HEALTH TIPS

No title

             ಕನ್ನಡ ಕಟ್ಟಾಳು, ಗಡಿನಾಡ ಕನ್ನಡ ಸಂತ ಬಿ.ಪುರುಷೋತ್ತಮ ಅಭಿನಂದನ ಸಮಾಲೋಚನ ಸಭೆ
   ಕಾಸರಗೋಡು: ಕಳ್ಳಿಗೆ ಮಹಾಬಲ ಭಂಡಾರಿ, ಯು.ಪಿ.ಕುಣಿಕುಳ್ಳಾಯ ಅವರ ಅದೇ ಮಾದರಿಯಲ್ಲಿ ಕಾಸರಗೋಡಿನ ಕನ್ನಡದ ಉಳಿವು ಬೆಳವಣಿಗೆಗಾಗಿ ತನ್ನ ವೈಯಕ್ತಿಕ ಬದುಕಿಗಿಂತಲೂ ಹೆಚ್ಚು ಕಾಳಜಿವಹಿಸಿ ದುಡಿಯುತ್ತಿರುವ ಹಿರಿಯ ಕನ್ನಡದ ಕಟ್ಟಾಳು, ಗಡಿನಾಡ ಕನ್ನಡ ಸಂತ ಹಾಗೂ ವಿಶ್ರಾಂತ ಮುಖ್ಯೋಪಾಧ್ಯಾಯ ಬಿ.ಪುರುಷೋತ್ತಮ ಅವರಿಗೆ ಫೆ.25 ರಂದು ಪುರುಷೋತ್ತಮ ಅವರ ನಿವಾಸದಲ್ಲಿ ಕಾಸರಗೋಡು ಕನ್ನಡ ಯುವ ಬಳಗದ ನೇತೃತ್ವದಲ್ಲಿ, ಕಾಸರಗೋಡು ಕನ್ನಡ ಪತ್ರಕರ್ತರ ಸಂಘ, ಅಪೂರ್ವ ಕಲಾವಿದರು ಕಾಸರಗೋಡು ಮತ್ತು ಕಾಸರಗೋಡು ಸರಕಾರಿ ಕಾಲೇಜಿನ ಯಕ್ಷಗಾನ ಸಂಶೋಧನ ಕೇಂದ್ರದ ಸಹಯೋಗದೊಂದಿಗೆ ಅಭಿನಂದನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಕಾಸರಗೋಡಿನ ಕನ್ನಡ ಯುವಪಡೆ ಸಜ್ಜಾಗಿದೆ. ಈ ಪ್ರಯುಕ್ತ ಪುರುಷೋತ್ತಮ ಅವರ ವಿದ್ಯಾಥರ್ಿಗಳ, ಅಭಿಮಾನಿಗಳ ಸಮಾಲೋಚನ ಮಹಾಸಭೆ ಫೆಬ್ರವರಿ 18 ಭಾನುವಾರ ಬೆಳಗ್ಗೆ 10 ಗಂಟೆಗೆ ಮೀಪುಗುರಿ ಕಾಳ್ಯಾಂಗಾಡು ಸರಸ್ವತಿ ನಿವಾಸದಲ್ಲಿ ನಡೆಸಲು ಕನ್ನಡ ಯುವಬಳಗವು ತೀಮರ್ಾನಿಸಿದೆ.
  ಭಾಷಾ ಅಲ್ಪಸಂಖ್ಯಾತರಿಗೆ ಸಂವಿಧಾನ ಬದ್ಧವಾಗಿ ಲಭಿಸಬೇಕಾದ ಸವಲತ್ತುಗಳ ಬಗ್ಗೆ ಸದಾ ಕಾಲ ಚಿಂತಿಸಿ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಅಹನರ್ಿಶಿ ದುಡಿಯುತ್ತಿರುವ ಪುರುಷೋತ್ತಮ ಅವರು ಕಳ್ಳಿಗೆ ಕುಣಿಕುಳ್ಳಾಯರು ಹಾಕಿಕೊಟ್ಟ ದಾರಿಯಲ್ಲಿ ಮುಂದೆ ಸಾಗಿದವರು. ಕನ್ನಡ ಪರಂಪರೆ, ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಗಳನ್ನು ಜೀವನದ ಉಸಿರಿನಂತೆ ಪ್ರೀತಿಸುವ ಹಾಗೂ ಗೌರವಿಸುವ ಅವರು ಕನ್ನಡಕ್ಕೆ ಅಪಚಾರವಾದಗಲೆಲ್ಲ ಸಿಡಿದೆದ್ದು ಘಜರ್ಿಸುವ ಮತ್ತು ನ್ಯಾಯಕ್ಕಾಗಿ ತನ್ನ ಸುಖಸೌಖ್ಯಗಳನ್ನು ಬದಿಗಿರಿಸಿ ಕಾಯರ್ೋನ್ಮುಖರಾಗುವ ನಿಸ್ವಾರ್ಥ ತ್ಯಾಗಿ. ವಯೋಸಹಜ ಅನಾರೋಗ್ಯ ಮತ್ತು ಆಯಾಸಗಳನ್ನು ಕಡೆಗಣಿಸಿ ಕನ್ನಡದ ಉಳಿವು ಬೆಳವಣಿಗೆಗಾಗಿ ದುಡಿಯುತ್ತಿರುವ ಈ ಕನ್ನಡ ಸಂತನಿಗೆ ಅವರ ಅಭಿಮಾನಿ ಯುವ ಬಳಗವು ಸಮಾನ ಹೃದಯಿಗಳ ನೈತಿಕ ಸಹಕಾರದೊಂದಿಗೆ ಫೆ. 25 ರಂದು ಅವರ ನಿವಾಸದಲ್ಲಿಯೇ ಅವರನ್ನು ಅಭಿನಂದಿಸಲು ತೀಮರ್ಾನಿಸಿದೆ. ಈ ಪ್ರಯುಕ್ತ ನಡೆಯುವ ಸಮಾಲೋಚನ ಸಭೆಯಲ್ಲಿ ಕಾಸರಗೋಡಿನ ಕನ್ನಡಾಭಿಮಾನಿಗಳೆಲ್ಲರೂ ಭಾಗವಹಿಸಬೇಕೆಂದು ಕನ್ನಡ ಯುವಬಳಗವು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಡಾ.ರತ್ನಾಕರ ಮಲ್ಲಮೂಲೆ, ರಕ್ಷಿತ್ ಪಿ.ಎಸ್. ಅಥವಾ ಪ್ರಶಾಂತ ಹೊಳ್ಳ (ದೂರವಾಣಿ ಸಂಖ್ಯೆ 9446095543, 9048889477, 9744792941) ಅವರನ್ನು ಸಂಪಕರ್ಿಸಬಹುದು

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries