ.ಆರ್ ಸುರೇಶ್ ಮಾತನಾಡಿ ಹೆಚ್ಚಿನ ಪೋಷಕಾಂಶ ಹಾಗೂ ವಿಟಮಿನ್ ಸತ್ವವುಳ್ಳ ಹಲಸು ಉತ್ತಮ ಖಾದ್ಯ ವಸ್ತುವಾಗಿದೆ ಎಂದರು. ಆತ್ಮ ಯೋಜನೆಯ ಯೋಜನಾಧಿಕಾರಿ ಸೂರ್ಯನಾರಾಯಣ ಭಟ್, ಬಿ.ಎಂ ಮುಸ್ತಫಾ, ಡಾ.ಎ.ರಾಜಗೋಪಾಲ್ ಶುಭಾಸಂಸನೆಗೈದರು.ಕಾರ್ಯಕ್ರಮದಲ್ಲಿಐವತ್ತಕ್ಕೂ ಅಧಿಕ ಕೃಷಿಕರು ಪಾಲ್ಗೊಂಡಿದ್ದರು. ವಿಚಾರಗೋಷ್ಠಿಯಲ್ಲಿ ತಳಿಪರಂಬ ಅರಿಟೋಕಾಪ್ಸರ್್ ನಿದರ್ೇಶಕ ಕೆ.ಸುಭಾಷ್ ಹಲಸಿನ ಹಣ್ಣಿನ ವ್ಯಾಪಾರ ಸಾಧ್ಯತೆಗಳ ಬಗ್ಗೆ ಮಾತನಾಡಿ ಹಲಸನ್ನು ಉಪಯೋಗಿಸಿ ಹಲವು ವಿಧದ ಆಹಾರ ಉತ್ಪನ್ನಗಳನ್ನು ತಯಾರಿಸಬಹುದಾಗಿದೆ. ಹಲಸಿನ ಹಣ್ಣಿನ ಪಲ್ಪ್ ಮೂಲಕ ಕೇಕ್ ಹಾಗೂ ಐಸ್ಕ್ರೀಂ ತಯಾರಿಸಲಾಗುತ್ತಿದ್ದು ಹೆಚ್ಚಿನ ಬೇಡಿಕೆ ಇದೆ. ಕೊಲ್ಲಿ ರಾಷ್ಟ್ರಗಳಲ್ಲಿ ಹಲಸಿನ ಹಣ್ಣಿನ ರೆಡಿ ಮಿಕ್ಸ್ ಪಾಯಸ, ಮಸಾಲಗಳಿಗೆ ಮಾರುಕಟ್ಟೆ ಇದ್ದು, ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದರು.ತಳಿಪರಂಬದಲ್ಲಿರುವ ಆಹಾರ ಸಂಸ್ಕರಣಾ ಘಟಕದ ಮೂಲಕ ಈ ವರ್ಷ ಸುಮಾರು 1500 ಮೆಟ್ರಿಕ್ಟನ್ ಗಳಷ್ಟು ಹಲಸನ್ನುಕೊಂಡು ಸಂಸ್ಕರಿಸುವ ಗುರಿಯನ್ನಿರಿಸಲಾಗಿದೆ ಎಂದು ತಿಳಿಸಿದ ಅವರು, ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದುಕೆ.ಜಿ ಹಲಸಿಗೆ 35 ರೂ.ಬೆಲೆಯಿದೆ. ಹಲಸಿನ ಹಣ್ಣಿನ ಜ್ಯೂಸ್ ಹಾಗೂ ಪಾಸ್ತಾಗಳಿಗೆ,ಉತ್ತಮ ಬೇಡಿಕೆಯಿದೆ ಎಂದರು. ಹಲಸಿನ ಬೀಜಗಳನ್ನು ಒಣಗಿಸಿ ಸಂಸ್ಕರಿಸಿ ಉತ್ತಮ ಆಹಾರ ವಸ್ತುವನ್ನಾಗಿಸಲಾಗುತ್ತಿದೆ ಎಂದರು. ಪಡನ್ನಕ್ಕಾಡು ಕೃಷಿ ವಿ.ವಿಯ ಪ್ರದ್ಯಾಪಕಿ ಡಾ.ಅಜು.ಎಂ.ಸಣ್ಣಿ ಮಾತನಾಡಿ ಹಲಸು ಉತ್ತಮ ಜೌಷಧೀಯ ಗುಣವನ್ನು ಹೊಂದಿರುವ ಆಹಾರ ಖಾದ್ಯವಾಗಿದ್ದು, ಜೀವನ ಶೈಲಿಯಿಂದ ಕಾಡುವ ರೋಗಗಳ ಉಪಶಮನಕ್ಕೆ ಉತ್ತಮ ಜೌಷಧವಾಗಿದೆ ಎಂದರು. ಹಲಸಿನ ಹಣ್ಣಿ ಮೌಲ್ಯವಧರ್ಿತ ಸಾಧ್ಯತೆಗಳು ಹಾಗೂ ಉತ್ಪನ್ನ ವೈವಿಧ್ಯತೆ ಬಗ್ಗೆ ಪಡನ್ನಕ್ಕಾಡು ಕೃಷಿ ವಿ.ವಿಯ ಡಾ.ಪ್ರಿಯಾ ಮಾತನಾಡಿದರು. ವಕರ್ಾಡಿ ಕೃಷಿ ವಿ.ವಿಯ ವಿಸ್ತರಣಾ ತರಬೇತಿಕೇಂದ್ರ ವಕರ್ಾಡಿ ಇದರ ಮುಖ್ಯಸ್ಥ ಡಾ.ಶಶಿಕಾಂತ್ ಸ್ವಾಗತಿಸಿ, ವಕರ್ಾಡಿ ಇ.ಟಿ.ಸಿ ಪ್ರಾಧ್ಯಾಪಕ ಡಾ.ಎಂ.ಪಿ ಗಿರಿಧರನ್ ವಂದಿಸಿದರು. ಕಾರ್ಯಕ್ರಮದಲ್ಲಿ ಮಂಗಲ್ಪಾಡಿ ಗ್ರಾ.ಪಂ ಅಧ್ಯಕ್ಷ ಶಾಹುಲ್ ಹಮೀದ್ ಬಂದ್ಯೋಡು, ಮಂಜೇಶ್ವರ ಬ್ಲಾ.ಪಂ ಅಧ್ಯಕ್ಷ ಎ.ಕೆ.ಎಂ ಅಶ್ರಫ್, ವಕರ್ಾಡಿ ಗ್ರಾ.ಪಂ ಅಧ್ಯಕ್ಷ ಅಬ್ದುಲ್ ಮಜೀದ್, ಮಂಗಲ್ಪಾಡಿ ಗ್ರಾ.ಪಂ ಉಪಾಧ್ಯಕ್ಷೆ ಜಮೀಲ ಸಿದ್ದೀಕ್, ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಆಯಿಷತ್ ಫಾರಿಸ, ಬಿ.ಎಂ ಮುಸ್ತಫಾ, ಅಬ್ದುಲ್ರಜಾಕ್ ಮೊದಲಾದವರು ಉಪಸ್ಥಿತರಿದ್ದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries