HEALTH TIPS

No title

               ರಸ್ತೆ ಕಾಮಗಾರಿ ಅವೈಜ್ಞಾನಿಕ, ಕಳಪೆ ಕಾಮಗಾರಿ : ಬಿಜೆಪಿ ಆರೋಪ
    ಮಂಜೇಶ್ವರ: ಹೊಸಂಗಡಿ, ಬಂಗ್ರಮಂಜೇಶ್ವರ ರಸ್ತೆ ನಿಮರ್ಾಣ ಕಾಮಗಾರಿ ಕಳಪೆ ಹಾಗೂ ಅವೈಜ್ಞಾನಿಕ ಕಾಂಕ್ರೀಟ್ ರಸ್ತೆ ನಿಮರ್ಿಸಲಾದ ಕೆಲವು ಕಡೆ ರಸ್ತೆಗಳೇ ಬಿರುಕು ಬಿಟ್ಟವೆ. ಕಾಂಕ್ರೀಟ್ ಕೆಲವು ಕಡೆ ಕುಸಿದು ಬಿದ್ದಿವೆ ಎಂದು ಬಿಜೆಪಿ ಮಂಜೇಶ್ವರ ಸಮಿತಿ ಆರೋಪಿಸಿದೆ ಹಾಗೂ ರಸ್ತೆ ನಿಮರ್ಾಣದಲ್ಲಿ ಉಂಟಾದ ಅವ್ಯವಹಾರ ತನಿಖೆ ನಡೆಸಬೇಕೆಂದು ವಿಜಿಲೆನ್ಸ್ಗೆ ದೂರು ನೀಡಲಾಗಿದೆ.
   ಕಟ್ಟೆ ಬಝಾರ್ನಲ್ಲಿ ಚರಂಡಿ ವ್ಯವಸ್ಥೆ ಸರಿ ಇಲ್ಲ. ಚರಂಡಿಗಳು ಕಳಪೆ ಕಾಮಗಾರಿಯಿಂದ ಘನ ವಾಹನ ಸಂಚಾರದಿಂದ ಈಗಾಗಲೇ ಹಾನಿಯಾಗಿವೆ. ಮೀಯಪದವು ಕೂಳೂರ್, ಬಂಗ್ರಮಂಜೇಶ್ವರ ರಸ್ತೆ ನಿಮರ್ಾಣಕ್ಕೆ 9 ಕಿ.ಮೀ ರಸ್ತೆಗೆ 15 ಕೋಟಿ ರೂ. ಗುತ್ತಿಗೆ  ಮಂಜೂರಾದರೂ ಸರಕಾರದ, ಶಾಸಕರ ನಿರ್ಲಕ್ಷ್ಯದಿಂದ ಗುತ್ತಿಗೆದಾರರು  ಮೊದಲ ಕಂತು ವಿಲೇವಾರಿ ನೀಡದ ಕಾರಣ ಡಾಮರೀಕರಣ ಮಾಡದೇ ಗುತ್ತಿಗೆದಾರ ಕಾಮಗಾರಿ ತಡೆ ಹಿಡಿದು ನಾಡಿನ ಜನತೆ ಸಂಕಷ್ಟ  ಅನುಭವಿಸುವಂತಾಗಿದೆ ಎಂದು ಬಿಜೆಪಿ ಮಂಡಲ ಪ್ರಧಾನ ಕಾರ್ಯದಶರ್ಿ ಆದಶರ್್ ಬಿ.ಎಂ. ಆರೋಪಿಸಿದ್ದಾರೆ.
  ಆಧುನಿಕ ತಂತ್ರಜ್ಞಾನ ಬಳಸದೆ ಕಾಮಗಾರಿ ನಡೆಸಿ ವಂಚಿಸಲಾಗಿದೆ. 5 ತಿಂಗಳಿನಿಂದ ಕಾಮಗಾರಿ ಆರಂಭಗೊಂಡರೂ ಇನ್ನು ಡಾಮರೀಕರಣ ಸಾಧ್ಯವಾಗಿಲ್ಲ. ಮೀಯಪದವು ರಸ್ತೆ ನಾಡಿನ ಜನತೆಗೆ ಶಾಪವಾಗಿ ಪರಿಣಮಿಸಿದೆ. ಹೊಸಂಗಡಿ ಬಂಗ್ರಮಂಜೇಶ್ವರ ರಸ್ತೆ ವಿಳಂಬದಿಂದ ಅತೀ ಹೆಚ್ಚು ಸರಕಾರಿ ಕಚೇರಿಗಳಿರುವ ಭಾಗಕ್ಕೆ ಜನತೆ ನಿತ್ಯ ತಮ್ಮ ಕಾರ್ಯಕ್ಕೆ ಪ್ರಯಾಣಿಸಲು ಆಗುತ್ತಿಲ್ಲ. ಮಂಜೇಶ್ವರ ಪೊಲೀಸ್ ಠಾಣೆ, ರಿಜಿಸ್ಟರ್ ಕಚೇರಿ, ಪಂಚಾಯತ್, ಬ್ಲಾಕ್ ಪಂಚಾಯತು ಕಚೇರಿ ಕೆಎಸ್ಇಬಿ, ಬಿಎಸ್ಎನ್ ಎಲ್ ಕಚೇರಿ, ಕೃಷಿ ಭವನ, ಗೋವಿಂದ ಪೈ ನಿವಾಸ, ಮಂಜೇಶ್ವರ ಚಚರ್್, ಅನಂತೇಶ್ವರ ಕ್ಷೇತ್ರ, ಕೇರಳದ ಏಕೈಕ ಜೈನ ಮಂದಿರ, ಮೀನುಗಾರಿಕಾ ಬಂದರು, ರೈಲು ನಿಲ್ದಾಣ, ಪಿಡಬ್ಲ್ಯುಡಿ ವಿಶ್ರಾಂತಿ ಧಾಮ, ಶಾಲೆ, ನೊಂದಣಿ ಕಚೇರಿ, ಉಪ ಖಜಾನೆ ಎಲ್ಲವಿರುವ ರಸ್ತೆಯ ಕಾಮಗಾರಿ ವಿಳಂಬ ಸ್ಥಳೀಯ ಶಾಸಕರ ಹಾಗು ಸರಕಾರದ ಇಚ್ಛಾಶಕ್ತಿ ದೂರದೃಷ್ಟಿ ಇಲ್ಲದ ನಡೆಯಾಗಿದ್ದು, ಆದಷ್ಟು ಶೀಘ್ರ ಸರಿಪಡಿಸಿ ರಸ್ತೆ ಸಂಚಾರ ಯೋಗ್ಯ ಗೊಳಿಸದಿದ್ದಲ್ಲಿ ಬಿಜೆಪಿ ಜನತೆಯ ಪರವಾಗಿ ಹೋರಾಟಕ್ಕೆ ನಿರ್ಣಯಿಸಿದೆ ಎಂದು ಆದಶರ್್ ಬಿ.ಎಂ. ತಿಳಿಸಿದ್ದಾರೆ.
 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries