ಇಂದು ಕುಳೂರು ಶಾಲಾ ವಾಷರ್ಿಕೋತ್ಸವ
ಮಂಜೇಶ್ವರ: ಕುಳೂರಿನಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ವಾಷರ್ಿಕೋತ್ಸವ ಮತ್ತು ನೂತನವಾಗಿ ನಿಮರ್ಿಸಿದ ಭೋಜನ ಶಾಲಾ ಉದ್ಘಾಟನೆ ಫೆ.4 ರಂದು ನಡೆಯಲಿದೆ.
ಬೆಳಗ್ಗೆ 9.30 ಕ್ಕೆ ಕೊರಗಪ್ಪ ಎ. ಕುಳೂರು ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಬಳಿಕ ಶಾಲಾ ವೇದಿಕೆಯ ನೂತನ ಅಂಕ ಪರದೆಯ ಅನಾವರಣವನ್ನು ಕೊಡುಗೆ ನೀಡಿದ ಮೋಹನ ಶೆಟ್ಟಿ ಮಜ್ಜಾರು ನೆರವೇರಿಸುವರು. 10.30 ಕ್ಕೆ ನೂತನ ಭೋಜನ ಶಾಲಾ ಉದ್ಘಾಟನೆಯನ್ನು ಮೀಂಜ ಗ್ರಾಮ ಪಂಚಾಯತು ಅಧ್ಯಕ್ಷೆ ಶಂಶಾದ್ ಶುಕೂರ್ ನೆರವೇರಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸದಸ್ಯೆ ಚಂದ್ರಾವತಿ ವಿ.ಪಿ. ವಹಿಸುವರು. ಮುಖ್ಯ ಅತಿಥಿಗಳಾಗಿ ಮೀಂಜ ಗ್ರಾಮ ಪಂಚಾಯತು ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷ ಕೃಷ್ಣ ಕೊಮ್ಮಂಗಳ, ಗ್ರಾಮ ಪಂಚಾಯತು ಕಾರ್ಯದಶರ್ಿ ನಂದಗೋಪಾಲ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪ್ರಮೋದ್ ಶೆಟ್ಟಿ ಶಾಲೆದಪಡ್ಪು ಉಪಸ್ಥಿತರಿರುವರು. ಅಪರಾಹ್ನ 3 ಕ್ಕೆ ನಡೆಯುವ ಸಭಾ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಹಷರ್ಾದ್ ವಕರ್ಾಡಿ ಉದ್ಘಾಟಿಸುವರು. ಹಳೆ ವಿದ್ಯಾಥರ್ಿ ಸಂಘದ ಅಧ್ಯಕ್ಷ ಮೊಹಮ್ಮದ್ ಕಂಚಿಲ ವಹಿಸಲಿರುವರು. ಕಾರ್ಯಕ್ರಮದಲ್ಲಿ ಬ್ಲಾಕ್ ಪಂಚಾಯತು ಸದಸ್ಯೆ ಆಶಾಲತಾ ಬಿ.ಎಂ, ಗ್ರಾ.ಪಂ. ಸದಸ್ಯೆ ಚಂದ್ರಾವತಿ ವಿ.ಪಿ, ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್ ವಿ, ಕಾಸರಗೋಡು ಉಪಜಿಲ್ಲಾ ವಿದ್ಯಾಧಿಕಾರಿ ನಂದಿಕೇಶನ್ ಎನ್, ಕ್ಷೇತ್ರ ನಿರೂಪಣಾಧಿಕಾರಿ ವಿಜಯ ಕುಮಾರ್ ಪಿ, ಮಧೂರು ಶಾಲಾ ಮುಖ್ಯೋಪಾಧ್ಯಾಯ ವಿನೋದ್ ಕುಮಾರ್ ಬಿ, ವಿಶಿಷ್ಟ ಸೇವಾ ಮೆಡಲಿಸ್ಟ್ ವಿಂಗ್ ಕಮಾಂಡರ್ ನಡುಹಿತ್ಲು ಮೋಹನ್ ರೈ, ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಉಜಿರೆ ಎಸ್ಡಿಎಂ ಕಾಲೇಜಿನ ಪ್ರಾಂಶುಪಾಲ ಮೋಹನ ನಾರಾಯಣ ಕಲ್ಯಾಣತ್ತಾಯ, ಉದ್ಯಮಿ ಪಿ.ಆರ್.ಶೆಟ್ಟಿ ಪೊಯ್ಯಲು, ವಿಜಯ ಬ್ಯಾಂಕಿನ ನಿವೃತ್ತ ಪ್ರಬಂಧಕ ಜಯರಾಮ ಶೆಟ್ಟಿ ಎಲಿಯಾಣ, ತುಳು ಒಕ್ಕೂಟ ಬೆಂಗಳೂರಿನ ಕಾರ್ಯಕಾರಿ ಸದಸ್ಯರಾದ ಮಾಣೂರು ಸೀತಾರಾಮ ಶೆಟ್ಟಿ, ಯುವ ಉದ್ಯಮಿ ಮೋಹನ್ ಶೆಟ್ಟಿ ಮಜ್ಜಾರ್, ಸುಳ್ಯದ ಮೆಟ್ರಿಕ್ ನಂತರದ ವಿದ್ಯಾಥರ್ಿ ನಿಲಯದ ಮೇಲ್ವಿಚಾರಕರಾದ ಮಾಧವ ಕುಳೂರು, ಉದ್ಯಮಿ ಪೂವಪ್ಪ ಶೆಟ್ಟಿ ಚಾರ್ಲ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪ್ರಮೋದ್ ಶೆಟ್ಟಿ ಶಾಲೆದಪಡ್ಪು, ಮಾತೃ ಸಂಘದ ಅಧ್ಯಕ್ಷೆ ಆಶಾಲತಾ ಕುಳೂರು ಉಪಸ್ಥಿತರಿರುವರು.
ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶಮರ್ಾ ಶಾಲಾ ವಾಷರ್ಿಕ ವರದಿ ಮಂಡಿಸುವರು. ಬಳಿಕ ಸ್ಥಳೀಯ ಅಂಗನವಾಡಿ ಪುಟಾಣಿಗಳು, ಶಾಲಾ ಮಕ್ಕಳು ಹಾಗೂ ಹಳೆ ವಿದ್ಯಾಥರ್ಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿರುವುದು. ನಂತರ ಯಶಸ್ವೀ ಕಲಾವಿದರು ಮಂಜೇಶ್ವರ ಅಭಿನಯಿಸುವ `ಅವು ಪನಿಯೆರೆ ಆಪುಜಿ' ಎಂಬ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.