ಫೆ.7ರಂದು ಶ್ರವಣಬೆಳಗೊಳಕ್ಕೆ ರಾಷ್ಟ್ರಪತಿ
ಪ್ರಥಮ ಪ್ರಜೆಯಿಂದ ಮಹಾಮಸ್ತಕಾಭಿಷೇಕಕ್ಕೆ ಚಾಲನೆ
ಹಾಸನ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಫೆ.7ರಂದು ಶ್ರವಣಬೆಳಗೊಳಕ್ಕೆ ಆಗಮಿಸಲಿದ್ದು, ಮಹಾಮಸ್ತಕಾಭಿಷೇಕಕ್ಕೆ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 10.20ಕ್ಕೆ ಶ್ರವಣಬೆಳಗೊಳಕ್ಕೆ ಆಗಮಿಸುವ ರಾಷ್ಟ್ರಪತಿ ಅವರು 10.45ಕ್ಕೆ ಮಹಾಮಸ್ತಕಾಭಿಷೇಕ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. 12 ಗಂಟೆಗೆ ಶ್ರವಣಬೆಳಗೊಳದಿಂದ ಮರಳಲಿದ್ದಾರೆ.
ಮಹಾಮಸ್ತಕಾಭಿಷೇಕದ ಉದ್ಘಾಟನಾ ಸಮಾರಂಭಕ್ಕೆ ರಾಷ್ಟ್ರಪತಿಯವರು ಆಗಮಿಸುವುದು ಈವರೆಗೂ ಖಚಿತವಾಗಿರಲಿಲ್ಲ. ಈಗ ಅವರ ಭೇಟಿ ಖಚಿತವಾಗಿದ್ದು, ಪೊಲೀಸರು ಬಂದೋಬಸ್ತ್ ಕ್ರಮಗಳನ್ನು ಆರಂಭಿಸಿದ್ದಾರೆ. 1994ರಲ್ಲಿ ಜರುಗಿದ ಮಹಾಮಸ್ತಕಾಭಿಷೇಕದ ಉದ್ಘಾಟನೆಗೆ ಅಂದಿನ ರಾಷ್ಟ್ರಪತಿ ಶಂಕರ್ದಯಾಳ್ ಶರ್ಮ ಆಗಮಿಸಿದ್ದರು. 2006ರಲ್ಲಿ ನಡೆದ ಮಹಾಮಸ್ತಕಾಭಿಷೇಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಡಾ.ಎಪಿಜೆ ಅಬ್ದುಲ್ ಕಲಾಂ ಪಾಲ್ಗೊಂಡಿದ್ದರು.
ರಾಷ್ಟ್ರಪತಿಯವರು ಮಹಾಮಸ್ತಕಾಭಿಷೇಕದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವುದರಿಂದ ಮಹಾಮಸ್ತಕಾಭಿಷೇಕಕ್ಕೆ ರಾಷ್ಟ್ರವ್ಯಾಪಿ ಪ್ರಾಮುಖ್ಯತೆ ಸಿಗಲಿದೆ. ಹಾಗಾಗಿ, ಮಹಾಮಸ್ತಕಾಭಿಷೇಕಕ್ಕೆ ರಾಷ್ಟ್ರಪತಿ ಅಥವಾ ಪ್ರಧಾನ ಮಂತ್ರಿಯವರನ್ನು ಆಹ್ವಾನಿಸಲಾಗುತ್ತದೆ.
1981ರಲ್ಲಿ ನಡೆದ ಬಾಹುಬಲಿ ಸಹಸ್ರಮಾನ ಮಹಾಮಸ್ತಕಾಭಿಷೇಕದಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಪಾಲ್ಗೊಂಡು, ಬಾಹುಬಲಿ ಮೂತರ್ಿಯ ಮೇಲೆ ಹೆಲಿಕಾಪ್ಟರ್ನಲ್ಲಿ ಪುಷ್ಪಾಭಿಷೇಕ ಮಾಡಿದ್ದರು. ಇಂದಿರಾ ಗಾಂಧಿಯವರು ಪಾಲ್ಗೊಂಡಿದ್ದ ನಂತರ ಇದುವರೆಗೆ ಯಾವುದೇ ಪ್ರಧಾನ ಮಂತ್ರಿಗಳು ಪಾಲ್ಗೊಂಡಿಲ್ಲ.
ಫೆ.7ರಂದು ಉದ್ಘಾಟನೆ: ಫೆ.7ರಂದು ಮಹಾಮಸ್ತಕಾಭಿಷೇಕದ ಉದ್ಘಾಟನೆ ನಡೆಯಲಿದ್ದು, 8 ರಿಂದ 11 ರ ವರೆಗೆ ಪಂಚ ಕಲ್ಯಾಣ ಮಹೋತ್ಸವಗಳು ನಡೆಯಲಿವೆ. ಫೆ.12 ರಿಂದ 15 ರವರೆಗೆ ಪಂಚಪರಮೇಷ್ಠಿ ಆರಾಧನೆಗಳು ಜರುಗಲಿದ್ದು, 16ರಂದು ಬಾಹುಬಲಿ ಮೂತರ್ಿ ನೆಲೆ ನಿಂತಿರುವ ವಿಂಧ್ಯಗಿರಿ ಸುತ್ತ ಬೃಹತ್ ಮೆರವಣಿಗೆ ಮತ್ತು ರಥೋತ್ಸವ ನಡೆಯಲಿದೆ. ಫೆ.17ರಂದು ಬಾಹುಬಲಿ ಮೂತರ್ಿಗೆ 108 ಕಲಶಗಳಿಂದ ಅಭಿಷೇಕ ಮತ್ತು ಪಂಚಾಮೃತ ಅಭಿಷೇಕದೊಂದಿಗೆ ಮಹಾಮಸ್ತಕಾಭಿಷೇಕ ಆರಂಭವಾಗಲಿದೆ. ಫೆ.25 ರ ವರೆಗೆ ಪ್ರತಿನಿತ್ಯ ಅಭಿಷೇಕ ಮತ್ತು ಪಂಚಾಮೃತ ಅಭಿಷೇಕ ನಡೆಯಲಿದೆ. ಫೆ.26 ರಂದು ಮಹಾಮಸ್ತಕಾಭಿಷೇಕದ ಸಮಾರೋಪ ಸಮಾರಂಭ ನಡೆಯಲಿದೆ.