HEALTH TIPS

No title

                   ಯಕ್ಷಗಾನವನ್ನು ಹವ್ಯಾಸಿಗಳ ಮೂಲಕ ಕಾಪಾಡಿ ಪುನರುತ್ತೇಜಿಸಬೇಕು
          ಕನರ್ಾಟಕ ತುಳು ಸಾಹಿತ್ಯ ಅಕಾಡೆಮಿಯ ಬೋಳಾರ ಸಂಸ್ಮರಣೆಯಲ್ಲಿ ಎಂ.ನಾ ವಿಶೇಷೋಪನ್ಯಾಸ
   ಕುಂಬಳೆ: ಯಕ್ಷಗಾನ ರಂಗಭೂಮಿಯನ್ನು ಅದರ ಪಾರಂಪರಿಕ ಶೈಲಿಯೊಂದಿಗೆ ಸ್ಚಚ್ಛವಾಗಿ ನಾಳೆಗೆ ಕೈದಾಟಿಸಬೇಕಾದರೆ ಹವ್ಯಾಸಿ ಮತ್ತು ವಿದ್ಯಾಥರ್ಿ ರಂಗಭೂಮಿ ಮಾತ್ರವೇ ಸಾಧ್ಯ.  ವರ್ತಮಾನದ ಪ್ರದಶರ್ಿತ ಯಕ್ಷಗಾನಗಳನ್ನೇ ಮಾದರಿಯೆಂದು ಅನುಕರಿಸಿದರೆ ಕಲೆಗೆ ಅಪಾಯವಲ್ಲದೇ ಭವಿಷ್ಯತ್ತಿಲ್ಲ. ಈ ಹಿನ್ನೆಲೆಯಲ್ಲಿ ವೃತ್ತಿಪರ ಕಲಾವಿದರು, ಕಲೋಪಜೀವಿಗಳು ನಾಚುವಂತೆ ಯಕ್ಷಗಾನ ರಂಗವನ್ನು ಹವ್ಯಾಸಿಗಳ ಮೂಲಕ, ಸಾಂಪ್ರದಾಯಿಕ ನೆಲೆಗಟ್ಟಿನಲ್ಲಿ ಪುನರುತ್ತೇಜಿಸಿ, ಮತ್ತೆ ಎತ್ತರಿಸುವ ಕೆಲಸ ವರ್ತಮಾನದ ತುತರ್ು ಎಂದು ಪತ್ರಕರ್ತ, ಅಖಿಲ ಭಾರತ ಜಾನಪದ- ಬುಡಕಟ್ಟು ಕಲಾ ಪರಿಷತ್ ಕಾಸರಗೋಡು ಜಿಲ್ಲಾಧ್ಯಕ್ಷ ಎಂ. ನಾ. ಚಂಬಲ್ತಿಮಾರ್ ನುಡಿದರು.
   ಕನರ್ಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಕಲಾ ಗಂಗೋತ್ರಿ ಯಕ್ಷಗಾನ ಕೇಂದ್ರ ಉಚ್ಚಿಲ ಇದರ ಸಹಯೋಗದಲ್ಲಿ ಉಚ್ಚಿಲ ಸೋಮೇಶ್ವರ ಕಲಾಗಂಗೋತ್ರಿ ಆವರಣದಲ್ಲಿ ನಡೆದ ಹಿರಿಯ ಯಕ್ಷಗಾನ ಕಲಾವಿದ ದಿ. ಬೋಳಾರ ನಾರಾಯಣ ಶೆಟ್ಟಿ ಸಂಸ್ಮರಣ ಸಮಾರಂಭದಲ್ಲಿ 'ಯಕ್ಷಗಾನ ನಿನ್ನೆ-ಇಂದು-ನಾಳೆ' ಎಂಬ ವಿಷಯದಲ್ಲಿ ಅವರು ವಿಶೇಷ ಉಪನ್ಯಾಸವಿತ್ತು ಮಾತನಾಡಿದರು.
  ಯಕ್ಷಗಾನದ ನಿನ್ನೆಯನ್ನು ಹುಡುಕುವ ಪ್ರಾಮಾಣಿಕ ಕೆಲಸ ಯಕ್ಷಗಾನ ರಂಗಭೂಮಿಯಲ್ಲಿ ನಡೆದಿಲ್ಲ. ನಾವು ನೋಡುವ ಕರಾವಳಿಯ ಯಕ್ಷಗಾನವಷ್ಟೇ ಸಮಗ್ರ ಯಕ್ಷಗಾನವಲ್ಲ. ಯಕ್ಷಗಾನ ಇಡೀ ದಕ್ಷಿಣ ಭಾರತವನ್ನು ಆವರಿಸಿದ್ದು, ಇಂದಿಗೂ ದ.ಭಾರತದ ಜಾನಪದ ಕಲೆಯಲ್ಲಿ ಯಕ್ಷಗಾನವಿದೆ. ಆದರೆ ನಾವು ಅದನ್ನರಿಯದೇ, ಜಾಗತಿಕ ನೆಲೆಯಲ್ಲಿ ಎತ್ತರಕ್ಕೇರದೇ ನಮ್ಮ ಯಕ್ಷಗಾನವೇ ಶ್ರೇಷ್ಟವೆಂಬ  ಭಾವದಲ್ಲಿದ್ದೇವೆಂದು' ಅವರು ನುಡಿದರು.
  ಸಮಾರಂಭವನ್ನು ಹಿರಿಯ ಕಲಾವಿದ ಅರುವ ಕೊರಗಪ್ಪ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು. ಕನರ್ಾಟಕ ತುಳು ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಅಧ್ಯಕ್ಷತೆ ವಹಿಸಿ 'ಗಂಭೀರವಾದ ಯಕ್ಷಗಾನದ ಭೂತ-ವರ್ತಮಾನ-ಭವಿಷ್ಯದ ವಿಚಾರಗಳ ಬಗ್ಗೆ ತುಳು ಅಕಾಡೆಮಿಯಿಂದ ಪ್ರತ್ಯೇಕ ವಿಚಾರಗೋಷ್ಟಿ ನಡೆಸುವುದೆಂದು ತಿಳಿಸಿ, ತುಳು ಸಾಹಿತ್ಯ ಅಕಾಡೆಮಿಯ ಮೂಲಕ ತುಳುನಾಡಿನ ಸಮಗ್ರ ಕ್ಷೇತ್ರದ ಹಿರಿಯರನ್ನು ಸ್ಮರಿಸುವ ಕೆಲಸವಾಗುತ್ತಿದೆ ಎಂದರು.
  ಬೋಳಾರ ನಾರಾಯಣ ಶೆಟ್ಟಿಯವರ ಸಂಸ್ಮರಣಾ ಭಾಷಣ ಮಾಡಿದ ಹಿರಿಯ ಪ್ರಸಂಗಕರ್ತ-ಭಾಗವತ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಮಾತನಾಡಿ "ಬೋಳಾರದವರು ಯಕ್ಷಗಾನ ಕಲಿಯದೇ ಅಚಾನಕ್ ರಂಗವೇರಿದ ಅಜಾತಶತ್ರು ಕಲಾವಿದ. ಅವರ ರಂಗನಡೆ-ನುಡಿಯಂತೆ ಮತ್ತೊಬ್ಬ ಕಲಾವಿದನನ್ನು ಇಂದಿನ ತನಕ ಯಕ್ಷಗಾನ ಕಂಡಿಲ್ಲ' ಎಂದರು. ಸಮಾರಂಭದಲ್ಲಿ ಬೋಳಾರ ನಾರಾಯಣ ಶೆಟ್ಟರ ಪುತ್ರ ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು.  ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಸಂಚಾಲಕ ತಾರಾನಾಥ ಗಟ್ಟಿ ಕಾಪಿಕಾಡ್, ಕಲಾಗಂಗೋತ್ರಿ ಯಕ್ಷಗಾನ ಕೇಂದ್ರದ ಅಧ್ಯಕ್ಷ ಯು.ಸತೀಶ ಕಾರಂತ , ಕಲಾಕೇಂದ್ರದ ಹಿರಿಯರಾದ ಸದಾಶಿವ ಉಚ್ಚಿಲ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಒಂದು ಕಾಲದಲ್ಲಿ ಕನರ್ಾಟಕ ಮೇಳದಲ್ಲಿ ಮೆರೆದ 'ಕೋಟಿ ಚೆನ್ನಯ' ಪ್ರಸಂಗವನ್ನು ಅಂದಿನ ಅದೇ ಲಭ್ಯ-ಹಿರಿಯ ಕಲಾವಿದರ ಪಾತ್ರ ಪ್ರಸ್ತುತಿಯಲ್ಲಿ ಪುನರಪಿ ಪ್ರದಶರ್ಿಸಲಾಯಿತು.
   


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries