HEALTH TIPS

No title

                   ಮಾ.31ರಿಂದ ಮುಳ್ಳೇರಿಯದಲ್ಲಿ ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನ
   ಮುಳ್ಳೇರಿಯ: ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ 11ನೇ ಕಾಸರಗೋಡು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಾ.31 ಮತ್ತು ಏ.1ರಂದು ಮುಳ್ಳೇರಿಯದ ವಿದ್ಯಾಶ್ರೀ ಶಿಕ್ಷಣ ಕೇಂದ್ರದ ಪರಿಸರದಲ್ಲಿ ನಡೆಯಲಿದೆ.
   ಮಾ.31ರಂದು ಬೆಳಿಗ್ಗೆ 8.30ಕ್ಕೆ ಧ್ವಜಾರೋಹಣ, 9.30ರಿಂದ ಮುಳ್ಳೇರಿಯ ಸರಕಾರಿ ಹೈಯರ್ ಸೆಕೆಂಡರೀ ಶಾಲಾ ಪರಿಸರದಿಂದ ಸಮ್ಮೇಳನ ಅಧ್ಯಕ್ಷರಾದ ಡಾ.ನಾ.ಮೊಗಸಾಲೆ ಅವರನ್ನು ವರ್ಣರಂಜಿತ ಮೆರವಣಿಗೆಯ ಮೂಲಕ ಸಮ್ಮೇಳನ ನಗರಕ್ಕೆ ಕರೆದೊಯ್ಯುವುದು, ಕಾರಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ವಪ್ನ.ಜಿ ಮೆರವಣಿಗೆಯನ್ನು ಉದ್ಘಾಟಿಸುವರು. 10.30ಕ್ಕೆ ವಿದ್ಯಾಶ್ರೀ ಶಿಕ್ಷಣ ಕೇಂದ್ರದ ವಿದ್ಯಾಥರ್ಿಗಳಿಂದ ನಾಡಗೀತೆ, ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್ ವಿ ಭಟ್ ಆಶಯ ನುಡಿಗಳನ್ನಾಡುವರು.  ಸಾಹಿತಿ ಡಾ.ನಾ.ಮೊಗಸಾಲೆ ಸಮಾರಂಭದ ಅಧ್ಯಕ್ಷತೆ ವಹಿಸುವರು. ಪದ್ಮಶ್ರೀ ಪುರಸ್ಕೃತ ಸಾಹಿತಿ ದೊಡ್ಡರಂಗೇ ಗೌಡ ಉದ್ಘಾಟಿಸುವರು. ಸಂಸದ ಪಿ.ಕರುಣಾಕರನ್ ಪುಸ್ತಕ ಪ್ರದರ್ಶನ ಮಳಿಗೆ ಉದ್ಘಾಟಿಸುವರು, ಚಿತ್ರಕಲಾ ಪ್ರದರ್ಶನವನ್ನು ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು, ಉದುಮ ಶಾಸಕ ಕೆ.ಕುಂಞಿರಾಮನ್ ಉದ್ಘಾಟಿಸುವರು. ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರು ಪಿ.ರಾಜಗೋಪಾಲ ಪುಣಿಂಚಿತ್ತಾಯ ರಚಿಸಿದ "ಅಮೇರಿಕಾದಲ್ಲಿ ನಾವು" ಪುಸ್ತಕ ಬಿಡುಗಡೆಗೊಳಿಸುವರು.  ಮುಖ್ಯ ಅತಿಥಿಗಳಾಗಿ ಕಾರಡ್ಕ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಓಮನಾ ರಾಮಚಂದ್ರನ್, ಕಾರಡ್ಕ ಪಂಚಾಯಿತಿ ಸದಸ್ಯೆ ಸ್ಮಿತಾ.ಪಿ, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್.ಪ್ರದೀಪ್ ಕುಮಾರ ಕಲ್ಕೂರ, ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕೆ.ಕೈಲಾಸಮೂತರ್ಿ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಅಧ್ಯಕ್ಷ ರವೀಂದ್ರನಾಥ ಬಲ್ಲಾಳ್, ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘದ ಉಪಾಧ್ಯಕ್ಷ ದಯಾಸಾಗರ ಚೌಟ, ಸಮಾಜ ಸೇವಕ ಜಿನೇಂದ್ರ ಪ್ರಸಾದ್.ಪಿ.ವಿ ವಯನಾಡ್ ಭಾಗವಹಿಸುವರು. ಕಾಯರ್ಾಧ್ಯಕ್ಷ ಕೆ.ರಂಗನಾಥ ಶೆಣೈ, ವಿದ್ಯಾಶ್ರೀ ಶಿಕ್ಷಣ ಕೇಂದ್ರದ ಮುಖ್ಯ ಶಿಕ್ಷಕ ಸುರೇಶ್ ಕುಮಾರ್ ಉಪಸ್ಥಿತರಿರುವರು. ಅಪರಾಹ್ನ 1.30 ಕ್ಕೆ ಮುಳ್ಳೇರಿಯ ವಿದ್ಯಾಶ್ರೀ ಶಿಕ್ಷಣ ಕೇಂದ್ರದ ವಿದ್ಯಾಥರ್ಿಗಳಿಂದ ಸಮೂಹಗಾನ, 2ರಿಂದ ಸಾಲಿಗ್ರಾಮ ಗುರುಪ್ರಸಾದಿತ ಯಕ್ಷಗಾನ ಮಂಡಳಿಯವರಿಂದ ಯಕ್ಷ ವೈಭವ ಭಕ್ತ ಚಂದ್ರಹಾಸ, ಸಂಜೆ 5ರಿಂದ ಮುಳ್ಳೇರಿಯ ವಿದ್ಯಾಶ್ರೀ ಶಿಕ್ಷಣ ಕೇಂದ್ರದ ವಿದ್ಯಾಥರ್ಿಗಳಿಂದ ನೃತ್ಯ ವೈವಿಧ್ಯ ನಡೆಯಲಿದೆ.
    ಏ.1ರಂದು ಬೆಳಿಗ್ಗೆ 9.30ಕ್ಕೆ ಮಕ್ಕಳ ಕವಿಗೋಷ್ಠಿ, ಕು.ಮೇಧಾ.ಎನ್ ಅಧ್ಯಕ್ಷತೆ ವಹಿಸುವರು, ಕವಿಗಳಾದ ಸನ್ನಿಧಿ.ಟಿ.ರೈ, ಸುಪ್ರೀತಾ ಸುಧೀರ್ ರೈ, ಪ್ರಿಯಾ.ಎಸ್, ಆಕಾಶ್.ಸಿ, ಭಾವನಾಕೃಷ್ಣ.ಎಂ, ಮೇಘಾ ಶಿವರಾಜ್, ಆಶಾ.ಕೆ, ವರಲಕ್ಷ್ಮಿ, ಚಿನ್ಮಯಕೃಷ್ಣ.ಕೆ, ವಿಕಾಸ್ ಕೊಳಾರಿ ಭಾಗವಹಿಸುವರು. 10ಕ್ಕೆ ಕಾಸರಗೋಡು ಕನ್ನಡಿಗರ ಸಮಸ್ಯೆಗಳು-ಪರಿಹಾರಗಳು ವಿಷಯವಾಗಿ ವಿಚಾರಗೋಷ್ಠಿ, ಕನ್ನಡ ಹೋರಾಟ ಸಮಿತಿ ಅಧ್ಯಕ್ಷ ನ್ಯಾಯವಾದಿ ಮುರಳೀಧರ ಬಳ್ಳಕ್ಕುರಾಯ ಅಧ್ಯಕ್ಷತೆ ವಹಿಸುವರು. ಔದ್ಯೋಗಿಕ ರಂಗದ ಸವಾಲುಗಳು-ಪರಿಹಾರ ವಿಷಯವಾಗಿ ನ್ಯಾಯವಾದಿ ಥಾಮಸ್ ಡಿಸೋಜ, ಶೈಕ್ಷಣಿಕ ಕ್ಷೇತ್ರದ ಸಮಸ್ಯೆಗಳು-ಪರಿಹಾರ ವಿಷಯವಾಗಿ ಮಹಾಲಿಂಗೇಶ್ವರ ಭಟ್ ಎಂ.ವಿ, ಭಾಷೆ, ಕಲೆ, ಸಾಂಸ್ಕೃತಿಕ ನೆಲೆಯ ಸವಾಲುಗಳು-ಪರಿಹಾರ ವಿಷಯವಾಗಿ ಆಶಾ ದೀಪಕ್ ಸುಳ್ಯಮೆ ಉಪನ್ಯಾಸ ನೀಡುವರು, 11ಕ್ಕೆ  ಕವಿಗೋಷ್ಠಿ, ಸಾಹಿತಿ ಡಾ.ಶರತ್ ಕುಮಾರ್ ಅಧ್ಯಕ್ಷತೆ ವಹಿಸುವರು. ಕವಿಗಳಾದ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ವಿಜಯಲಕ್ಷ್ಮೀ ಶ್ಯಾನುಭೋಗ್, ಡಾ.ರಾಧಾಕೃಷ್ಣ ಬೆಳ್ಳೂರು, ಶಂಕರನಾರಾಯಣ ಭಟ್ ಕಕ್ಕೆಪ್ಪಾಡಿ, ಕವಿತಾ ಕೂಡ್ಲು, ವಿರಾಜ್ ಅಡೂರು, ಪ್ರಭಾವತಿ ಕೆದಿಲಾಯ ಪುಂಡೂರು, ಪರಿಣಿತ ರವಿ ಎಡನಾಡು, ಪುರುಷೋತ್ತಮ ಭಟ್.ಕೆ, ವಿಜಯರಾಜ್ ಪುಣಿಚಿತ್ತಾಯ, ಶ್ಯಾಮಲಾ ರವಿರಾಜ್, ಶ್ರದ್ಧಾ ನಾಯರ್ಪಳ್ಳ ಭಾಗವಹಿಸುವರು. ಮಧ್ಯಾಹ್ನ 12ಕ್ಕೆ ಸಂಗೀತ ಸಂಭ್ರಮ, ಹಾಡುಗಾರಿಕೆಯಲ್ಲಿ ಕಲ್ಮಾಡಿ ಸದಾಶಿವ ಆಚಾರ್ಯ, ರಾಧಾ ಮುರಲೀಧರ, ಉಷಾ ಈಶ್ವರ ಭಟ್, ಯೋಗೀಶ ಶರ್ಮ ಬಳ್ಳಪದವು, ಮೃದಂಗದಲ್ಲಿ ಡಾ.ಶಂಕರ ರಾಜ್, ವಯಲಿನ್ನಲ್ಲಿ ಪ್ರಭಾಕರ ಕುಂಜಾರು, ತಬಲದಲ್ಲಿ ಕೆ.ಶ್ರೀಧರ ರೈ, ಘಟಂ ನಲ್ಲಿ ಈಶ್ವರ ಭಟ್ ಸಹಕರಿಸುವರು. 1.30ಕ್ಕೆ ಪ್ರಸಿದ್ಧ ಯಕ್ಷ ಹಾಸ್ಯ ಕಲಾವಿದರಿಂದ ಯಕ್ಷ ಹಾಸ್ಯ ಲಹರಿ, 3ಕ್ಕೆ ಸಮಾರೋಪ ಸಮಾರಂಭ, ನಾ.ಮೊಗಸಾಲೆ ಅಧ್ಯಕ್ಷತೆ ವಹಿಸುವರು, ಮಂಜೇಶ್ವರ ಶಾಸಕ ಪಿ.ಬಿ ಅಬ್ದುಲ್ ರಝಾಕ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಡಾ.ಬಳ್ಳಪದವು ಮಾಧವ ಉಪಾಧ್ಯಾಯ , ನಾರಾಯಣ ಗಟ್ಟಿ.ಕೆ, ಕೀರಿಕ್ಕಾಡು ವನಮಾಲ ಕೇಶವ ಭಟ್, ಮಹಾಬಲ ಶೆಟ್ಟಿ, ಡಾ.ಗಣಪತಿ ಭಟ್ ಕುಳಮರ್ವ, ಮಹಮ್ಮದ್ ಅಲಿ ಪೆರ್ಲ, ಜಲಜಾಕ್ಷಿ ಟೀಚರ್ ಇವರಿಗೆ ಸನ್ಮಾನ, ವಿಮರ್ಶಕ ಎಸ್.ಆರ್.ವಿಜಯಶಂಕರ್ ಸಮಾರೋಪ ಭಾಷಣ ಮಾಡುವರು. ತುಳು ಅಕಾಡೆಮಿ ಅಧ್ಯಕ್ಷ ಪಿ.ಎಸ್.ಪುಣಿಚಿತ್ತಾಯ, ಪಾತರ್ಿಸುಬ್ಬ ಯಕ್ಷಗಾನ ಕಲಾಕ್ಷೇತ್ರದ ಅಧ್ಯಕ್ಷ ಜಯರಾಮ ಮಂಜತ್ತಾಯ ಎಡನೀರು, ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಂದ್ರ ಅಡಿಗ ನೀಲಾವರ, ಸುಬ್ರಹ್ಮಣ್ಯ ಶೆಟ್ಟಿ, ಐ.ವಿ.ಭಟ್ ಭಾಗವಹಿಸುವರು. ಸಂಜೆ 5ಕ್ಕೆ  ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ ಇವರ ಶಿಷ್ಯವೃಂದದವರಿಂದ ನೃತ್ಯ ಸಿಂಚನ, 5.30ಕ್ಕೆ ಮಕ್ಕಳಿಂದ ಯಕ್ಷಗಾನ ಬಯಲಾಟ ಮಹಿಷಾಸುರ ವಧೆ ನಡೆಯಲಿದೆ.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries