HEALTH TIPS

ಯಾವುದೇ ಶೀರ್ಷಿಕೆಯಿಲ್ಲ

        ಅಖಿಲ ಭಾರತ ಜಾನಪದ ಕಲಾ ಪರಿಷತ್ತಿನ ಸಾರಥ್ಯದಲ್ಲಿ ಲೋಕಕಲಾ ಮಹೋತ್ಸವ
            ಫೆ. 17ರಂದು ಎಡನೀರಿನಲ್ಲಿ ನಾಂದಿ; 200ಕ್ಕೂ ಅಧಿಕ ಕಲಾವಿದರ ಪ್ರದರ್ಶನ
   ಬದಿಯಡ್ಕ:   ಅಖಿಲ ಭಾರತ ಜಾನಪದ ಮತ್ತು ಬುಡಕಟ್ಟು ಕಲಾ ಪರಿಷತ್ತಿನ ನೇತೃತ್ವದಲ್ಲಿ 2018ರ ಮೊದಲಾರ್ಧದಲ್ಲಿ ದಕ್ಷಿಣ ಭಾರತೀಯ ಮಟ್ಟದ ಅಖಿಲ ಭಾರತ ಲೋಕಕಲಾ ಮಹೋತ್ಸವ ನಡೆಯಲಿದ್ದು,  ಇದರ ಪ್ರಥಮ ಕಾರ್ಯಕ್ರಮ ಕಾಸರಗೋಡಿನ ಎಡನೀರು ಶ್ರೀಮಠದಲ್ಲಿ ಫೆ. 17ರಂದು ನಡೆಯುವ ಮೂಲಕ ಲೋಕಕಲಾ ಮಹೋತ್ಸವಕ್ಕೆ ನಾಂದಿಯಾಗಲಿದೆ. ಭಾರತದ ಅಸ್ಮಿತೆಯ ಪ್ರತೀಕವಾದ ಪ್ರತಿ ರಾಜ್ಯಗಳ ಪ್ರಾದೇಶಿಕ ಜಾನಪದ ಮತ್ತು ಬುಡಕಟ್ಟು ಕಲಾ-ಸಂಸ್ಕೃತಿಗಳನ್ನು ಉದ್ದೀಪಿಸಿ- ಜಾಗೃತಗೊಳಿಸಿ ಅದಕ್ಕೆ ಪುನರುತ್ಥಾನ ನೀಡುತ್ತಾ ತನ್ಮೂಲಕ ಭಾರತದ ವಿವಿಧತೆಯನ್ನು ಏಕತೆಯ ಏಕಸೂತ್ರದೊಳಗೆ ನೇಯುವುದು ಲೋಕಕಲಾ ಮಹೋತ್ಸವದ ಪ್ರಮುಖ ಉದ್ದೇಶವಾಗಿದೆ.
   ಫೆ. 17ರಂದು ಎಡನೀರು ಶ್ರೀಮಠದ ಸಹಕಾರದೊಂದಿಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಕೇರಳ, ತಮಿಳ್ನಾಡು, ಆಂಧ್ರಪ್ರದೇಶ- ತೆಲಂಗಾಣ, ಪಾಂಡಿಚೇರಿ ಮತ್ತು ಕನರ್ಾಟಕದ ವೈವಿಧ್ಯ ಜಾನಪದ ಕಲಾಪ್ರಕಾರದ ಪ್ರದರ್ಶನ, ಪ್ರಾತ್ಯಕ್ಷಿಕೆ ಸಹಿತ ಕಲಾ ಸಂವಾದಗಳು ನಡೆಯಲಿದ್ದು, ಸುಮಾರು 200ಕ್ಕೂ ಅಧಿಕ ಕಲಾವಿದರು ಒಂದೇ ವೇದಿಕೆಯಲ್ಲಿ ಪಾಲ್ಗೊಳ್ಳುವರು.  17ರಂದು ಎಡನೀರು ಶ್ರೀಮಠದ ವಿಶೇಷ ಸಭಾಂಗಣದಲ್ಲಿ, ಶ್ರೀ ಎಡನೀರು ಕೇಶವಾನಂದ ಭಾರತೀ ಶ್ರೀಪಾದಂಗಳವರಿಂದ ಉದ್ಘಾಟಿಸಲ್ಪಟ್ಟು ನಾಂದಿಯಾಗುವ ಸಮಾರಂಭ, ಎರಡನೇ ದಿನ ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನ್ನೂರಲ್ಲಿ ಸಮಾರೋಪಗೊಳ್ಳಲಿದೆ. ದೇಶದ ಪ್ರಸಿದ್ಧ ಜಾನಪದ ಕಲಾ ತಜ್ಞರು, ಖ್ಯಾತ ಕಲಾವಿದರು, ಚಿಂತಕರು ಸಹಿತ ರಾಷ್ಟ್ರೀಯ ಮಟ್ಟದ ಪ್ರಸಿದ್ಧ ಗಣ್ಯರು ಪಾಲ್ಗೊಳ್ಳಲಿರುವರು. ರಾಷ್ಟ್ರೀಯ ಮಟ್ಟದ ಜಾನಪದ-ಬುಡಕಟ್ಟು ಕಲಾ ಸಂಸ್ಕೃತಿಯ ಅತ್ಯಪರೂಪದ ಈ ಉತ್ಸವ ಕಾಸರಗೋಡಿನಲ್ಲಿ ನಡೆಯುವುದು ಮತ್ತು ದಕ್ಷಿಣ ಭಾರತದ 6ರಾಜ್ಯಗಳಲ್ಲಿ ನಡೆಯುವ ಉತ್ಸವಕ್ಕೆ ಕಾಸರಗೋಡಿನ ನೆಲ ಉದ್ಘಾಟನಾ  ವೇದಿಕೆಯಾಗುವುದು ಇದೇ ಮೊದಲಬಾರಿಯಾಗಿದೆ.
  ಎಡನೀರಿನಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭಕ್ಕೆ ತುಳುವೆರೆ ಆಯನೊ ಕೂಟೋ ಬದಿಯಡ್ಕ ಮತ್ತು ಬೊಳಿಕೆ ಜಾನಪದ ಕಲಾತಂಡ ಸಹಕಾರ ನೀಡಲಿವೆ.
    ಅಖಿಲ ಭಾರತ ಲೋಕಕಲಾ ಮಹೋತ್ಸವ ಸರಣಿ ಕಾರ್ಯಕ್ರಮವಾಗಿದ್ದು, ಮಾಚರ್್ 3-4ರಂದು ಆಂದ್ರಪ್ರದೇಶದ ಅನಂತಪುರ ಜಿಲ್ಲೆಯ ವ್ರಾವಕಂಡ ಎಂಬಲ್ಲಿ ಎರಡನೇ ಕಾರ್ಯಕ್ರಮ ಮತ್ತು ಮಾಚರ್್ 9-10ರಂದು ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ನಾರಾಯಣಖೇಡ್ ಎಂಬಲ್ಲಿ ಮೂರನೇ ಕಾರ್ಯಕ್ರಮ ಜರಗಲಿದೆ. 4ನೇ ಕಾರ್ಯಕ್ರಮ ಮಾಚರ್್ 11ರಂದು ಕನರ್ಾಟಕದ ಬೀದರ್, 5ನೇ ಕಾರ್ಯಕ್ರಮ 17-18ರಂದು ತಮಿಳ್ನಾಡು, 6ನೇ ಕಾರ್ಯಕ್ರಮ 20-21ರಂದು ಪಾಂಡಿಚೇರಿ ವಿವಿಯಲ್ಲಿ ನಡೆಯಲಿದೆ.
   ಯಾವುದೇ ಒಂದು ನಾಡಿನ ಸಾಂಸ್ಕೃತಿಕ ಚರಿತ್ರೆ ಅಡಗಿರುವುದು ಅಲ್ಲಿನ ಜನಪದ-ಬುಡಕಟ್ಟು ಸಂಸ್ಕೃತಿಯ ಕಲೆ ಮತ್ತು ಪ್ರದರ್ಶನಗಳಲ್ಲಿ ಎಂಬುದು ನಿವರ್ಿವಾದಿತ ವಿಚಾರ. ಆದರೆ ಕೇರಳಕ್ಕೆ ಸೇರ್ಪಡೆಗೊಂಡ ಕಾಸರಗೋಡಿನಲ್ಲಿ ಹತ್ತು-ಹಲವು ಭಾಷೆಗಳ ಮೂಲಕ ಜನಪದ-ಬುಡಕಟ್ಟು ಆಚಾರ ಆನುಷ್ಠಾನ ಸಹಿತ ಸಂಸ್ಕೃತಿಗಳು ಅಸ್ತಿತ್ವ ಕಾಪಾಡಲು ಹೆಣಗಾಡುತ್ತಿವೆ. ದೇಶದಲ್ಲಿ ಜನಪದ ಸಂಸ್ಕೃತಿ ಪೋಷಿಸಲು ಕೇಂದ್ರ ಸರಕಾರ ಕೋಟ್ಯಾಂತರ ರೂ ವ್ಯಯಿಸುತ್ತಿದೆಯಾದರೂ ಅದು ತಳ ಮಟ್ಟಕ್ಕೆ ತಲುಪುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಕಲಾ ಪ್ರೋತ್ಸಾಹ ಅನುದಾನ, ಕಲಾವಿದರಿಗೆ ರಾಷ್ಟ್ರೀಯ ಸರಾಸರಿಯ ಪಿಂಚಣಿ, ಪ್ರತಿ ಕಲಾಮಂಡಳಿಗಳಿಗೆ ಉದ್ಯೋಗ ಖಾತರಿ ಮಾದರಿಯಲ್ಲಿ ಕಲಾ ಪ್ರದರ್ಶನಗಳಿಗೆ ಅವಕಾಶ, ಕಲೆಯ ಅಭ್ಯುದಯ ಮತ್ತು ಹಿತ ಸಂರಕ್ಷಣೆಗಾಗಿ ವೈವಿಧ್ಯ ಚಟುವಟಿಕೆಗಳಿಗೆ ಪ್ರೋತ್ಸಾಹ, ಕಲಾವಿದರ ಹಿತರಕ್ಷಣೆಗಳೇ ಮೊದಲಾದುದು ಪರಿಷತ್ತಿನ ಉದ್ದೇಶವಾಗಿದೆ. ಪಾರಂಪರಿಕ ಕಲೆ ಮತ್ತು ಕಲಾವಲಂಬಿ ಜನತೆಯನ್ನು ಕಲೆಯ ಪುನರುತ್ತೇಜನಕ್ಕಾಗಿ ಪ್ರೋತ್ಸಾಹಿಸಿ, ದೇಶದ ಜನಪದ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೈದಾಟಿಸುವುದು ಮತ್ತು ಜಾನಪದ-ಬುಡಕಟ್ಟು ಕಲಾ ಸಂಸ್ಕೃತಿಗಳನ್ನು ದಾಖಲಿಸಿ, ಇತಿಹಾಸಕ್ಕೆ ಚ್ಯುತಿ ಬಾರದಂತೆ ಕಾಪಾಡುತ್ತಲೇ ಅದಕ್ಕೆ ಪ್ರೋತ್ಸಾಹ ನೀಡುವುದು ಪರಿಷತ್ತಿನ ಉದ್ದೇಶವಾಗಿದೆ.
   ಪ್ರಸ್ತುತ ಸಮಾರಂಭದೊಂದಿಗೆ ಅಖಿಲ ಭಾರತ ಮಟ್ಟದ ಜಾನಪದ ಮತ್ತು ಬುಡಕಟ್ಟು ಕಲಾ ಪರಿಷತ್ತಿನ ಕಾಸರಗೋಡು ಘಟಕ ಅಸ್ತಿತ್ವಕ್ಕೆ ಬರಲಿದೆ. ಈ ಮೂಲಕ ಈ ನೆಲದ ಜಾನಪದ ಕಲಾ ಕಾರ್ಯಕರ್ತರನ್ನು, ಕಲಾವಿದರನ್ನು ಸಂಯೋಜಿಸಿ-ಸಂಘಟಿಸುವ ಕೆಲಸ ನಡೆಯಲಿದೆ. ಕಲೆ ಮತ್ತು ಕಲಾವಿದರ ಅಭ್ಯುದಯ ದೃಷ್ಟಿಯಲ್ಲಿ ಅಸ್ತಿತ್ವಕ್ಕೆ ಬಂದಿರುವ ಪರಿಷತ್ತಿನ ಉದ್ಘಾಟನಾ ಸಮಾರಂಬದಲ್ಲಿ ಕಾಸರಗೋಡು ಜಿಲ್ಲೆಯ ಜಾನಪದ ಮತ್ತು ಬುಡಕಟ್ಟು ಸಹಿತ ಎಲ್ಲಾ ಕಲಾಕ್ಷೇತ್ರದ ಕಾರ್ಯಕರ್ತರು ಮತ್ತು ಪ್ರತಿನಿಧಿಗಳು ಪಾಲ್ಗೊಳ್ಳಬೇಕೆಂದು ಅಪೇಕ್ಷಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries