HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಭಜನೆಯಿಂದ ಭಗವಂತನೆಡೆಗೆ-ಯೋಗಾನಂದ ಸರಸ್ವತೀ ಶ್ರೀ
    ಉಪ್ಪಳ: ಭಗವಂತನ ಉಪಾಸನೆಯ ವಿವಿಧ ಆಯಾಮಗಳಲ್ಲಿ ಭಜನಾ ಸಂಕೀರ್ತನೆ ಜನಸಾಮಾನ್ಯರಿಗೆ ಸುಲಲಿತವಾಗಿ ದಕ್ಕುವ ಉಪಾಸನಾ ಕ್ರಮವಾಗಿ ಜನಜನಿತವಾಗಿದೆ. ಆರಾಧನೆಯ ಜೊತೆಗೆ ಒಗ್ಗಟ್ಟು, ಏಕತೆಯನ್ನು ಭಜನಾ ಸಂಕೀರ್ತನೆಗಳಿಂದ ಪಡೆಯಬಹುದಾಗಿದ್ದು, ಸಾಮೂಹಿಕ ಆರಾಧನಾ ಕ್ರಮಗಳು ಹೆಚ್ಚು ಫಲನೀಡುತ್ತದೆ ಎಂದು ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಶ್ರೀಗಳು ಆಶೀರ್ವಚನವಿತ್ತರು.
   ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ 15ನೇ ವರ್ಷದ ಅಖಂಡ ಭಜನಾ ಸಪ್ತಾಹಕ್ಕೆ ಭಾನುವಾರ ಸೂಯರ್ಾಸ್ತದ ವೇಳೆ ದೀಪಪ್ರಜ್ವಲನೆಗೈಯುವುದರ ಮೂಲಕ ಚಾಲನೆ ಆಈರ್ವಚನಗೈದು ಮಾತನಾಡಿದರು.
  ವಿವಿಧ ಕಾರಣಗಳಿಂದ ಕಲುಶಿತಗೊಂಡಿರುವ ಪ್ರಕೃತಿ ಮತ್ತು ಮನುಷ್ಯ ಮನಸ್ಸಿನ ಶುದ್ದೀಕರಣಕ್ಕೆ ಭಜನಾ ಸಂಕೀರ್ತನೆಗಳು ಚಿಕಿತ್ಸಾ ಕ್ರಮವಾಗಿ ಫಲನೀಡುತ್ತದೆ. ಅಂತರಂಗದೊಳಗಿನ ಚಂಚಲತೆಯನ್ನು ದೂರಗೊಳಿಸಲು ಭಜನಾ ಸಂಕೀರ್ತನೆ ಫಲಪ್ರದವಾಗಿ ತನ್ನದೇ ಕೊಡುಗೆ ನೀಡಿದ್ದು, ಘಬವಂತನ ಅನುಗ್ರಹಕ್ಕೆ ವಿಶೇಷವಾಗಿ ಕಾರಣವಾಗುತ್ತದೆ ಎಂದು ಶ್ರೀಗಳು ತಿಳಿಸಿದರು.
   ಧಾಮರ್ಿಕ ವಿಧಿವಿಧಾನಗಳನ್ನು ವೇದಮೂತರ್ಿ ಹರಿನಾರಾಯಣ ಮಯ್ಯರು ನಡೆಸಿಕೊಟ್ಟರು. ಭಜನೆಯ ಮೂಲಕ  ಭಗವಂತನೆಡೆಗೆ ಸಾಗುವ ಈ ಮಹತ್ತರ ಅಖಂಡ ಭಜನಾ ಸಪ್ತಾಹವು ದಿನಾಂಕ ಫೆ. 11ರಂದು ಸೂಯರ್ಾಸ್ತ ಸಮಯ ಸಂಪನ್ನಗೊಳ್ಳಲಿದೆ. ಕನರ್ಾಟಕ, ಕೇರಳ ರಾಜ್ಯಗಳ ವಿವಿಧ ಭಜನಾ ತಂಡಗಳು ಈ ಸಂದರ್ಭದಲ್ಲಿ ಭಜನಾ ಸೇವೆ ನಡೆಸಿಕೊಡುತ್ತಿದ್ದಾರೆ. ಹರಿದಾಸ ಜಯಾನಂದಕುಮಾರ್ ಹೊಸದುರ್ಗ ಸಹಿತ ವಿವಿಧ ಪ್ರಮುಖರು ಸಂಕೀರ್ತನೆಯಲ್ಲಿ ಪಾಲ್ಗೊಂಡರು.
 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries