ರೋಗಿಯನ್ನು ಕೊಂಡೊಯ್ಯುತಿದ್ದ ಆಂಬ್ಯುಲೆನ್ಸಿಗೆ ದಾರಿ ಸುಗಮಗೊಳಿಸುತಿದ್ದ ಯುವಕರ ಸಮಾಜ ಸೇವೆಗೆ ಪೊಲೀಸರು ತಡೆಯೊಡ್ಡಿರುವುದಾಗಿ ಆರೋಪ
ಮಂಜೇಶ್ವರ: ರೋಗಿಯನ್ನು ತುತರ್ಾಗಿ ತಲುಪಿಸಲು ಸಾಗುತಿದ್ದ ಆಂಬ್ಯುಲೆನ್ಸಿಗೆ ದಾರಿ ಸುಗಮಗೊಳಿಸುತಿದ್ದ ಯುವಕರಿಗೆ ಕುಂಜತ್ತೂರಿನಲ್ಲಿ ಪೊಲೀಸ್ ಪೇದೆಯೊಬ್ಬ ತಡೆಯೊಡ್ಡಿರುವ ಬಗ್ಗೆ ಆರೋಪಿಸಲಾಗಿದೆ. ಈ ಬಗ್ಗೆ ವೀಡಿಯೋ ತುಣಕೊಂದರಲ್ಲಿ ಪೊಲೀಸರ ವಿರುದ್ದ ವ್ಯಾಪಕ ಆಕ್ರೋಶ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಎನರ್ಾಕುಳಂನಿಂದ ಮಂಗಳೂರಿಗೆ ರೋಗಿಯನ್ನು ಸಾಗಿಸುತಿದ್ದ ಆಂಬ್ಯುಲೆನ್ಸಿಗೆ ರಸ್ತೆಯನ್ನು ಇತರ ವಾಹನ ಸಂಚಾರದಿಂದ ಸುಗಮಗೊಳಿಸಲು ಯತ್ನಿಸುತಿದ್ದ ಯುವಕರನ್ನು ಕುಂಜತ್ತೂರಿನಲ್ಲಿದ್ದ ಪೊಲೀಸನೊಬ್ಬ ಅವಾಚ್ಯ ಶಬ್ದಗಳಿಂದ ನಿಂದಿಸಿ ಯುವಕರ ಸಮಾಜ ಸೇವೆಗೆ ತಡೆಯೊಡ್ಡಿರುವುದಾಗಿ ಆರೋಪ ಕೇಳಿ ಬಂದಿದೆ.
ಸಾಮಾನ್ಯವಾಗಿ ಇಂತಹ ವಿಷಯಗಳಲ್ಲಿ ಈ ಮೊದಲು ಕೂಡಾ ಹಲವಾರು ಸಲ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ತೂಮಿನಾಡು ಕುಂಜತ್ತೂರಿನ ಯುವಕರು ಮುಂಚೂಣಿಯಲ್ಲಿ ತಮ್ಮ ಸೇವೆಯನ್ನು ನಿರ್ವಹಿಸಿ ಅದೆಷ್ಟೋ ರೋಗಿಗಳ ಜೀವವನ್ನು ರಕ್ಷಿಸುವುದರಲ್ಲಿ ಯಶ ಕಂಡಿದ್ದಾರೆ. ಈ ಮಧ್ಯೆ ಪೊಲೀಸ್ ಪೇದೆಯ ಅಸಭ್ಯ ವರ್ತನೆಯು ವಿವಾದಕ್ಕೆಡೆಯಾಗಿದೆ. ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿರುವ ವೀಡಿಯೋ ತುಣುಕಿನಲ್ಲಿ ರೋಗಿಯನ್ನು ರಕ್ಷಿಸಲು ಹೊರಟ ಸಮಾಜ ಸೇವಕರಿಗೆ ತಡೆಯೊಡ್ಡಿದ ಪೊಲೀಸ್ ಪೇದೆಯ ವಿರುದ್ದ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.