HEALTH TIPS

ಯಾವುದೇ ಶೀರ್ಷಿಕೆಯಿಲ್ಲ

          ಹೊಸ ತಲೆಮಾರಿಗೆ ಜಲದರಿವಿನ ಪಾಠ
      ಅದಕ್ಕಿದೆ ಬೆಳ್ಳೂರಿನಲ್ಲಿ ಜಲನಿಧಿ ಮಕ್ಕಳ ಕೂಟ- ಜಲನಿಧಿ ವಿದ್ಯಾಥರ್ಿಗಳಿಗೆ ಜಲಸಂರಕ್ಷಣಾ ಪಾಠ-ಕ್ಷೇತ್ರ ಸಂದರ್ಶನ
    ಮುಳ್ಳೇರಿಯ: ಬೆಳ್ಳೂರು ಗ್ರಾ.ಪಂ. ಶುದ್ದ ಜಲ ಪೂರೈಕೆಗಾಗಿ ಜಾರಿಗೆ ತಂದಿರುವ ಜಲನಿಧಿ ಯೋಜನೆಯ ಎರಡನೇ ಹಂತವಾಗಿ ಬೆಳ್ಳೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯನ್ನು ಕೇಂದ್ರೀಕರಿಸಿ ಜಲನಿಧಿ ವಿದ್ಯಾಥರ್ಿ ಕ್ಲಬ್ ನ್ನು ರೂಪೀಕರಿಸಿದ್ದು ಹೊಸ ತಲೆಮಾರಿಗೆ ಜಲದ ಮಹತ್ವವನ್ನು ಸಮಗ್ರವಾಗಿ ಪರಿಚಯಿಸುವ ಯತ್ನದ ಮೂಲಕ ಗಮನ ಸೆಳೆಯುತ್ತಿದೆ. ವಿದ್ಯಾಥರ್ಿಗಳಿಗೆ ಜಲಸಂರಕ್ಷಣೆ, ಜಲಮರುಪೂರಣ, ಕೃಷಿ ವ್ಯವಸಾಯದ ಮಹತ್ವ ಮೊದಲಾದ ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಪರಿಸರ, ಜಲ ಸಂರಕ್ಷಣೆಗೆ ಭಾವೀ ಜನಾಂಗವನ್ನು ರೂಪಿಸುವಲ್ಲಿ ಇತರೆಡೆಗಳಿಗಿಂತ ಭಿನ್ನವಾಗಿ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು, ಭರವಸೆಗೆ ಕಾರಣವಾಗಿದೆ.
   ಈ ಹಿನ್ನೆಲೆಯಲ್ಲಿ ಬೆಳ್ಳೂರು ಗ್ರಾಮ ಪಂಚಾಯತು ಜಲನಿಧಿಯ ಆಶ್ರಯದಲ್ಲಿ ಬೆಳ್ಳೂರು ಸರಕಾರಿ ಹ್ಯಯರ್ ಸೆಕೆಂಡರಿ ಶಾಲೆಯ ಜಲಧಾರಾ ಕ್ಲಬ್ನ ವಿದ್ಯಾಥರ್ಿಗಳಿಗೆ ಜಲಸಂರಕ್ಷಣಾ ಅಧ್ಯಯನ ಯಾತ್ರೆಯನ್ನು ಬುಧವಾರ ಹಮ್ಮಿಕೊಂಡಿತು. 
    ಮೂವತ್ತೈದು ವಿದ್ಯಾಥರ್ಿಗಳನ್ನೊಳಗೊಂಡ  ಜಲಧಾರಾ ಕ್ಲಬ್ ತಂಡಕ್ಕೆ ಹಿರಿಯ ಶಿಕ್ಷಕ ಕುಂಞಿರಾಮ ಮಾಸ್ತರ್ ಹಾಗೂ ಸ್ನೇಹರಂಜನ್ ಮಾಸ್ತರ್ ನೇತೃತ್ವ ನೀಡಿದರು. ಬೆಳ್ಳೂರು ಗ್ರಾ.ಪಂ. ಜಲನಿಧಿ ಸದಸ್ಯರು ಪಾಲ್ಗೊಂಡಿದ್ದರು.
  ತಮಡವು ಪ್ರಗತಿಪರ ಕೃಷಿಕ ಮುಳ್ಳಂಕೊಚ್ಚಿ ಗೋವಿಂದ ಭಟ್ ರವರ ತೋಟಕ್ಕೆ ಭೇಟಿ ನೀಡಿ ಅವರು ಅನುಸರಿಸುವ ವಿವಿಧ ಕೃಷಿ ಯೋಜನೆಗಳನ್ನು, ಜಲಸಂರಕ್ಷಣಾ ವಿಧಾನಗಳನ್ನು ವೀಕ್ಷಿಸಿ ಮಾಹಿತಿ ಕಲೆಹಾಕಲಾಯಿತು. ವಿದ್ಯಾಥರ್ಿಗಳು ಗೋವಿಂದ ಭಟ್ ರವರೊಂದಿಗೆ ಸಂವಾದ ನಡೆಸಿದರು. ಬೆಳ್ಳೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾಗಿ, ಸದಸ್ಯರಾಗಿ ಅನುಭವವಿರುವ ಗೋವಿಂದ ಭಟ್ ಬೆಳ್ಳೂರು ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ಮೊತ್ತಮೊದಲು ರಬ್ಬರ್ ಕೃಷಿಯನ್ನು ಆರಂಭಿಸಿದ ಪ್ರಮುಖರಾಗಿದ್ದು, ತಾವು ಕೃಷಿ ಉಪಯೋಗಕ್ಕಾಗಿ ನಿಮರ್ಿಸಿದ ಕಿರು ಕಿಂಡಿ ಅಣೆಕಟ್ಟು ಪರಿಸರಕ್ಕೆ ವಿದ್ಯಾಥರ್ಿಗಳನ್ನು ಕರೆದೊಯ್ದು ಜಲಸಂರಕ್ಷಣೆಯಲ್ಲಿ ಅಣೆಕಟ್ಟುಗಳ ಪಾತ್ರದ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
   ಬೆಳ್ಳೂರು ಗ್ರಾ.ಪಂ. ಜಲನಿಧಿ ಯೋಜನೆಯ ಅಭಿಯಂತರ ರಿನಿ ಸೆಬಾಸ್ಟಿಯನ್ ಉಪಸ್ಥಿತರಿದ್ದು, ಕುಂಟಾರಿನಿಂದ ಬೆಳ್ಳೂರಿನ 1160 ಕುಟುಂಬಗಳಿಗೆ ನೀರೊದಗಿಸುವ ಜಲನಿಧಿ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಬಳಿಕ ಜಲನಿಧಿ ಕ್ಲಬ್ನ ವಿದ್ಯಾಥರ್ಿಗಳು ಕುಂಟಾರು ತೂಗುಸೇತುವೆಯನ್ನು ವೀಕ್ಷಿಸಿದರು. ತಂಡದ ಕಾರ್ಯದಶರ್ಿ ನಜುಮುನ್ನೀಸಾ ಟೀಚರ್, ಶೋಭಾ ಎಂ ತಮಡದೊಂದಿಗೆ ಮಾರ್ಗದರ್ಶಕರಾಗಿ ಸಹಕರಿಸಿದರು.
 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries