HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ಚೆರ್ಕಳ ಕಲ್ಲಡ್ಕ ರೋಡ್ ಇನ್ಪೇಕ್ಟ್
         ಕುಂಬಳೆಯಲ್ಲೂ ಜನರು ಪ್ರತಿಭಟನೆಯತ್ತ 
    ಕುಂಬಳೆ: ಚರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿಯ ಶೋಚನೀಯಾವಸ್ಥೆಗೆ ಎದುರಾಗಿ ಬಸ್ ಕಾಮರ್ಿಕರು ಹಾಗೂ ಜನಸಾಮಾನ್ಯರು ನಡೆಸಿದ ಪ್ರಬಲ ಮುಷ್ಕರದಿಂದ ಪ್ರೇರಣೆ ಪಡೆದು ಇದೀಗ ಜಿಲ್ಲೆಯಾದ್ಯಂತದ ಹಲವು ಸಂಚಾರ ಅಯೋಗ್ಯ ರಸ್ತೆಗೆ ದುರಸ್ಥಿಗೆ ಆಗ್ರಹಿಸಿ ಸ್ಥಳೀಯರು ಹೋರಾಟಕ್ಕಿಳಿಯುವ ಮನದಸೂಚನೆ ಲಭಿಸಿದೆ.
  ಕಾಸರಗೋಡು ಜಿಲ್ಲಾ ಪಂಚಾಯತು ಅಧ್ಯಕ್ಷರು ಪ್ರತಿನಿಧಿಸುವ, ಮಂಜೇಶ್ವರ ವಿಧಾನ ಸಭಾ ಕ್ಷೇತ್ರಕ್ಕೊಳಪಟ್ಟ ಶಾಂತಿಪಳ್ಳ ಸಮೀಪದ ಭಾಸ್ಕರ ನಗರ-ಶೆಟ್ಟಿಗದ್ದೆ ರಸ್ತೆಯ ತೀವ್ರ ಹದಗೆಟ್ಟ ಪರಿಸ್ಥಿತಿಯಿಂದ ಬೇಸತ್ತು ಜನರು ಇದೀಗ ಪ್ರತಿಭಟನೆಯ ಮುನ್ನೆಚ್ಚರಿಕೆ ನೀಡಿದ್ದಾರೆ. ಸುಮಾರು 15 ವರ್ಷಗಳಿಗಿಂತ ಹಿಂದೆ ಡಾಮರೀಕರಣಗೊಂಡಿರುವ ಇಲ್ಲಿಯ ರಸ್ತೆ ಇದೀಗ ಡಾಂಬರುಗಳು ಸಂಪೂರ್ಣ ಕಿತ್ತುಹೋಗಿ ಸಂಚಾರ ದುರ್ಮಮವಾಗಿ ಮಾರ್ಪಟ್ಟಿದೆ. ಒಂದೂವರೆ ಕಿಲೋಮೀಟರ್ ವ್ಯಾಪ್ತಿಯ ಈ ರಸ್ತೆಯನ್ನು ಆಶ್ರಯಿಸಿ ನೂರಾರು ಕುಟುಂಬಗಳು ವಾಸಿಸುತ್ತಿದ್ದು, ರಸ್ತೆಯ ದುಸ್ಥಿತಿಯಿಂದ ಜನರಿಗೆ ತೀವ್ರ ಸಂಕಷ್ಟ ಒದಗಿದೆ. ರೋಗಿಗಳು, ಮಕ್ಕಳು, ಸ್ತ್ರೀಯರಿಗೆ ಅಗತ್ಯ ಸಂಚಾರಕ್ಕೆ ಅಟೋ ಸಹಿತ ವಿವಿಧ ಟ್ಯಾಕ್ಸಿ ವಾಹನಗಳು ಈ ರಸ್ತೆಯ ಮೂಲಕ ಸಂಚಾರ ನಡೆಸಲು ಹಿಂದೇಟು ಹಾಕುತ್ತಿರುವುದರಿಂದ ಜನರು ಕಂಗಾಲಾಗಿದ್ದಾರೆ. ಅಂಗನವಾಡಿ ಕೇಂದ್ರ ಸಹಿತ ಹಲವು ಕುಟಂಬಗಳು ಆಶ್ರಯಿಸಿರುವ ಈ ರಸ್ತೆಯ ಶೀಘ್ರ ದುರಸ್ಥಿಗೆ ಜನರು ಹಲವು ಬಾರಿ ಸಂಬಂಧಿಸಿದವರಿಗೆ ಮನವಿ ನೀಡಿದ್ದರೂ ಸ್ಪಂಧಿಸಿಲ್ಲವೆಂದು ನಾಗರಿಕರು ರೋಶ ವ್ಯಕ್ತಪಡಿಸಿದ್ದಾರೆ.
       ಏನಂತಾರೆ:
   ರಸ್ತೆಯ ಡಾಮರೀಕರಣಕ್ಕೆ ಗ್ರಾ.ಪಂ. ಯೋಜನೆ ಇರಿಸಿದ್ದು, ಮುಂದಿನ ದಿನಗಳಲ್ಲಿ ರಸ್ತೆ ಡಾಮರೀಕರಣ ನಡೆಸಲಾಗುವುದು.
     ಪುಂಡರೀಕಾಕ್ಷ ಕೆ.ಎಲ್.
       ಕುಂಬಳೆ ಗ್ರಾ.ಪಂ. ಅಧ್ಯಕ್ಷ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries