HEALTH TIPS

No title

           ತೂಮಿನಾಡು ಸಾರ್ವಜನಿಕ ಶ್ರೀ ಮಹಾಕಾಳಿ ಭಜನಾ ಮಂದಿರದ ಬೆಳ್ಳಿಬಿಂಬ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ
   ಮಂಜೇಶ್ವರ: ಕುಂಜತ್ತೂರು ಸಮೀಪದ ತೂಮಿನಾಡು ಸಾರ್ವಜನಿಕ ಶ್ರೀ ಮಹಾಕಾಳಿ ಭಜನಾ ಮಂದಿರದ ಬೆಳ್ಳಿಬಿಂಬ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸೋಮವಾರ ಆರಂಭಗೊಂಡಿದ್ದು, ಬುಧವಾರದ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದೆ.
   ಸೋಮವಾರ ಬೆಳಿಗ್ಗೆ ಗಣಪತಿ ಹೋಮ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಅಪರಾಹ್ನ ಉದ್ಯಾವರ ಮಾಡ ಶ್ರೀಕ್ಷೇತ್ರದ ಬಳಿಯಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಶ್ರೀಕ್ಷೇತ್ರಕ್ಕೆ ಆಗಮನ, ಸಂಜೆ ತಂತ್ರಿಗಳ ಆಗಮನ, ಸಾಮೂಹಿಕ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ, ಪ್ರಸಾದ ಶುದ್ದಿ, ವಾಸ್ತುಹೋಮ, ಅಧಿವಾಸ ಹೋಮ, ವಾಸ್ತುಬಲಿ, ಪ್ರಕಾರ ಬಲಿ, ಅಘೋರ ಹೋಮಗಳು ನಡೆದವು. ಬಳಿಕ ಸಂಜೆ 7 ಗಂಟೆಗೆ ನಡೆದ ಧಾಮರ್ಿಕ ಸಭೆಯನ್ನು ಕಟೀಲು ಕ್ಷೇತ್ರದ ಬ್ರಹ್ಮಶ್ರೀ ಅನಂತಪದ್ಮನಾಭ ಆಸ್ರಣ್ಣ ದೀಪ ಬೆಳಗಿಸಿ ಉದ್ಘಾಟಿಸಿದರು. ಕುಂಜತ್ತೂರು ಮಹಾಲಿಂಗೇಶ್ವರ ಕ್ಷೇತ್ರದ ಮೊಕ್ತೇಸರ ವಿ.ರವೀಂದ್ರ ರಾವ್, ಡಾ.ಜಯಪಾಲ ಶೆಟ್ಟಿ, ರಾಜ ಬೆಳ್ಚಡ, ನಾರಾಯಣ ಹೆಗ್ಡೆ ಕೋಡಿಬೈಲು, ಶ್ರೀನಿವಾಸ ಆಳ್ವ, ಟಿ.ಲಕ್ಷ್ಮಣ ಸಾಲ್ಯಾನ್, ಗೋಪಾಲ ಬಂದ್ಯೋಡು, ಕೃಷ್ಣಪ್ಪ ಪೂಜಾರಿ ದೇರಂಬಳ, ಪಿ.ಆರ್.ಶೆಟ್ಟಿ ಪೊಯ್ಯೆಲು, ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಜಯಂತ ಎಂ,ಪೋಲೀಸ್ ಠಾಣಾಧಿಕಾರಿ ಅನೂಪ್ ಮೊದಲಾದವರು ಉಪಸ್ಥಿತರಿದ್ದರು. ಜೀಣರ್ೋದ್ದಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಿಕ ರಾತ್ರಿ 8 ರಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಟ್ಯಾಚಾರ್ಯ ಬಾಲಕೃಷ್ಣ ಮಮಜೇಶ್ವರರ ಶಿಷ್ಯೆ ಅಕ್ಷತಾ ಎಂ.ಆರ್ ಚಕ್ರತೀರ್ಥ ರಿಂದ ಭರತನಾಟ್ಯ, ಚಂದ್ರಹಾಸ ಮುಗುಳ್ಯ ನಿದರ್ೇಶನದ ತುಳುನಾಡ ವೈಭವ ಪ್ರದರ್ಶನಗೊಂಡಿತು.
  ಮಂಗಳವಾರ ಬೆಳಿಗ್ಗೆ ಸ್ವಸ್ತಿ ಪುಣ್ಯಾಹ, ಗಣಪತಿ ಹೋಮ, ನವಗ್ರಹ ಶಾಂತಿಹೋಮ, ಮೃತ್ಯುಂಜಯಹೋಮ, ಆಶ್ಲೇಷಬಲಿ, ಬಲಿಹೋಮ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಅಪರಾಹ್ನ 2 ರಿಂದ ಕಲಾರತ್ನ ಶಂ.ನಾ ಅಡಿಗ ಕುಂಬಳೆಯವರಿಂದ ಹರಿಕಥಾ ಸತ್ಸಂಗ, ಸಂಜೆ ಮಹಾಸುದರ್ಶನ ಹೋಮ, ವನದುಗರ್ಾಹೋಮ, ಭೂ ವರಾಹ ಹೋಮ, ರಕ್ಷೊಘ್ನ ಸೂಕ್ತ ಹೋಮ, ದುಗರ್ಾನಮಸ್ಕಾರ ಪೂಜೆಗಳು ನಡೆದವು. ಧಾಮರ್ಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
   ಬುಧವಾರ(ಇಂದು) ಬೆಳಿಗ್ಗೆ 24 ತೆಂಗಿನಕಾಯಿ ಗಣಪತಿಹೋಮ, ಪ್ರಧಾನಹೋಮ, ಕಲಶಪೂರಣೆ, ಕಲಶಪೂಜೆ ನಡೆದು 8.06 ರಿಂದ 9.45ರ ಮುಹೂರ್ತದಲ್ಲಿ ಕಲಶಾಭಿಷೇಕ, ಪ್ರಸನ್ನಪೂಜೆ ನಡೆಯಲಿದೆ. ಬಳಿಕ ನವ ಚಂಡಿಕಾ ಯಾಗಾರಂಭ, 12.30ಕ್ಕೆ ಯಾಗದ ಪೂಣರ್ಾಹುತಿ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ 2.30ಕ್ಕೆ ಅತಿಥಿ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ, ಸಂಜೆ 7ಕ್ಕೆ ಧಾಮರ್ಿಕ ಸಭೆ ನಡೆಯಲಿದ್ದು, ಶ್ರೀಕೃಷ್ಣ ಶಿವಕೃಪಾ ಅಧ್ಯಕ್ಷತೆ ವಹಿಸುವರು. ಉದ್ಯಮಿ ಚಂದ್ರಹಾಸ ರೈ ಬೊಳ್ನಾಡುಗುತ್ತು ಉದ್ಘಾಟಿಸುವರು. ಗಣ್ಯರು ಉಪಸ್ಥಿತರಿರುವರುಇ. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಂಜೇಶ್ವರದ ಶಾರದಾ ಕಲಾ ಆಟ್ಸರ್್ ತಂಡದವರಿಂದ ಅಣ್ಣೆ ಬಪರ್ೆರ್ ತುಳುನಾಟಕ ಪ್ರದರ್ಶನ ನಡೆಯಲಿದೆ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries