HEALTH TIPS

ಯಾವುದೇ ಶೀರ್ಷಿಕೆಯಿಲ್ಲ

            ಮಾತೃಶಕ್ತಿ ಜಾಗೃತರಾದಾಗ ಶಿವನನುಗ್ರಹ ಪ್ರಾಪ್ತಿ-ಕೊಂಡೆವೂರು ಶ್ರೀ
   ಉಪ್ಪಳ: ಮಹಾರುದ್ರನನ್ನು ಒಲಿಸಿಕೊಳ್ಳಲು ಪಾರ್ವತಿಯು ಕಠಿಣ ತಪಸ್ಸಿನ ಮೂಲಕ ಯತ್ನಿಸಿದ್ದರ ಫಲವಾಗಿ ಆಕೆಗೆ ಅನುಗ್ರಹವಾಯಿತು. ಭಕ್ತಿಯ ಪರಾಕಾಷ್ಠೆಯಿಂದ ಭಗವದನುಗ್ರಕ್ಕೆ ಪಾರ್ವತಿ ನಮಗೆ ಮಾದರಿಯಾಗಿದ್ದು, ಅಂತಹ ಭಕ್ತಿ ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ಜಾಗೃತವಾಗಿರಲಿ ಎಂದು ಕೊಮಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಶ್ರೀಗಳು ಆಶೀರ್ವಚನ ನೀಡಿದರು.
   ಉಪ್ಪಳ ಸಮೀಪದ ಮುಳಿಂಜ ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಪರ್ವದ ಅಂಗವಾಗಿ ಮಂಗಳವಾರ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ, ಶಿಲೆ ಹಾಸಿದ ರಾಜಾಂಗಣ ಮತ್ತು ಶಾಶ್ವತ ಚಪ್ಪರವನ್ನು ಲೋಪಾರ್ಪಣೆಗೊಳಿಸಿ ಅವರು ಮಾತನಾಡಿದರು.
   ಪಾರ್ವತೀ ಮಾತೆಯು ಸ್ತ್ರೀಶಕ್ತಿಯ ಸ್ವರೂಪಳಾಗಿದ್ದು, ದೇವರೊಲುಮೆ-ಅನುಗ್ರಹಕ್ಕೆ ಆಕೆ ತೋರಿಸಿಕೊಟ್ಟ ಮಾರ್ಗ ನಮಗೆಂದಿಗೂ ಆದರ್ಶ ಎಂದು ತಿಳಿಸಿದ ಶ್ರೀಗಳು, ಮಾತೆಯರ ಮೂಲಕ ಸಮಾಜ, ಕುಟುಂಬ ಬದಲಾಗುತ್ತದೆ ಎಂದು ತಿಳಿಸಿದರು.
     ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಸನಾತನ ಹಿಂದೂ ಧರ್ಮದ ಪೂಜೆ-ಪುನಸ್ಕಾರ, ಧರ್ಮನೇಮ, ನಾಗತಂಬಿಲ ಮೊದಲಾದ ಆಚರಣೆಗಳು ಸಂಪೂರ್ಣ ಲೋಕ ಹಿತದ ಚಿಂತನೆ ಹೊಂದಿದ್ದು ಸರ್ವರ ಒಳಿತಿಗಾಗಿ ಮಾತ್ರ ಪ್ರಾಥರ್ಿಸುತ್ತದೆ ಎಂದು ತಿಳಿಸಿದರು. ಬ್ರಹ್ಮಕಲಶ, ಜಾತ್ರೆ-ಉತ್ಸವಗಳ ಖಚರ್ುಗಳ ಬಗ್ಗೆ ಇಂದು ಪ್ರಶ್ನಿಸುತ್ತಾರೆ. ಆದರೆ ಅಲ್ಲಿ ನಡೆಯುವ ಆಥರ್ಿಕ ವ್ಯವಹಾರದಲ್ಲಿ ಸಾವಿರಾರು ಜನರು ನೆಮ್ಮದಿ ಕಾಣುತ್ತಾರೆ. ಅವಿಭಜಿತ ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳಲ್ಲಿ ವರ್ಷಕ್ಕೆ 500 ಕೋಟಿ ಗೂ ಮಿಕ್ಕಿದ ಆಥರ್ಿಕ ವ್ಯವಹಾರ ಹಿಂದೂ ದೇವಾಲಯ-ದೈವ ಕ್ಷೇತ್ರಗಳ ಆಚರಣೆಗಳ ಮೂಲಕ ಸಮಾಜಕ್ಕೆ ನೀಡಲ್ಪಡುತ್ತಿದೆ. ಇದು ಬೇರೊಂದು ಧರ್ಮದಲ್ಲಿ ನೋಡಲು ಸಾಧ್ಯವಾಗದು ಎಂದು ತಿಳಿಸಿದರು.
  ಸತನಾತನ ಹಿಂದೂ ಧರ್ಮದ ಆಚಾರ ಅನುಷ್ಠಾನಗಳಲ್ಲಿ ಪ್ರತಿಯೊಬ್ಬರೂ ಆಂತರಂಗಿಕ ಶ್ರದ್ದೆ-ಭಕ್ತಿಗಳಿಂದ ಕೈಜೋಡಿಸಿ ಮುನ್ನಡೆಯುವುದರಿಂದ ಸರ್ವರ ಉನ್ನತಿ ಸಾಧ್ಯವಾಗುವುದು ಎಂದು ಅವರು ತಿಳಿಸಿದರು.
   ಉದ್ಯಮಿ, ಧಾಮರ್ಿಕ ಮುಖಂಡ ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಮಂಗಳೂರಿನ ಶ್ರೀದೇವಿ ಎಜುಕೇಶನ್ ಟ್ರಸ್ಟ್ನ ಮೈನಾ ಸದಾನಂದ ಶೆಟ್ಟಿ, ಉದ್ಯಮಿ ಸಂತéೋ ಕುಮಾರ್ ರೈ ಬೋಳಿಯಾರು ಉಪಸ್ಥಿತರಿದ್ದು ಮಾತನಾಡಿದರು. ಕನರ್ಾಟಕ ಉಚ್ಚ ನ್ಯಾಯಾಲಯದ ನ್ಯಾಯವಾದಿ ಬಾರಿ ಭಂಡಾರಿ ಕುಡಾಲು, ಉದ್ಯಮಿ ಭುಜಂಜ ಎಂ. ಶೆಟ್ಟಿ ಕೊಂಡೆವೂರು, ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಉಪಸ್ಥಿತರಿದ್ದರು. ಐಲ ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರ ನಾರಾಯಣ ಹೆಗ್ಡೆ ಕೋಡಿಬೈಲು ಸ್ವಾಗತಿಸಿ, ತಾರಾ ವಿ.ಶೆಟ್ಟಿ ದಡ್ಡಂಗಡಿ ವಂದಿಸಿದರು. ಅರವಿಂದಾಕ್ಷ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಕ್ಷೇತ್ರದ ಪವಿತ್ರಪಾಣಿ ಬೂಡುಮನೆ ನಾರಾಯಣ ಪದಕಣ್ಣಾಯ, ಮಹಾಲಿಂಗೇಶ್ವರ ಸೇವಾ ಸಮಿತಿ ಅಧ್ಯಕ್ಷ ಸಂಜೀವ ಭಂಡಾರಿ ಮುಳಿಂಜಗುತ್ತು, ಮಹಾಲಿಂಗೇಶ್ವರ ಮಾತೃಮಂಡಳಿಯ ಅಧ್ಯಕ್ಷೆ ಸರಸ್ವತಿ ಎನ್.ಶೆಟ್ಟಿ ಕೋಡಿಬೈಲು ಮೊದಲಾದವರು ಉಪಸ್ಥಿತರಿದ್ದರು.
   ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಗಣಪತಿ ಹೋಮ, ಏಕಾದಶ ರುದ್ರಾಭಿಷೇಕ, ಸಾಮೂಹಿಕ ಸತ್ಯನಾರಾಯಣ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆಗಳು ನಡೆದವು. ಸಂಜೆ 6ಕ್ಕೆ  ಭಜನೆ, ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಬ್ರಹ್ಮಶ್ರೀ ನೀಲೇಶ್ವರ ದಾಮೋದರ(ಅರವತ್ತ್) ತಂತ್ರಿಗಳ ನೇತೃತ್ವದಲ್ಲಿ ಬ್ರಹ್ಮಶ್ರೀ ಕುಂಬಳೆ ಹರಿನಾರಾಯಣ ಮಯ್ಯರು ವೈದಿಕ ವಿಧಿವಿಧಾನಗಳನ್ನು ನಿರ್ವಹಿಸಿದರು.
   


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries