HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಚೆರ್ಕಳ ವಿದ್ಯುತ್ ಸೆಕ್ಷನ್ ಕಚೇರಿ ವಿಭಜನೆ ವಿಳಂಬ
     ಕಾಸರಗೋಡು: ವ್ಯಾಪ್ತಿ  ಹಾಗೂ ಗ್ರಾಹಕರ ಸಂಖ್ಯೆ ಹೆಚ್ಚಿರುವುದರಿಂದ ತೀವ್ರ ಸಮಸ್ಯೆ ಅನುಭವಿಸುತ್ತಿರುವ ಕೆಎಸ್ಇಬಿಯ ಚೆರ್ಕಳ ವಿದ್ಯುತ್ ಸೆಕ್ಷನ್ ಕಚೇರಿಯನ್ನು  ವಿಭಜಿಸಬೇಕು ಎಂಬ ಬಹುದಿನಗಳ ಬೇಡಿಕೆ ಕಡತದಲ್ಲೇ ಉಳಿದುಕೊಂಡಿದೆ.
    ಮುಳಿಯಾರು ಗ್ರಾಮ ಪಂಚಾಯತ್ನ ಬೋವಿಕ್ಕಾನವನ್ನು  ಕೇಂದ್ರವಾಗಿಸಿ ನೂತನ ವಿದ್ಯುತ್ ಸೆಕ್ಷನ್ ಕಚೇರಿಯನ್ನು  ಆರಂಭಿಸಬೇಕು ಎಂಬ ಬೇಡಿಕೆ ಸದ್ಯಕ್ಕೆ ಈಡೇರುವ ಲಕ್ಷಣವಂತೂ ಗೋಚರಿಸುತ್ತಿಲ್ಲ. ಹತ್ತು  ಸಾವಿರ ಮಂದಿ ಗ್ರಾಹಕರಿಗೆ ಒಂದು ವಿದ್ಯುತ್ ಸೆಕ್ಷನ್ ಕಚೇರಿ ಎಂಬುದು ಕೇರಳ ವಿದ್ಯುತ್ ಮಂಡಳಿಯ ನೀತಿಯಾಗಿದೆ.
   ಆದರೆ ಚೆರ್ಕಳದಲ್ಲಿ  ಈಗಾಗಲೇ ಇಪ್ಪತ್ತೈದು ಸಾವಿರಕ್ಕೂ ಹೆಚ್ಚು  ಮಂದಿ ಬಳಕೆದಾರರಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲೇ ಅತ್ಯಧಿಕ ಬಳಕೆದಾರರಿರುವ ವಿದ್ಯುತ್ ಸೆಕ್ಷನ್ ಕಚೇರಿ ಇದಾಗಿದೆ. ಚೆಂಗಳ ಗ್ರಾಮ ಪಂಚಾಯತ್ ಪೂರ್ಣವಾಗಿ, ಮುಳಿಯಾರು, ಬದಿಯಡ್ಕ, ಚೆಮ್ನಾಡು ಪಂಚಾಯತ್ಗಳ ಭಾಗಶ: ಪ್ರದೇಶಗಳು ಈ ಸೆಕ್ಷನ್ ಕಚೇರಿ ವ್ಯಾಪ್ತಿಗೆ ಬರುತ್ತಿವೆ.
   ಈ ಸೆಕ್ಷನ್ನಲ್ಲಿ  ದುರಸ್ತಿ  ಕಾಮಗಾರಿಗಳನ್ನು  ಸಮಯೋಚಿತವಾಗಿ ನಡೆಸಲು ಸಾಧ್ಯವಾಗದಿರುವುದರಿಂದ ಕೆಲವು ದಿನಗಳ ಕಾಲ ಕರೆಂಟ್ ಪೂರೈಕೆ ನಿಲುಗಡೆಗೊಳ್ಳುವುದು ಇಲ್ಲಿ  ಸಾಮಾನ್ಯವಾಗಿದೆ. ಇದು ಅನೇಕ ಬಾರಿ ಕಚೇರಿಯ ಸಿಬ್ಬಂದಿಗಳ ಹಾಗೂ ನಾಗರಿಕರ ನಡುವೆ ವಾಗ್ವಾದಕ್ಕೂ ಕಾರಣವಾಗುತ್ತಿದೆ. ವಿದ್ಯುತ್ ಸಮಸ್ಯೆ ಸರಿಪಡಿಸಲಿಲ್ಲ  ಎಂಬ ಕೋಪದಿಂದ ಕಳೆದ ವರ್ಷ ತಂಡವೊಂದು ಕಚೇರಿಗೆ ನುಗ್ಗಿ  ಫನರ್ೀಚರ್ಗಳನ್ನು  ಹಾನಿಗೊಳಿಸಿರುವ ಘಟನೆಯೂ ನಡೆದಿತ್ತು.
  ಮುಳಿಯಾರು ಪಂಚಾಯತ್ ಸಹಿತ ಹಲವೆಡೆ ವಿದ್ಯುತ್ ತಂತಿ-ಕಂಬ ಹಾದುಹೋಗುವುದು ಅರಣ್ಯ ಪ್ರದೇಶದಲ್ಲಾಗಿದೆ. ಮಳೆ, ಗಾಳಿಗೆ ಮರಗಳು ಮುರಿದು ವಿದ್ಯುತ್ ತಂತಿಗೆ ಬಿದ್ದು  ವಿದ್ಯುತ್ ಮೊಟಕುಗೊಳ್ಳುವುದು ಇಲ್ಲಿ  ನಿರಂತರ ಎಂಬಂತಾಗಿದೆ. ಒಂದೆರಡು ದಿನಗಳ ಬಳಿಕವಷ್ಟೇ ತಂತಿಗಳನ್ನು  ಮರುಸ್ಥಾಪಿಸಲಾಗುತ್ತಿದೆ. ಮಳೆಗಾಲ ಮುಗಿದು ಬೇಸಿಗೆಕಾಲ ಸಮೀಪಿಸಿದರೂ ವಿದ್ಯುತ್ ಮೊಟಕು ಸಮಸ್ಯೆಗೆ ಮಾತ್ರ ಪರಿಹಾರ ಸಾಧ್ಯವಾಗುತ್ತಿಲ್ಲ.
   ಈ ಮಧ್ಯೆ ಮಳೆಗಾಲದಲ್ಲಿ  ವಿದ್ಯುತ್ ಮೊಟಕು ಸಮಸ್ಯೆಯಾಗುತ್ತಿರುವಾಗ ಬೇಸಗೆ ಕಾಲದಲ್ಲಿ  ವೋಲ್ಟೇಜ್ ಕಡಿಮೆಯಾಗಿರುವುದು ಬಹುದೊಡ್ಡ  ಸಮಸ್ಯೆಯಾಗಿ ಪರಿಣಮಿಸಿದೆ. ಅಡಿಕೆ, ತೆಂಗು, ಬಾಳೆ ಮೊದಲಾದ ತೋಟಗಳಿಗೆ ಧಾರಾಳವಾಗಿ ನೀರು ಸಿಂಪಡಿಸ ಬೇಕಾದ ಸಮಯ
   ಇದಾಗಿದ್ದು, ಆದರೆ ವೋಲ್ಟೇಜ್ ಕೊರತೆಯಿಂದಾಗಿ ಹಗಲು ವೇಳೆಯಲ್ಲಿ  ಮೋಟಾರು ಪಂಪ್ ಕಾರ್ಯಚರಿಸುತ್ತಿಲ್ಲ.
ರಾತ್ರಿ ನಿದ್ದೆಗೆಟ್ಟು  ವೋಲ್ಟೇಜ್ ಬರುವವರಿಗೆ ಕಾದು ಕೃಷಿಕರು ತೋಟಗಳಿಗೆ ನೀರು ಸಿಂಪಡಿಸುವುದು ಅನಿವಾರ್ಯವಾಗಿದೆ. ಕುಡಿಯುವ ನೀರಿಗಾಗಿ ಕೊಳವೆ ಬಾವಿಗಳನ್ನು  ಆಶ್ರಯಿಸುವವರಿಗೆ ಕೂಡ ವೋಲ್ಟೇಜ್ ಕೊರತೆ ಸಂಕಷ್ಟಕ್ಕೀಡು ಮಾಡುತ್ತಿದೆ. ಒಟ್ಟಿನಲ್ಲಿ  ನೂತನ ವಿದ್ಯುತ್ ಸೆಕ್ಷನ್ ಕಚೇರಿ ಶೀಘ್ರದಲ್ಲೇ ಆರಂಭಗೊಳ್ಳಲು ಜನಪ್ರತಿನಿಗಳು ಹಾಗೂ ಅಕಾರಿಗಳು ತತ್ಕ್ಷಣ ಯೋಜನೆ ರೂಪಿಸಬೇಕು ಎಂದು ಸಾರ್ವಜನಿಕ ವಲಯ ಆಗ್ರಹಿಸಿದೆ.
   ಅಭಿವೃದ್ಧಿ ರಾಜಕೀಯ : ಬೋವಿಕ್ಕಾನ ಕೇಂದ್ರವಾಗಿ ನೂತನ ಸೆಕ್ಷನ್ ಕಚೇರಿ ಸ್ಥಾಪಿಸಲು ಎಂಟನೇ ಮೈಲಿನಲ್ಲಿ ಯುಡಿಎಫ್ ಕಾಲಾವಯಲ್ಲಿ  ಸ್ಥಳ ಗುರುತಿಸಲಾಗಿತ್ತು. ಆದರೆ ಅದನ್ನು  ಎಲ್ಡಿಎಫ್ ಸರಕಾರವು ನಿರ್ಲಕ್ಷಿಸುತ್ತಿದೆ ಎಂಬ ಆರೋಪವೂ ಇದೆ. ಯುಡಿಎಫ್ ಒಕ್ಕೂಟ ರೂಪಿಸಿದ ಯೋಜನೆಯನ್ನು  ಯಾಕೆ ಜಾರಿಗೊಳಿಸಬೇಕು ಎಂಬುದು ಎಲ್ಡಿಎಫ್ ಒಕ್ಕೂಟದ ನಿಲುವಾಗಿದೆ. ಆದ್ದರಿಂದಲೇ ಸೆಕ್ಷನ್ ಕಚೇರಿ ವಿಭಜನೆ ವಿಳಂಬಗೊಳ್ಳುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಇನ್ನಾದರೂ ಅಭಿವೃದ್ಧಿಯಲ್ಲಿ  ರಾಜಕೀಯ ನುಸುಳದಂತೆ ಮನಸ್ಸು  ಮಾಡಬೇಕಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries