HEALTH TIPS

ಯಾವುದೇ ಶೀರ್ಷಿಕೆಯಿಲ್ಲ

Top Post Ad

Click to join Samarasasudhi Official Whatsapp Group

Qries

          ಕಲೆಗೆ ತನ್ನ ಜೀವನವನ್ನೇ ಮುಡಿಪಾಗಿಟ್ಟ ಕಲಾತಪಸ್ವಿ ಬಾಲಕೃಷ್ಣ ಮಾಸ್ಟರ್
    ಬದಿಯಡ್ಕ:- ಸಂಗೀತ ಹಾಗೂ ನೃತ್ಯ ಶಾಸ್ತ್ರೀಯವಾದುದು, ದೈವದತ್ತವಾದುದು. ಮನಸಿಗೆ ಮುದನೀಡುವ ಹೃದಯಕ್ಕೆ ಹತ್ತಿರವಾಗುವ ಈ ಕಲೆ ಎಲ್ಲಾ ರೀತಿಯ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವ ಸಾಮಥ್ರ್ಯವನ್ನು ಹೊಂದಿದೆ. ಶಿವನ ಕಾಲದಿಂದ ಹಿಮಾಲಯದ ಬೆಟ್ಟದಿಂದ ಇಳಿದು ಬಂದು ಇಂದು ಈ ಮಟ್ಟಕ್ಕೆ ಬೆಳೆದಿದೆ. ಈ ಕಲೆಯನ್ನು ಕಲಿಯುವುದು ಕರಗತಮಾಡಿಕೊಂಡು ಆಸಕ್ತರಿಗೆ ಕಲಿಸುವುದಕ್ಕೆ ಜನ್ಮ ಜನ್ಮಾಂತರದ ಸುಕೃತ ಬೇಕು ಎಂದು ಬ್ರಹ್ಮಶ್ರೀ ವೇದಮೂತರ್ಿ ಪರಮೇಶ್ವರ ಭಟ್ ಪಳ್ಳತ್ತಡ್ಕ ಅಭಿಪ್ರಾಯ ವ್ಯಕ್ತಪಡಿಸಿದರು.
   ಬಾಳೆಗದ್ದೆ ಶಾಸ್ತಾರ ದೇವಸ್ಥಾನದಲ್ಲಿ ಭಾನುವಾರ ದೇವರ ಪುನಃಪ್ರತಿಷ್ಠಾ ಬ್ರಹ್ಮಕಲಶ ಪ್ರಯುಕ್ತ ನಡೆದ ನಾಟ್ಯಗುರು ನಾಟ್ಯನಿಲಯಂ ಮಂಜೇಶ್ವರ ಬಾಲಕೃಷ್ಣ ಮಾಸ್ಟರ್ ಮಂಜೇಶ್ವರ ಅವರನ್ನು ಅಭಿನಂಧಿಸಿ ಮಾತನಾಡುತ್ತಿದ್ದರು.
   ನೋಡುಗರನ್ನು, ಕೇಳುಗರನ್ನು ತನ್ನತ್ತ ಸೆಳೆಯುವ ಶಾಸ್ತ್ರೀಯ ಕಲೆಗಳನ್ನು ಮಾಡುವುದು ಮತ್ತು  ಮಾಡಿಸುವುದು ಸೌಭಾಗ್ಯ. ಅದು ದೈವಾನುಗ್ರಹದಿಂದ ಮಾತ್ರ ಸಾಧ್ಯ. ಅಂತೆಯೇ ಸೂಕ್ತ ಗುರು, ಮಾರ್ಗದರ್ಶಕರೇ ಈ ಕಲೆಯ ನಿಜವಾದ ಪ್ರತಿಪಾದಕರು. ಕಲೆಗೆ ತನ್ನ ಜೀವನವನ್ನೇ ಮುಡಿಪಾಗಿಟ್ಟ ಕಲಾತಪಸ್ವಿ ಬಾಲಕೃಷ್ಣ ಮಾಸ್ಟರ್ ಮಂಜೇಶ್ವರ ಅವರ ಸಾಧನೆಗೆ ಮೇರೆಯಿಲ್ಲ. ಅವರ ತಂಡದ ಅಚ್ಚುಕಟ್ಟಾದ, ಶಿಸ್ತುಬದ್ಧವಾದ, ಆಕರ್ಷಕ ನೃತ್ಯಪ್ರದರ್ಶನ ಒಂದು ಮಾದರಿ ಕಾರ್ಯಕ್ರಮವಾಗಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
  ಈ ಸಂದರ್ಭದಲ್ಲಿ ಶಂಕರ ಭಟ್,ಗೋಪಾಲಕೃಷ್ಣ ಭಟ್,ನರಹರಿ.ಬಿ,ಆಶಾ,ಅನುಜ್ಞಾ ಶಂಕರಿ,ಅನುಷಾ ಮುಂತಾದವರು ಉಪಸ್ಥಿತರಿದ್ದರು. ನೃತ್ಯವರ್ಷ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಾಸ್ತ್ರೀಯ ಹಾಗೂ ಜನಪದ ನೃತ್ಯ ಪ್ರದರ್ಶನ ನೃತ್ಯ ವರ್ಷ-2018 ಜನಮನ ಸೂರೆಗೊಂಡಿತು.
 


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries