ಇಂದು ಪದ್ಮಗಿರಿ ಕಲಾ ಕುಟೀರದಲ್ಲಿ ಡಾ.ಸಂಪದಾ ಭಟ್ ಮರಬಳ್ಳಿಯವರಿಂದ ಮಾಧವ ಬಾರೋ
ಕಾಸರಗೋಡು: ಭಕ್ತಿ - ಭಾವದ ಗಾಯನ ಗಂಗೆ ಹರಿಸುವ ಡಾ.ಸಂಪದಾ ಭಟ್ ಮರಬಳ್ಳಿ ಅಂತಾರಾಷ್ಟ್ರೀಯ ಖ್ಯಾತಿಯ ಹಿಂದುಸ್ಥಾನಿ ಗಾಯಕಿ. ಸಂಗೀತದ ಸೊಗಡನ್ನು ಉಣಿಸುವಲ್ಲಿ ಕ್ರಿಯಾಶೀಲ ತೋರುತ್ತಾ ಶ್ರೋತೃಗಳ ಮನಸೆಳೆಯುವಲ್ಲಿ ಯಶಸ್ವಿಯಾಗುತ್ತಾ ಬಂದಿದ್ದಾರೆ. ಭಾವಪೂರ್ಣತೆಯಿಂದ ಹಾಡುತ್ತಾ ಶ್ರೋತೃಗಳಲ್ಲೂ ಭಕ್ತಿ ಭಾವದ ತರಂಗಗಳನ್ನು ಹೊಸತನದೊಂದಿಗೆ ಸಂಪ್ರದಾಯದ ಚೌಕಟ್ಟಿನಲ್ಲೇ ಉಣಬಡಿಸುವುದು ಇವರ ವಿಶೇಷ.
ಉತ್ತರ ಕನರ್ಾಟಕದ ಹೊನ್ನಾವರದಲ್ಲಿ ಜನಿಸಿದ ಡಾ|ಸಂಪದಾ ಭಟ್ ಮರಬಳ್ಳಿ ಅವರು ವಿದ್ವಾಂಸರಾಗಿ, ಶಿಕ್ಷಕಿಯಾಗಿ, ಸಂಗೀತ ಶಾಸ್ತ್ರಜ್ಞರಾಗಿ, ಸಂಯೋಜಕರಾಗಿ ಸಂಗೀತದಲ್ಲಿ ತನ್ನದೆ ಆದ ಛಾಪನ್ನು ಮೂಡಿಸಿ ತನ್ನ ಮಧುರ ಸ್ವರದಿಂದ ಶ್ರೋತೃಗಳನ್ನು ಮಂತ್ರಮುಗ್ಧರನ್ನಾಗಿಸುತ್ತಾರೆ. ಸಾಮಾನ್ಯ ಮತ್ತು ಅಸಾಮಾನ್ಯ ರಾಗಗಳ ಮಾಧುರ್ಯದಲ್ಲಿ ಶ್ರೀಮಂತ ಮತ್ತು ಗಮನಾರ್ಹ ಧ್ವನಿಯನ್ನು ಹೊಂದಿರುವ ಅವರು ಲಯಬದ್ಧ ಸಂಗೀತದಿಂದ ಮನಸೂರೆಗೊಳ್ಳುತ್ತಾರೆ.
ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಹಿಂದುಸ್ಥಾನಿ ಸಂಗೀತ ಮತ್ತು ರಾಗಮಾಲ ಪೈಂಟಿಂಗ್ಸ್ನಲ್ಲಿ ಡಾಕ್ಟರೇಟ್ ಪಡೆದ ಅವರು ಧಾರವಾಡದ ಕನರ್ಾಟಕ ವಿಶ್ವವಿದ್ಯಾಲಯದಿಂದ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಹೊನ್ನಾವರ ಎಸ್.ಡಿ.ಎಂ. ಕಾಲೇಜಿನಿಂದ ಪದವಿ ಪಡೆದ ಅವರು ಯುಕೆಯ ಆಕ್ಸ್ಫಡರ್್ ಬ್ರೂಕ್ಸ್ ವಿಶ್ವವಿದ್ಯಾಲಯದಿಂದ ಡಿಪ್ಲೋಮಾ ಆಫ್ ಫೊಫೇಶನಲ್ ಸ್ಟಡೀಸ್ ಇನ್ ಎಜುಕೇಶನ್, ಕನರ್ಾಟಕ ಸೆಕೆಂಡರಿ ಎಜುಕೇಶನ್ ಬೋಡರ್್ನಿಂದ ವಿದ್ವತ್ ಪಡೆದಿದ್ದಾರೆ. ಧಾರವಾಡ ಆಕಾಶವಾಣಿಯ ಬಿ ಹೈಗ್ರೇಡ್ (ಕೊಂಕಣಿ) ಮತ್ತು ಧಾರವಾಡ ಹಾಗೂ ಬೆಂಗಳೂರು ಆಕಾಶವಾಣಿಯ ಬಿ ಹೈಗ್ರೇಡ್ (ಕನ್ನಡ) ಕಲಾವಿದೆಯಾಗಿದ್ದಾರೆ. ಬೆಂಗಳೂರಿನ ಮಲ್ಯ ಅದಿತಿ ಇಂಟರ್ ನ್ಯಾಶನಲ್ ಸ್ಕೂಲ್ನಲ್ಲಿ ಸಂಗೀತ ಅಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇಂದು ಭಕ್ತಿ -ಭಾವ ಗೀತೆಗಳ ಗಾಯನ `ಮಾಧವ ಬಾರೋ' : ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆಯಾಗಿರುವ ರಂಗಚಿನ್ನಾರಿ ಕಾಸರಗೋಡು ಇದರ ಆಶ್ರಯದಲ್ಲಿ ಮಾಧವ ನಿಲಯ ಅಪರ್ಿಸುವ ಅಂತಾರಾಷ್ಟ್ರೀಯ ಹಿಂದೂಸ್ಥಾನಿ ಗಾಯಕಿ ಡಾ|ಸಂಪದಾ ಭಟ್ ಮರಬಳ್ಳಿ ಅವರಿಂದ ಭಕ್ತಿ - ಭಾವ ಗೀತೆಗಳ ಗಾಯನ `ಮಾಧವ ಬಾರೋ' ಕಾರ್ಯಕ್ರಮ ಫೆ.11 ರಂದು ಸಂಜೆ 5 ರಿಂದ ಕರಂದಕ್ಕಾಡಿನ `ಪದ್ಮಗಿರಿ ಕಲಾಕುಟೀರ'ದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ತಂತ್ರಿವರ್ಯರಾದ ಬ್ರಹ್ಮಶ್ರೀ ಉಳಿಯ ವಿಷ್ಣು ಆಸ್ರ ಅವರು ಉದ್ಘಾಟಿಸುವರು. ಶಿವಳ್ಳಿ ಬ್ರಾಹ್ಮಣ ಸಭಾ ಕೇಂದ್ರ ಸಮಿತಿ ಅಧ್ಯಕ್ಷ ಲಕ್ಷ್ಮೀಶ ರಾವ್ ಕಡಂಬಾರು ಅಧ್ಯಕ್ಷತೆ ವಹಿಸುವರು. ಇದೇ ಸಂದರ್ಭದಲ್ಲಿ ಹಿರಿಯ ಹೊಟೇಲ್ ಉದ್ಯಮಿ ಸದಾಶಿವ ಉಡುಪ ಅವರನ್ನು ಸಮ್ಮಾನಿಸಲಾಗುವುದು.
ಆ ಬಳಿಕ ಡಾ|ಸಂಪದಾ ಭಟ್ ಮರಬಳ್ಳಿ ಅವರ ಗಾಯನಕ್ಕೆ ತಬಲಾದಲ್ಲಿ ಅಭಿಜಿತ್ ಶೆಣೈ, ಹಾಮರ್ೋನಿಯಂನಲ್ಲಿ ಸತ್ಯನಾರಾಯಣ ಐಲ, ಕೊಳಲಿನಲ್ಲಿ ಲೋಕೇಶ್ ಮೂಡಬಿದ್ರೆ ಸಹಕರಿಸುವರು.
ಎಡನೀರಿನ ಶ್ರೀ ವಿಷ್ಣುಮಂಗಲ ದೇವಾಯಲದ ವಾಷರ್ಿಕೋತ್ಸವದ ಪ್ರಯುಕ್ತ ಫೆ.12 ರಂದು ರಾತ್ರಿ 7.30 ರಿಂದ ಡಾ|ಸಂಪದಾ ಭಟ್ ಮರಬಳ್ಳಿ ಅವರಿಂದ `ದಾಸ ಸಂಪದ' ಸಂಗೀತ ಕಾರ್ಯಕ್ರಮ ನಡೆಯಲಿರುವುದು.