HEALTH TIPS

No title

        ಮುರಳೀರವಮ್-ಬಾಲಮುರಳಿಕೃಷ್ಣ ಸಂಸ್ಮರಣೆ
    ಬದಿಯಡ್ಕ: ಬಾಲಮುರಳಿಕೃಷ್ಣ ಅವರು ಸಂಗೀತ ಕ್ಷೇತ್ರಕ್ಕೆ ನೀಡಿರುವ ಅತ್ಯಪೂರ್ವ ಕೊಡುಗೆಗಳು ಕನರ್ಾಟಕ ಸಂಗೀತ ಕ್ಷೇತ್ರವನ್ನು ಎತ್ತರಕ್ಕೆ ಪ್ರಚುರಪಡಿಸುವಲ್ಲಿ ಪ್ರೇರಕವಾಗಿದ್ದು, ಸಂಗೀತ  ಕೃತಿಗಳ ನಿಮರ್ಾಣವನ್ನೂ ಅವರು ಮಾಡಿದ್ದಾರೆ ಎಂದು ಕಲಾವಿದ ಬಳ್ಳಪದವು ಯೋಗೀಶ ಶಮರ್ಾ ಅವರು ಹೇಳಿದರು.
   ಬದಿಯಡ್ಕ ಸಮೀಪದ ನಾರಾಯಣೀಯಮ್ ಸಂಗೀತ ಸಮುಚ್ಚಯದಲ್ಲಿ ವೀಣಾವಾದಿನಿ ಸಂಗೀತ ಶಾಲೆಯ ಹದಿನೆಂಟನೇ ವರ್ಷದ ವಾಷರ್ಿಕೋತ್ಸವದಲ್ಲಿ ಎರಡನೆಯ ದಿನ ಶನಿವಾರ ನಡೆದ ಬಾಲಮುರಳಿ ಕೃಷ್ಣ ಸಂಸ್ಮರಣ ಕಾರ್ಯಕ್ರಮದಲ್ಲಿ ಅವರು ಮಾತಾಡುತ್ತಿದ್ದರು.
   ಸಂಗೀತದಲ್ಲಿ ಎಪ್ಪತ್ತೆರಡು ಮೇಳಕರ್ತ ರಾಗಗಳು ಮೂಲ ರಾಗಗಳಾಗಿದ್ದು, ಉಳಿದ ಎಲ್ಲವೂ ಇವುಗಳಿಂದ ಹುಟ್ಟಿಕೊಂಡವುಗಳಾಗಿವೆ. ಈ ಎಪ್ಪತ್ತೆರಡು ಮೇಳಕರ್ತ ರಾಗಗಳಲ್ಲಿ ಕೃತಿ ರಚಿಸಿದ್ದು ಬಾಲಮುರಳಿಯವರ ಹೆಚ್ಚುಗಾರಿಕೆಯಾಗಿದೆ ಎಂದು ಅವರು ಹೇಳಿದರು.
  ಕಲಾಚಾರ್ಯ ಕೆ. ವೆಂಕಟರಮಣ, ರಂಜಿತ್ ಮಂಜೂರು, ಪ್ರಭಾಕರ ಕುಂಜಾರು, ಜಗದೀಶ ಕೊರೆಕ್ಕಾನ, ವೈಕಮ್ ಪ್ರಸಾದ್, ಉಣ್ಣಿಕೃಷ್ಣನ್, ಭರತನಾಟ್ಯ ಕಲಾವಿದೆ ಲೀಜಾ ದಿನೂಪ್ ಪಯ್ಯನ್ನೂರು ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
   ಬಾಲಮುರಳಿಕೃಷ್ಣ ರಚಿಸಿದ ತೀರಾ ಅಪರೂಪದ ಎಪ್ಪತ್ತೆರಡು ಮೇಳಕರ್ತ ರಾಗಗಳಲ್ಲಿ ರಚಿಸಲ್ಪಟ್ಟ ಕೃತಿಗಳನ್ನು ಪೂವರ್ಾಹ್ನ ಹಾಗೂ ಅಪರಾಹ್ನ ವೀಣಾವಾದಿನಿಯ ವಿದ್ಯಾಥರ್ಿಗಳು ಎರಡು ತಂಡಗಳಾಗಿ ಸುಮಾರು ಎಂಟುಗಂಟೆಗಳ ಕಾಲ ಪ್ರಸ್ತುತಪಡಿಸಿದರು. ಸಂಜೆ ಮುರಳೀರವಮ್ ಎಂಬ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದಂತೆ ಪಯ್ಯನ್ನೂರಿನ ಕಲಾವಿದೆ ಲೀಜಾ ದಿನೂಪ್ ಅವರು ಭರತನಾಟ್ಯ ಪ್ರಸ್ತುತಪಡಿಸುತ್ತ ಜೊತೆಯಲ್ಲಿ ಬಾಲಮುರಳಿ ಕೃಷ್ಣ ಅವರ ವರ್ಣಚಿತ್ರ ಬಿಡಿಸಿ ತುಂಬಿದ ಸಭೆಯನ್ನು ಮಂತ್ರಮುಗ್ಧಗೊಳಿಸಿದರು.
ವಿದುಷಿ ಅಥರ್ಾ ಪೆರ್ಲ ಕಾರ್ಯಕ್ರಮ ನಡೆಸಿಕೊಟ್ಟರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries