HEALTH TIPS

No title

      ರತ್ನಗಿರಿಯಲ್ಲಿ ಕಳಿಯಾಟ ಮಹೋತ್ಸವ ಫೆ. 24 ರಿಂದ
   ಬದಿಯಡ್ಕ: ನೀಚರ್ಾಲು ಸಮೀಪದ ರತ್ನಗಿರಿ ಕುದುರೆಕ್ಕಾಳಿ ಭಗವತೀ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವ ಫೆ.24 ರಿಂದ 27ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
  ಕಳಿಯಾಟ ಮಹೋತ್ಸವದ ಪೂರ್ವಭಾವಿಯಾಗಿ ಫೆ.23 ರಮದು ಬೆಳಿಗ್ಗೆ 9 ರಿಂದ ಚಂಡಿಕಾ ಹೋಮ ಮತ್ತು ಗೋಪುರ ಸಮರ್ಪಣಾ ಕಾರ್ಯಕ್ರಮ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.
   ಫೆ.24 ರಂದು ಬೆಳಿಗ್ಗೆ ಪ್ರತಿಷ್ಠಾ ದಿನಾಚರಣೆ ಅಂಗವಾಗಿ ಗಣಪತಿ ಹೋಮ, ಶುದ್ದಿಕಲಶ,10 ರಿಂದ ನೀಚರ್ಾಲು ಅಶ್ವತ್ಥ ಕಟ್ಟೆಯಿಂದ ಶ್ರೀಕ್ಷೇತ್ರಕ್ಕೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಆಗಮಿಸುವುದು. 11.30 ರಿಂದ ತುಲಾಭಾರ ಸೇವೆ, ಪೂಜೆ, ಪ್ರಸಾದ ವಿತರಣೆ, ಅನ್ನದಾನಗಳು ನಡೆಯಲಿವೆ. ಫೆ.25 ರಂದು ಬೆಳಿಗ್ಗೆ 8.30 ರಿಂದ 10ರ ವರೆಗೆ ಭಜನಾ ಸಮಕೀರ್ತನೆ, 11 ರಿಂದ ಕುದುರೆಕ್ಕಾಳಿ ಭಗವತಿ(ಅಶ್ವಾರೂಢ ಪಾರ್ವತಿ)ಗೆ ತಂಬಿಲ, ಪೂಜೆ, ಪ್ರಸಾದ ವಿತರಣೆ, ಅನ್ನದಾನ ನಡೆಯಲಿದೆ. ಸಂಜೆ 4ಕ್ಕೆ ಬಬ್ಬರಿಯ ಕಟ್ಟೆಯಲ್ಲಿ ತಂಬಿಲ, 7.30 ರಿಂದ ಬಾಲಕಲಾವಿದರಿಂದ ನೃತ್ಯ ಕಾರ್ಯಕ್ರಮ, ರಾತ್ರಿ 9ಕ್ಕೆ ಶ್ರೀವಿಷ್ಣುಮೂತರ್ಿ ದೈವದ ಭಂಡಾರ ತೆಗೆಯುವುದು, 10 ರಿಂದ ವಿಷ್ಣುಮೂತರ್ಿ ದೈವದ ಕುಳಿಚ್ಚಾಟ ನಡೆಯಲಿದೆ.
  ಫೆ.26 ರಂದು ಬೆಳಿಗ್ಗೆ 10 ರಿಂದ ಶ್ರೀವಿಷ್ಣುಮೂತರ್ಿ ದೈವದ ಕೋಲ, ಪ್ರಸಾದ ವಿತರಣೆ,ಅನ್ನದಾನ ನಡೆಯಲಿದೆ.ಅಪರಾಹ್ನ 2.30 ರಿಂದ ಯಕ್ಷಭಾರತಿ ನೀಚರ್ಾಲು ತಮಡದವರಿಂದ ಯಕ್ಷಗಾನ ತಾಳಮದ್ದಳೆ, ಸಂಜೆ 7.30ಕ್ಕೆ ರಕ್ತಚಾಮುಂಡಿ ದೈವದ ಭಂಡಾರ ತೆಗೆಯುವುದು, 9ಕ್ಕೆ ರಕ್ತಚಾಮುಂಡಿ ದೈವದ ತೊಡಂಙಲ್ ನಡೆಯಲಿದೆ.
   ರಾತ್ರಿ 8 ರಿಂದ ಹೊನ್ನಾವರದ ಕಲಾಧರ ಯಕ್ಷರಂಗ ಬಳಗದವರಿಂದ ನಾಗಶ್ರೀ-ಚಿತ್ರಾಕ್ಷಿ ಪ್ರಸಂಗಗಳ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.
  ಫೆ.27 ರಂದು ಬೆಳಿಗ್ಗೆ 10 ರಿಂದ ರಕ್ತಚಾಮುಂಡಿ ದೈವದ ಕೋಲ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ 3 ರಿಂದ ಗುಳಿಗನ ಕೋಲ ಪ್ರಸಾದ ವಿತರಣೆಯೊಂದಿಗೆ ಕಳಿಯಾಟ ಮಹೋತ್ಸವ ಸಂಪನ್ನಗೊಳ್ಳಲಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries