ಖಾಸಗಿ ಪಾಟರ್ಿಯಲ್ಲಿ ನೃತ್ಯ ಮಾಡಲು ನಿರಾಕರಿಸಿದ ಪಾಕ್ ನಟಿ ಸುಂಬಲ್ ಖಾನ್ ಗುಂಡಿಕ್ಕಿ ಹತ್ಯೆ
ಇಸ್ಲಾಮಾಬಾದ್: ಹೈಪ್ರೋಫೈಲ್ ಖಾಸಗಿ ಪಾಟರ್ಿಯೊಂದರಲ್ಲಿ ನೃತ್ಯ ಮಾಡಲು ನಿರಾಕರಿಸಿದ ಪಾಕಿಸ್ತಾನದ ಖ್ಯಾತ ನಟಿ ಹಾಗೂ ಗಾಯಕಿ ಸುಂಬಲ್ ಖಾನ್ ಅವರನ್ನು ಸೋಮವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಡಾನ್ ವರದಿ ಮಾಡಿದೆ.
ಶೇಖ್ ಮಲ್ತೂನ್ ಪಟ್ಟದ ನಟಿಯ ಮನೆಯಲ್ಲಿಯೇ ಮೂವರು ಶಸ್ತ್ರಧಾರಿ ವ್ಯಕ್ತಿಗಳು ಸುಂಬಲ್ ಖಾನ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ತಮ್ಮೊಂದಿಗೆ ಬಂದು ಖಾಸಗಿ ಹೈಪ್ರೋಫೈಲ್ ಪಾಟರ್ಿಯಲ್ಲಿ ಪ್ರದರ್ಶನ ನೀಡುವಂತೆ ಶಸ್ತ್ರಧಾರಿಗಳು ನಟಿಗೆ ಕೇಳಿಕೊಂಡಿದ್ದಾರೆ. ಆದರೆ ಖಾಸಗಿ ಪಾಟರ್ಿಯಲ್ಲಿ ಪ್ರದರ್ಶನ ನೀಡಲು ನಟಿ ನಿರಾಕರಸಿದ್ದು, ಇದರಿಂದ ಆಕ್ರೋಶಗೊಂಡ ದುಷ್ಕಮರ್ಿಗಳು ಸುಂಬಲ್ ಖಾನ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ವರದಿ ವಿವರಿಸಿದೆ.
25 ವರ್ಷದ ನಟಿ ಸುಂಬಲ್ ಖಾನ್ ಅವರು ಹಲವು ಟಿವಿ ಕಾರ್ಯಕ್ರಮಗಳನ್ನು ನೀಡಿದ್ದು, ದುಷ್ಕಮರ್ಿಗಳು ಹಲವು ಬಾರಿ ಗುಂಡು ಹಾರಿಸಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ನಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪೊಲೀಸ್ ಅಧಿಕಾರಿ ನಯಿಮ್ ಖಟ್ಟಕ್ ಅವರನ್ನು ಬಂಧಿಸಲಾಗಿದ್ದು, ಇತರೆ ಇಬ್ಬರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.