HEALTH TIPS

No title

                       
ಜಾಗತೀಕರಣದಂತಹ ಸವಾಲಿನ ಮಧ್ಯೆ ಪ್ರಾದೇಶಿಕ ಭಾಷೆಗಳ ಉಳಿಸುವ ಹೊಣೆ ಎಲ್ಲರದು-ಟಿ.ಪಿ.ರಮೇಶ್
      ಜಾಗತೀಕರಣ, ಉದಾರೀಕರಣ, ಖಾಸಗೀಕರಣಗಳ ಪ್ರಭಾವಗಳಿಂದ ನಮ್ಮ ಹಳ್ಳಿಗಳು ವಿಶ್ವವಾಗುತ್ತಿದೆ. ಆದರೆ ಇಂತಹ ಬೆಳವಣಿಗೆಗಳ ಮಧ್ಯೆ ನಮ್ಮ ತಾಯಿ ನುಡಿಯ ಮಹತ್ವವನ್ನು ಅರಿತು ಉಳಿಸಬೇಕಾದ ಅನಿವಾರ್ಯತೆ ಇದೆ ಎಂದು ಕನರ್ಾಟಕ ಸರಕಾರದ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ.ರಮೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
    ಕಾಸರಗೊಡು ಗಡಿನಾಡು ಸಾಹಿತ್ಯ-ಸಾಂಸ್ಕೃತಿಕ ಅಕಾಡೆಮಿಯ ತಿಂಗಳ ಸರಣಿ ಕಾರ್ಯಕ್ರಮವಾದ 7ನೇ ಸಾಹಿತ್ಯ-ಸಾಂಸ್ಕೃತಿಕ ಪಯಣ ಸಮಾರಂಭವನ್ನು ಗುರುವಾರ ಮುಳ್ಳೇರಿಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
    ಕನ್ನಡ ಭಾಷೆಯ ಸಾಹಿತ್ಯ ಚರಿತ್ರೆಯು ಅತ್ಯಂತ ಪ್ರಾಚೀನವಾಗಿದ್ದು, ಆಗಿನ್ನೂ ಆಂಗ್ಲ ಮತ್ತು ಹಿಂದಿ ಭಾಷೆಗಳ ಅಸ್ತಿತ್ವವಿದ್ದಂತೆ ಕಂಡುಬರುತ್ತಿಲ್ಲ. ಕನ್ನಡ ನಾಡಿನ ಪ್ರಾಚೀನ ರಾಜಮನೆತನಗಳು, ಆಡಳಿತ ನಡೆಸಿದದ ಪ್ರಮುಖರು ವಿವಿಧ ಕಾಲಘಟ್ಟದಲ್ಲಿ ಕನ್ನಡ ಭಾಷೆ, ಸಂಸ್ಕೃತಿಯನ್ನು ಕಟ್ಟಿಬೆಳೆಸಿದ ಪ್ರಕ್ರಿಯೆಗಳ ಬಗ್ಗೆ ಹೊಸ ತಲೆಮಾರು ತಿಳಿಯಲು ಪ್ರಯತ್ನಿಸಬೇಕು ಎಂದು ತಿಳಿಸಿದ ಅವರು, ಸಮಾಜ ನಡೆದು ಬಂದ ಹಾದಿಯನ್ನು ನೆನಪಿಸಿದಷ್ಟು ಭವಿಷ್ಯದ ಗಟ್ಟಿತನ ನಿಖರತೆಯಿಂದೊಡಗೂಡಿ ಗೊಂದಲ ರಹಿತವಾಗಿರುತ್ತದೆ. ಸಂಘಸಂಸ್ಥೆಗಳು ಈ ಹಿನ್ನೆಲೆಯಲ್ಲಿ ಸಮಾಜವನ್ನು ಕಟ್ಟುವ ಕಾಯಕದಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
   ಅಹಮ್ಮದಾಬಾದ್ ಉಚ್ಚ ನ್ಯಾಯಾಲಯವು ಇಂದು ಮಾತೃಭಾಷಾ ಶಿಕ್ಷಣವನ್ನು ಕಡ್ಡಾಯಗೊಳಿಸುವ ಬಗ್ಗೆ ಮಹತ್ವ ದ ತೀಪರ್ುನೀಡಿದ್ದು, ಇದು ಇತರ ರಾಜ್ಯಗಳಿಗೂ ಶೀಘ್ರ ಅನ್ವಯಗೊಳಿಸಿದರೆ ಭಾರತೀಯ ಭಾಷೆಗಳಿಗೆ ಇಂದೆದುರಾಗಿರುವ ಗೊಂದಲಗಳು ನಿವಾರಣೆಯಾಗುವುದು ಎಂದು ತಿಳಿಸಿದರು. ಗಡಿನಡು ಕಾಸರಗೋಡಿನ ಹಿನ್ನೆಲೆಯಲ್ಲಿ ಹುಟ್ಟಿ ಬಂದ ಯಕ್ಷಗಾನ ಪಿತಾಮಹ ಪಾತರ್ಿಸುಬ್ಬ, ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ, ಕಯ್ಯಾರ ಕಿಂಞಿಣ್ಣ ರೈ ಸಹಿತ ಅನೇಕ ಸಾಧಕರ ಕೊಡುಗೆಗಳಿಂದ ಕನ್ನಡ ಸಾರಸ್ವತ ಲೋಕ ಬೆಳಗಿದ್ದು, ಇದು ಇನ್ನಷ್ಟು ಇಲ್ಲಿಂದಲೇ ಬೆಳೆದುಬರಬೇಕು ಎಂದು ತಿಳಿಸಿದರು.
     ಪ್ರಗತಿಪರ ಕೃಷಿಕ, ಸಮಾಜ ಸೇವಕ ಪ್ರಭಾಕರ ಕಲ್ಲೂರಾಯ ಬನದಗದ್ದೆ ಅಧ್ಯಕ್ಷತೆ ವಹಿಸಿದ್ದರು. ಕನರ್ಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಿದರ್ೇಶಕ ಶೌಖತ್ ಅಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕಾರಡ್ಕ ಗ್ರಾ.ಪಂ. ಸದಸ್ಯೆ ರೇಣುಕಾದೇವಿ, ಶಾಲಾ ಪ್ರಬಂಧಕ ಡಾ.ವಿ.ವಿ.ರಮಣ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರಮಾನಂದ ರಾವ್,  ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಕ್ಬಾಲ್ ಮುಳ್ಳೇರಿಯ, ಯಕ್ಷಗಾನ ಅರ್ಥಧಾರಿ, ನಿವೃತ್ತ ಮುಖ್ಯೋಪಾಧ್ಯಾಯ ದೇವಾನಂದ ಶೆಟ್ಟಿ ಕಾನಕ್ಕೋಡು, ಪತ್ರಕರ್ತ ರಾಮಚಂದ್ರ ಬಲ್ಲಾಳ್ ಮೊದಲಾದವರು ಉಪಸ್ಥಿತರಿದ್ದು ಶುಭಾಶಂಸನೆಗೈದರು.ಸಿನಿಮಾ ನಿದರ್ೇಶಕ, ಪತ್ರಕರ್ತ ವೇಣುಗೋಪಾಲ ಶೆಟ್ಟಿ, ಮನು ಪಣಿಕ್ಕರ್, ವಿದ್ಯಾಗಣೇಶ್, ನಿತಿನ್ ಕುಮಾರ್, ಝಡ್ ಎ.ಕಯ್ಯಾರ್, ಲೀಲಾವತಿ ಕನಕಪ್ಪಾಡಿ, ಚಂದ್ರಿಕಾ ಪಂಜರಿಕೆ,ಕನರ್ಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.  ಈ ಸಂದರ್ಭ ಬಹುಮುಖ ಪ್ರತಿಭೆ ಸನ್ನಿಧಿ ಟಿ. ರೈ, ಯಕ್ಷ ಪ್ರತಿಭೆ ಕಿಶನ್ ಅಗ್ಗಿತ್ತಾಯ, ಕರಾಟೆ ಪಟು ಶೈನಿದಾಸ್ರನ್ನು ಈ ಸಂದರ್ಭ ಅಭಿನಂದಿಸಲಾಯಿತು.  ಖ್ಯಾತ ಯಕ್ಷಗಾನ ಕಲಾವಿದ ಪಡುಮಲೆ ಜಯರಾಮ ಪಾಟಾಳಿ, ಪತ್ರಕರ್ತ ಪ್ರಕಾಶ್ ಮಾಸ್ತರ್, ನೃತ್ಯ ಕಲಾವಿದೆ ಶಿಶಿರಾ ಬದಿಯಡ್ಕ, ಗಾಯಕ ವಸಂತ ಬಾರಡ್ಕರಿಗೆ ವಿಶೇಷ ಸನ್ಮಾನಗೈದು ಗೌರವಿಸಲಾಯಿತು.
   ಸಾಂಸ್ಕೃತಿಕ ಅಕಾಡೆಮಿ ಪ್ರಧಾನ ಕಾರ್ಯದಶರ್ಿ ಅಖಿಲೇಶ್ ನಗುಮುಗಂ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರೊ.ಎ.ಶ್ರೀನಾಥ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಬೇಬಿಲತಾ ಎಂ ವಂದಿಸಿದರು.  ಬಳಿಕ ಪುರುಷೋತ್ತಮ ರವರು ಪರೀಕ್ಷಾ ಹಿನ್ನೆಲೆಯಲ್ಲಿ ವಿದ್ಯಾಥರ್ಿಗಳ ಸುಲಭ ಕಲಿಕೆಯ ಬಗ್ಗೆ ತರಗತಿ ನಡೆಸಿದರು.
 

   






  

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries