HEALTH TIPS

No title

                      ಮಂಜೇಶ್ವರದಲ್ಲಿ ಯಕ್ಷ ಸಂಭ್ರಮ
    ಮಂಜೇಶ್ವರ: ಕನರ್ಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಆಶ್ರಯದಲ್ಲಿ - ಯಕ್ಷಬಳಗ ಹೊಸಂಗಡಿಯ ಸಹಕಾರದೊಂದಿಗೆ ಫೆ.  18 ರಂದು ಭಾನುವಾರ ಅಪರಾಹ್ನ 2ರಿಂದ ಮಂಜೇಶ್ವರದ ಗೋವಿಂದ ಪೈ ಸ್ಮಾರಕ ಸಭಾಭವನದಲ್ಲಿ ಯಕ್ಷ ಸಂಭ್ರಮ ಕಾರ್ಯಕ್ರಮ ಜರುಗಲಿದೆ.
  ಅಪರಾಹ್ನ 2.30ಕ್ಕೆ ಕಾರ್ಯಕ್ರಮದ ಉದ್ಘಾಟಣೆ ನಡೆಯದಲ್ಲಿದ್ದು, ಯಕ್ಷಗಾನದ ಹಿರಿಯ ಅರ್ಥಧಾರಿಯೂ, ಖ್ಯಾತ ವೈದ್ಯರಾಗಿರುವ ಡಾ. ರಮಾನಂದ ಬನಾರಿ ಉದ್ಘಾಟಿಸಲಿರುವರು. 3.30ಕ್ಕೆ ನಡೆಯುವ ಯಕ್ಷಗಾನ ಪ್ರಾತ್ಯಕ್ಷಿಕೆಯಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡುರವರಿಂದ ತೆಂಕುತಿಟ್ಟು ಯಕ್ಷಗಾನ ಪೂರ್ವರಂಗ ವೈಭವ ನಡೆಯಲಿದ್ದು ಬಾಲಗೋಪಲ - ಕಟ್ಟುಹಾಸ್ಯ - ಅರ್ಧನಾರೀಶ್ವರ ಎಂಬೀ ಆಯ್ದ ಭಾಗಗಳನ್ನು ಆದರಿಸಿದ ಕಥಾ ಪ್ರಸಂಗ ನಡೆಯಲಿದೆ. ಹಿಮ್ಮೇಳದಲ್ಲಿ ಸಿರಿಬಾಗಿಲು ರಾಮಕೃಷ್ಣ ಮಯ್ಯ ಮತ್ತು ಬಳಗ, ಮುಮ್ಮೇಳದಲ್ಲಿ - ಅಂಬಾಪ್ರಸಾದ ಪತಾಳ, ರವಿಶಂಕರ ವಳಕುಂಜ, ಕು. ಉಪಸಾನ ಪಂಜರಿಕೆ, ಕಿಶನ್ ನೆಲ್ಲಿಕಟ್ಟೆ ಪಾಲ್ಗೊಳ್ಳಲಿರುವರು. 4.45ಕ್ಕೆ ವಿಚಾರ ಸಂಕಿರಣ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ಸಮಾರಂಭದಲ್ಲಿ "ಯಕ್ಷಗಾನಕ್ಕೆ ಕಾಸರಗೋಡಿನ ಕೊಡುಗೆ" ಎಂಬ ವಿಷಯದಲ್ಲಿ ಮಾಜಿ ಶಾಸಕ ಕುಂಬ್ಳೆ ಸುಂದರ ರಾವ್ ಉಪನ್ಯಾಸ ನೀಡಲಿರುವರು. ಸಂಜೆ 5.15 ಕ್ಕೆ ಜಾಂಬವತಿ ಕಲ್ಯಾಣ ಎಂಬ ಯಕ್ಷಗಾನ ಪ್ರಸಂಗವು ನಾಗರಾಜ ಪದಕಣ್ಣಾಯ ಮೂಡಂಬೈಲು ತಂಡದವರಿಂದ ನಡೆಯಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಪ್ರಸಾದ ಬಲಿಪ, ಚೆಂಡೆ, ಮದ್ದಳೆಯಲ್ಲಿ ಶೇಣಿ ಸುಬ್ರಮ್ಮಣ್ಯ ಭಟ್, ಕುದ್ರೆಕೊಡ್ಲು ರಾಮಮೂತರ್ಿ, ಮುಮ್ಮೇಳದಲ್ಲಿ ಬೆಳ್ಳಾರೆ ಮಂಜುನಾಥ ಭಟ್, ಉಬರಡ್ಕ ಉಮೇಶ ಶೆಟ್ಟಿ, ವಕರ್ಾಡಿ ತಾರನಾಥ ಬಲ್ಯಾಯ, ಸತೀಶ್ ನ್ಯೆನಾಡ್, ಲೋಕೇಶ್ ಮುಚ್ಚೂರು ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಅಕಾಡೆಮಿಯ ಪ್ರಕಟನೆಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯಿದೆ ಎಂದು ಯಕ್ಷ ಬಳಗದ ಸಂಘಟಕ ಸಂಕಬೈಲ್ ಸತೀಶ್ ಅಡಪ ಪತ್ರಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries