ಶ್ರೀನಿವಾಸ ಮಹಾಮಂಗಳೋತ್ಸವ-ಅಭಿನಂದನಾ ಸಭೆ
ಪೆರ್ಲ: ಶ್ರೀ ಪುರಂದರದಾಸ ಆರಾಧನೋತ್ಸವ ಸಮಿತಿ, ಕಾಟುಕುಕ್ಕೆ ಇದರ ದಾಸಮಹೋತ್ಸವದ ಪ್ರಯುಕ್ತ ಭಜಕರ ಸಹಕಾರದೊಂದಿಗೆ, ಶ್ರೀ ಸುಬ್ರಾಯ ದೇವಸ್ಥಾನ ಕಾಟುಕುಕ್ಕೆಯಲ್ಲಿ ದಿನಾಂಕ ಜ. 16ರಿಂದ 20ರ ವರೆಗೆ ನಡೆದ ಶ್ರೀ ದೇವಿ ಭೂದೇವಿ ಸಹಿತ ಶ್ರೀನಿವಾಸ ದೇವರಿಗೆ ತಿರುಮಜ್ಜನಾಭಿಷೇಕ ಪೂರ್ವಕ ಶ್ರೀನಿವಾಸ ಮಹಾಮಂಗಲೋತ್ಸವ ಮತ್ತು ದಾಸ ಸಾಹಿತ್ಯ ಪ್ರಚಾರಾರ್ಥವಾಗಿ ಭಜನಾ ಸಂಪ್ರದಾಯದ ಪುನರುಜ್ಜೀವನಕ್ಕಾಗಿ ದಾಸರ ಹಾಡುಗಳಿಂದಲೇ ಮನೆಮಾತಾಗಿರುವ ರಾಮಕೃಷ್ಣ ಕಾಟುಕುಕ್ಕೆಯವರ ದಾಸ ಸಂಕೀರ್ತನಾ ಯಾನದ 500ನೇ ಕಾರ್ಯಕ್ರಮದ ಲೋಕಾರ್ಪಣೆ ಯ ಪಂಚದಿನೋತ್ಸವ ಸಂಭ್ರಮದೊಂದಿಗೆ ನಿರಂತರ ಭಜನೆ, ದಾಸ ಸಂಕೀರ್ತನೆ, ಸಮೂಹ ಗಾಯನ, ಸತ್ಸಂಗ, ಹರಿಕೀರ್ತನೆ, ಯಕ್ಷ ಸಂಕೀರ್ತನೆ, ಧಾಮರ್ಿಕ ಪ್ರವಚನ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳ ಯಶಸ್ಸಿಗೆ ಸಹಕರಿಸಿದ ಎಲ್ಲಾ ಕಾರ್ಯಕರ್ತ, ಸ್ವಯಂಸೇವಕರಿಗೆ ಅಭಿನಂದಿಸುವ ಸಲುವಾಗಿ, ಫೆ. 03 ರಂದು ಶನಿವಾರ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವರ ಸನ್ನಿಧಿಯಲ್ಲಿ ಅಭಿನಂದನಾ ಸಭೆ ನಡೆಯಿತು.
ಸಮಾರಂಭಕ್ಕೆ ಅವಿರತ ಶ್ರಮಿಸಿದ , ಪ್ರತ್ಯಕ್ಷ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಲಾಯಿತು. ಸ್ಥಾನೀಯ ಸಮಿತಿ ಉಪಾಧ್ಯಕ್ಷ ಸಚ್ಚಿದಾನಂದ ಖಂಡೇರಿ , ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನ ಆಡಳಿತ ಮೊಕ್ತೇಸರ ವಿಷ್ಣು ಪ್ರಕಾಶ್ ಪಿಲಿಂಗಲ್ಲು ,ಗೋವಿಂದ ಭಟ್ ಖಂಡೇರಿ , ಸ್ಥಾನೀಯ ಸಮಿತಿ ಅಧ್ಯಕ್ಷ ಪುರುಷೋತ್ತಮ ಭಟ್ ಮಿತ್ತೂರು, ಮಹಿಳಾ ಮಂಡಳಿ ಅಧ್ಯಕ್ಷೆ ವಾಣಿ ಜಿ ಶೆಟ್ಟಿ ,ಕಾರಿಂಜೆ ಹಳೆಮನೆ ಶಿವರಾಂ ಭಟ್ , ಸ್ಥಾನೀಯ ಸಮಿತಿ ಕೋಶಾಧಿಕಾರಿ ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು.ಖ್ಯಾತ ಯಕ್ಷಗಾನ ಭಾಗವತ ಸತ್ಯನಾರಾಯಣ ಪುಣಿಚಿತ್ತಾಯರು ಕಾರ್ಯಕಮ ನಿರ್ವಹಿಸಿದರು.