ಉಪ್ಪಳ: ಆಧುನಿಕ ಕಾಲಘಟ್ಟದ ಭವ್ಯ ಭಾರತ ನಿಮರ್ಾಣದಲ್ಲಿ ಶಿಕ್ಷಣ ಮಹತ್ವದ ಕೊಡುಗೆ ನೀಡಿದೆ. ಶಿಸ್ತಿನ ಜೊತೆಯಲ್ಲಿ ವಿದ್ಯಾಥರ್ಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿರುವ ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಿಗೂ ಪೋಷಕರು, ಅಧ್ಯಾಪಕರು ಹೆಚ್ಚಿನ ಮಹತ್ವ ನೀಡಬೇಕಿದೆ ಎಂದು ಪೈವಳಿಕೆ ಗ್ರಾ.ಪಂ ಸದಸ್ಯ ಆಟಿಕುಕ್ಕೆ ಸುಬ್ರಹ್ಮಣ್ಯ ಭಟ್ ಹೇಳಿದರು.
ಬಾಯಾರುಪದವು ಸಜಂಕಿಲ ಶ್ರೀ ದುಗರ್ಾಪರಮೇಶ್ವರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಾಷರ್ಿಕೋತ್ಸವನ್ನು ಶುಕ್ರವಾರ ದೀಪ ಬೆಳಗಿಸಿ ಉದ್ಘಾಟಿಸಿದ ಅವರು ಮಾತನಾಡಿದರು.
ಶಿಕ್ಷಣ ಸತ್ವಯುತ ಹಾಗೂ ಮೌಲ್ಯಯುತವಾದಲ್ಲಿ ಸಮಾಜ ಅಭ್ಯುದಯದ ಜೊತೆ ನಾಡಿನ ಪ್ರಗತಿಗೆ ನಾಂದಿ ಹಾಡಲಿದೆ ಎಂದರು. ನೂತನ ಶಾಲಾ ಕೊಠಡಿಯನ್ನು ಲೋಕರ್ಪಣೆಗೈದು ಮಾತನಾಡಿದ ಮಂಜೇಶ್ವರ ಉಪಜಿಲ್ಲಾ ಸಹಾಯಕ ಶಿಕ್ಷಣಾಧಿಕಾರಿ ದಿನೇಶ್.ವಿ. ರಾಜ್ಯದಲ್ಲಿ ಶಿಕ್ಷಣ ಸಂರಕ್ಷಣ ಯಜ್ಞದ ಮೂಲಕ ಸರಕಾರಿ ಹಾಗೂ ಅನುದಾನಿತ ಶಾಲೆಗಳ ಪ್ರಗತಿ ಸಾಧ್ಯವಾಗಿದೆ. ಆಧುನಿಕ ಶಿಕ್ಷಣದ ಕಾಲಘಟ್ಟದಲ್ಲಿರುವ ನಮಗೆ ಪೂರಕ ಶಿಕ್ಷಣ ಹಾಗೂ ಶಾಲೆಗಳ ಭೌತಿಕ ಅಭಿವೃದ್ಧಿಗೆ ಸಂರಕ್ಷಣ ಯಜ್ಞ ಉತ್ತಮ ಮಾದರಿ ಯೋಜನೆಯಾಗಿದೆ ಎಂದರು. ಗಡಿನಾಡಿನ ಹಲವು ಶಾಲೆಗಳಲ್ಲಿ ಮಧುರ ಕನ್ನಡ ಕಾರ್ಯಕ್ರಮಗಳ ಮೂಲಕ ಕನ್ನಡ ಭಾಷಾ ಶಿಕ್ಷಣಕ್ಕೆ ಮಹತ್ವ ನೀಡಲಾಗಿದೆ. ವಿದ್ಯಾಥರ್ಿಗಳು ಗಣಿತ ಹಾಗೂ ವಿಜ್ಞಾನ ವಿಷಯಗಳಲ್ಲಿ ಆಸಕ್ತಿ ಮೂಡಿಸುವ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಸರಕಾರ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ನಡೆಯುವ ಯೋಜನೆಗಳ ಮೂಲಕ ಮಂಜೇಶ್ವರ ಉಪಜಿಲ್ಲೆಯ ಹಲವು ಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಣ, ಸ್ಮಾಟರ್್ಕ್ಲಾಸ್ ಸೌಲಭ್ಯಕಲ್ಪಿಸುವ ಮೂಲಕ ಶೈಕ್ಷಣಿಕ ಪ್ರಗತಿಗೆ ನಾಂದಿ ಹಾಡಲಾಗಿದೆ. ಉದ್ಯಾವರ ಶಾಲೆಯಲ್ಲಿ ಸುಮಾರು 1 ಕೋಟಿ ರೂ.ವೆಚ್ಚದಲ್ಲಿ ಆಧುನಿಕ ಸೌಲಭ್ಯವನ್ನು ನೀಡಲು ಶಿಕ್ಷಣ ಸಂರಕ್ಷಣ ಯಜ್ಞದ ಮೂಲಕ ಸಾಧ್ಯವಾಗಿರುವುದು ಯೋಜನೆಯ ಮಹತ್ವವನ್ನು ಬಿಂಬಿಸುತ್ತದೆ ಎಂದು ತಿಳಿಸಿದರು.
ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಸೇವೆಯಿಂದ ನಿವೃತ್ತರಾಗಲಿರುವ ಹರೀಶ್ ಪರಾಡ್ಕರ್ ಅವರನ್ನು ಶಾಲಾ ಪ್ರಬಂಧಕ ಗೋಪಾಲಕೃಷ್ಣ ಭಟ್ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು.
ಬಾಯಾರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮುರಳೀಧರ ಶೆಟ್ಟಿ, ಬ್ಲಾಕ್ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ವಿಜಯಕುಮಾರ್.ಪಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಮಾತೃ ಸಂಘದ ಅಧ್ಯಕ್ಷೆ ಶಾಂಭವಿ, ಡಯಟ್ ಮಾಯಿಪ್ಪಾಡಿಯ ಸತ್ಯಪ್ರಕಾಶ್ ಶುಭಾಶಂಸನೆಗೈದರು. ವಿವಿಧ ಸ್ಪಧರ್ೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾಥರ್ಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ರಮೇಶ್ ಬಾಯಾರು ತಮ್ಮ ಹಿರಿಯರ ಸ್ಮರಣಾರ್ಥ ಆರಂಭಿಸಿದ ದತ್ತನಿಧಿಯನ್ನು ವಿತರಿಸಿದರು. ಮುಖ್ಯೋಪಾಧ್ಯಾಯ ಶ್ರೀಕಾಂತ್.ವಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು, ಅಧ್ಯಾಪಕ ರಮಾನಂದ ಕೆದುಕೋಡಿ ಕಾರ್ಯಕ್ರಮ ನಿರೂಪಿಸಿದರು.ಸಭಾ ಕಾರ್ಯಕ್ರಮದ ನಂತರ ವಿದ್ಯಾಥರ್ಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.