ಭಾಷಾ ಕಲಿಕೆಯಿಂದ ಜ್ಞಾನ ಸಂಪತ್ತು ವೃದ್ಧಿ : ಸಚಿವ ಇ.ಚಂದ್ರಶೇಖರನ್
ಕಾಸರಗೋಡು: ಭಾಷೆಗಳು ಪರಸ್ಪರ ವಿನಿಮಯಕ್ಕಿರುವ ಮಾಧ್ಯಮವಾಗಿದೆ. ಎಷ್ಟು ಭಾಷೆಗಳನ್ನು ಕಲಿಯುತ್ತೇವೆಯೋ ಅಷ್ಟು ಜ್ಞಾನ ಸಂಪತ್ತು ಹೆಚ್ಚುತ್ತದೆ. ಅಲ್ಲದೆ ಭಾಷೆಗಳ ನಡುವೆ ಅನಾಹುತಗಳು ಕಡಿಮೆಯಾಗುತ್ತವೆ. ಭಾಷೆಗಳೆಲ್ಲಾ ಸಹೋದರತೆಯ ಭಾವದಲ್ಲಿ ಉಳಿಯಬೇಕು. ತಿಳಿಸಲು, ತಿಳಿಯಲು, ಅರ್ಥ ಮಾಡಿಕೊಳ್ಳಲು ಸಾಧ್ಯವಾದರೆ ಮಾತ್ರ ಆಡಳಿತ ಭಾಷಾ ಜ್ಞಾನ ಸಾಧ್ಯವಾಗಬಹುದು ಎಂದು ಕಂದಾಯ ಇಲಾಖೆ ಸಚಿವ ಇ.ಚಂದ್ರಶೇಖರನ್ ಹೇಳಿದ್ದಾರೆ.
ಕಾಸರಗೋಡು ಜಿಲ್ಲಾ ಯೋಜನಾ ಸಮಿತಿ ಸಭಾಂಗಣದಲ್ಲಿ ಅಧಿಕೃತ ಭಾಷಾ ಇಲಾಖೆಯ ಆಶ್ರಯದಲ್ಲಿ ಜಿಲ್ಲಾಡಳಿತದ ಸಹಕಾರದೊಂದಿಗೆ ಇಲಾಖೆಯ ಅಧಿಕಾರಿಗಳಿಗಾಗಿ ಆಯೋಜಿಸಲಾಗಿದ್ದ ಆಡಳಿತ ಭಾಷಾ ತಿಳಿವಳಿಕೆ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಸಮಾರಂಭದ ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು. ಸಪ್ತ ಭಾಷಾ ಸಂಗಮ ಭೂಮಿಯಾದ ಈ ಜಿಲ್ಲೆಯಲ್ಲಿ ಭಾಷೆಗಳೆಲ್ಲಾ ಪರಸ್ಪರ ಒಪ್ಪಂದದಲ್ಲಿ ಕಾಯರ್ಾಚರಿಸುವುದು ಅನಿವಾರ್ಯವಾಗಿದೆ ಎಂದರು.
ಅಧಿಕೃತ ಭಾಷಾ ಇಲಾಖೆಯ ಜೊತೆ ಕಾರ್ಯದಶರ್ಿ ಎಸ್.ಮುಹಮ್ಮದ್ ಇಸ್ಮಾಯಿಲ್ ಕುಂಞಿ ಅವರು ಆಡಳಿತ ಭಾಷಾ ಪ್ರತಿಜ್ಞೆ ಬೋಧಿಸಿದರು. ಕೇರಳದ ಆಡಳಿತ ಭಾಷೆ ಎಂಬ ವಿಷಯದಲ್ಲಿ ಅಧಿಕೃತ ಭಾಷಾ ಇಲಾಖೆಯ ಭಾಷಾ ತಜ್ಞ ಆರ್.ಶಿವಕುಮಾರ್ ವಿಷಯ ಮಂಡಿಸಿ ಮಾತನಾಡಿ, ಕೇರಳದ ಆಡಳಿತ ಭಾಷೆ ಎಂಬುದು ಅಧಿಕಾರಿ ಹಾಗೂ ಜನಸಾಮಾನ್ಯರ ಮಧ್ಯೆ ಇರುವ ವಿನಿಮಯ ಭಾಷೆಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಡಾ.ಎಂ.ಶ್ರೀನಾಥನ್ ಮಾತನಾಡಿದರು.