HEALTH TIPS

No title

          ಫಲ ನೀಡದ ಮಾತುಕತೆ-ಇಂದಿನಿಂದ ಖಾಸಗೀ ಬಸ್ ಅನಿಧರ್ಿಷ್ಟಕಾಲ ಮುಷ್ಕರ
   ಕೊಚ್ಚಿ: ಇಂದಿನಿಂದ ರಾಜ್ಯ ವ್ಯಾಪಕವಾಗಿ ಖಾಸಗೀ ಬಸ್ಗಳು ಅನಿಧರ್ಿಷ್ಟಕಾಲ ಮುಷ್ಕರ ನಡೆಸಲಿವೆ. ಕನಿಷ್ಠ ಪ್ರಯಾಣ ದರವನ್ನು ಈಗಿನ 7 ರೂ.ಗಳಿಂದ 10 ರೂ. ಆಗಿ ಹೆಚ್ಚಳಗೊಳಿಸಬೇಕೆಂಬ ಬಸ್ ಮಾಲಕರ ಬೇಡಿಕೆಯನ್ನು ಸರಕಾರ ಅಂಗೀಕರಿಸದಿರುವುದರಿಂದ ಇಂದಿನಿಂದ ಈ ಬಸ್ ಸಂಚಾರ ಮುಷ್ಕರ ಆರಂಭಿಸಲು ತೀಮರ್ಾನಿಸಲಾಗಿದೆ ಎಂದು ಬಸ್ ಮಾಲಕರ ಸಂಘಟನೆಯ ರಾಜ್ಯ ಪ್ರಮುಖರು ತಿಳಿಸಿದ್ದಾರೆ. ಬಸ್ ಮಾಲಕರ ಸಂಘಟನೆಯ ಬೇಡಿಕೆಯನ್ನು ಪರಿಶೀಲಿಸಿದ ಸರಕಾರ ಎಂಟು ರೂ.ಗಳಷ್ಟು ಮಾತ್ರ ಹೆಚಚಳಗೊಳಿಸಲು ಒಪ್ಪಿಗೆ ನೀಡಿರುವುದನ್ನು ಸ್ವೀಕರಿಸದ ಮಾಲಕರ ಸಂಘಟನೆ ಕೊನೆಗೂ ಮುಷ್ಕರ ನಡೆಸಲು ಅಧಿಕೃತ ಘೋಷಣೆಯನ್ನು ಗುರುವಾರ ಸಂಜೆ ಹೊರಡಿಸಿತು.
   ವಿದ್ಯಾಥರ್ಿಗಳ ಮೀಸಲು ಶುಲ್ಕವನ್ನು ಹೆಚ್ಚಿಸಬೇಕು, ವಿದ್ಯಾಥರ್ಿಗಳ ರೀಯಾತಿ ಬಸ್ ಪ್ರಯಾಣ ಶುಲ್ಕದ ಬಗ್ಗೆ ಪ್ರಾಯ ಮಿತಿಯನ್ನು ನಿಗದಿಪಡಿಸಬೇಕು, ವಿದ್ಯಾಥರ್ಿಗಳ ಕನಿಷ್ಠ ರೀಯಾಯಿತಿ ಶುಲ್ಕವನ್ನು ಈಗಿರುವ 1 ರೂ.ವಿನಿಂದ 2 ರೂ. ಆಗಿ ಹೆಚ್ಚಿಸಬೇಕು, ಖಾಸಗೀ ಬಸ್ಗಳ ಪರವಾನಿಗೆಯನ್ನು ನವೀಕರಿಸಲು ಕ್ರಮ ಕೈಗೊಳ್ಳಬೇಕು, ಹೆಚ್ಚಳಗೊಳಿಸಿರುವ ರಸ್ತೆ ಸಂಚಾರ ತೀವರ್ೆಯನ್ನು ಕಡಿತಗೊಳಿಸಬೇಕು, ಬಸ್ ಪ್ರಯಾಣ ಶುಲ್ಕ ಸಹಿತ ವಿವಿಧ ಆಯಾಮಗಳಲ್ಲಿ ಕಾಯರ್ಾಚರಿಸಲು ಸಮಿತಿ ರಚಿಸಬೇಕು, ಪೆಟ್ರೋಲ್, ಡೀಸೆಲ್ಗಳ ಮಾರಾಟವನ್ನು ಜಿಎಸ್ಟಿ ವ್ಯಾಪ್ತಿಗೊಳಪಡಿಸಬೇಕು ಮೊದಲದ ಬೇಡಿಕೆಗಳನ್ನೂ ಖಾಸಗೀ ಬಸ್ ಮಾಲಕರ ಸಂಘ ಸರಕಾರದ ಮುಂದಿರಿಸಿದೆ.
   ಸರಕಾರ ಬೇಡಿಕೆ ಪೂರೈಸುವಲ್ಲಿ ಸೋಮವಾರದ ವರೆಗೆ ಯಾವುದೇ ನಿಧರ್ಾರ ಕೈಗೊಳ್ಳದಿದ್ದರೆ ನಿರಾಹಾರ ಸತ್ಯಾಗ್ರಹ ನಡೆಸಬೇಕಾದೀತು ಎಂದು ಬಸ್ ಮಾಲಕರ ಸಂಘದ ರಾಜ್ಯ ಪ್ರಮುಖರು ಸರಕಾರಕ್ಕೆ ಮುನ್ನೆಚ್ಚರಿಕೆ ನೀಡಿದ್ದಾರೆ. ಈ ಹಿಂದೆ ರಾಜ್ಯದಲ್ಲಿ 16 ಸಾವಿರ ಖಾಸಗೀ ಬಸ್ ಗಳು ಸಂಚಾರ ನಡೆಸುತ್ತಿತ್ತು. ಅದೀಗ 13 ಸಾವಿರಕ್ಕೆ ಬಂದು ತಲಪಿದೆ.
  ಚಚರ್ೆಗೆ ಬದ್ದ: ಸಚಿವ:
   ಖಾಸಗೀ ಬಸ್ ಮಾಲಕರ ಬೇಡಿಕೆ ಪರಿಶೀಲನೆ, ಚಚರ್ೆಗೆ ಬಸ್ ಮಾಲಕರೊಂದಿಗೆ ಗಂಭೀರ ಚಚರ್ೆ ನಡೆಸಲು ಸರಕಾರ ಬದ್ದವಾಗಿದೆ ಎಂದು ರಾಜ್ಯ ಸಾರಿಗೆ ಸಚಿವ ಎ.ಕೆ.ಶಶೀಂದ್ರನ್ ಗುರುವಾರ ಸಂಜೆ ಮಾಧ್ಯಮಗಳಿಗೆ ತಿಳಿಸಿರುವರು. ಜನಸಾಮಾನ್ಯರ ಸಂಕಷ್ಟಗಳನ್ನೂ ಖಾಸಗೀ ಬಸ್ ಮಾಲಕರು ಗಣನೆಗೆ ತಂದುಕೊಳ್ಳಬೇಕು. ಆ ಬಳಿಕ ತಮಮ ಬೇಡಿಕೆಗಳನ್ನು ತಿದ್ದುಪಡಿಗೊಳಿಸಲಿ ಎಂದು ಸಚಿವರು ತಿಳಿಸಿರುವರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries