HEALTH TIPS

ಯಾವುದೇ ಶೀರ್ಷಿಕೆಯಿಲ್ಲ

           ಗಣ್ಯರ ಸಾಥ್ನೊಂದಿಗೆ ಯಶಸ್ವಿಯಾದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಶನಿವಾರದ ಗಮನಾರ್ಹ ಕಾರ್ಯಕ್ರಮ 
    ಮುಳ್ಳೇರಿಯ: ಮುಳ್ಳೇರಿಯದ ವಿದ್ಯಾಶ್ರೀ ಶಿಕ್ಷಣ ಕೇಂದ್ರದ ಅಂಗಣದಲ್ಲಿ ಶನಿವಾರ ಆರಂಭಗೊಂಡ ಕಾಸರಗೋಡು ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದ ಬಳಿಕ ವಿದ್ಯಾಶ್ರೀ ಶಾಲಾ ಮಕ್ಕಳಿಂದ ಸಮೂಹ ಗಾಯನ ಕಾರ್ಯಕ್ರಮ ನಡೆಯಿತು. ವಿವಿಧ ಕವಿಗಳಿಂದ ರಚಿಸಿದ ನಾಡಗೀತೆಗಳು, ಕನ್ನಡ ಸಂಸ್ಕೃತಿ, ಸಂವರ್ಧನೆಯ ಪ್ರೇರಕ ಗೀತೆಗಳು ಗಮನ ಸೆಳೆದವು.
  ಬಳಿಕ ಸಾಲಿಗ್ರಾಮದ ಗುರುಪ್ರಸಾದಿತ ಯಕ್ಷಗಾನ ಮಂಡಳಿಯವರಿಂದ ಭಕ್ತಚಂದ್ರಹಾಸ ಪ್ರಸಂಗದ ಯಕ್ಷಗಾನ ಪ್ರದರ್ಶನ ನಡೆಯಿತು.ಕಿಕ್ಕಿರಿದ ಪ್ರೇಕ್ಷಕರು ಪ್ರದರ್ಶನ ವೀಕ್ಷಿಸಿದರು. ಪ್ರಚಾರ ಹಾಗೂ ಮೆರವಣಿಗೆ ಸಮಿತಿ ಸಂಚಾಲಕ ಗೋವಿಂದ ಬಳ್ಳಮೂಲೆ ಕಾರ್ಯಕ್ರಮ ನಿರೂಪಿಸಿದರು. ಸಂಜೆ 5 ರಿಂದ ನೃತ್ಯ ವೈವಿಧ್ಯತೆಗಳು ಶಾಲಾ ವಿದ್ಯಾಥರ್ಿಗಳಿಂದ ಪ್ರಸ್ತುತಗೊಂಡಿತು.
   ಗಮನ ಸೆಳೆದ ಪ್ರದರ್ಶನಗಳು:
  ಜನಮನ ರಂಜಿಸಿದ ಬಹುಮುಖಿ ಕಲಾ ಪ್ರದರ್ಶನ
ಮುಳ್ಳೇರಿಯ : ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ವಿದ್ಯಾಶ್ರೀ ಶಿಕ್ಷಣ ಕೇಂದ್ರದಲ್ಲಿ ಏರ್ಪಡಿಸಿದ ಬಹುಮುಖಿ ಕಲಾ ಪ್ರದರ್ಶನವು ಜನಮನ ಸೂರೆಗೊಂಡಿತು. ಖ್ಯಾತ ಕಲಾವಿದರಿಂದ ಹಿಡಿದು ಹೊಸ ತಲೆಮಾರಿನ ಕಲಾವಿದರ ತನಕ ಅನೇಕ ಮಂದಿಯ ಚಿತ್ರಗಳು ಪ್ರದರ್ಶನಗೊಂಡಿದೆ. ಖ್ಯಾತ ಚಿತ್ರ ಕಲಾವಿದರಾದ ಪಿ ಎಸ್ ಪುಂಚಿತ್ತಾಯ, ಎಸ್ ಬಿ ಕೋಳಾರಿ, ಜಯಪ್ರಕಾಶ್ ಮಾಸ್ತರ್ ಬೇಳ, ರಮೇಶ್ ರಚಿಸಿದ ಕಣ್ಮನ ಸೆಳೆಯುವ ಬಣ್ಣದ ಚಿತ್ರಗಳು, ಪ್ರವೀಣ್ ಕುಮಾರ್ ಪುಂಚಿತ್ತಾಯರ ಶಿಲ್ಪಕಲಾಕೃತಿಗಳು, ಬಾಲಮಧುರಕಾನನ, ವೆಂಕಟ್ ಭಟ್ ಎಡನೀರು, ವಿರಾಜ್ ಅಡೂರು ರಚಿಸಿದ ನೆಯುಕ್ಕಿಸುವ ಸುಂದರ ವ್ಯಂಗ್ಯಚಿತ್ರಗಳು, ಅಖಿಲ ಕೇರಳ ಫೋಟೋಗ್ರಾಫರ್ಸ್ ಆರ್ಗನೈಸೇಶನ್ (ಎಕೆಪಿಎ) ಕಾಸರಗೋಡು ವಲಯದ ಸದಸ್ಯರು ಕ್ಲಿಕ್ಕಿಸಿ ಅಧ್ಭುತ ಫೋಟೋಗಳು ಸಾಹಿತ್ಯಾಸಕ್ತರನ್ನು ಆಕಷರ್ಿಸಿದುವು.
ಪುಸ್ತಕ ಪ್ರದರ್ಶನದಲ್ಲಿ ಬದಿಯಡ್ಕ ಕೇಳು ಮಾಸ್ತರ್ ಸಂಚಾಲಕತ್ವದ ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ ವಿವಿಧ ತರದ ಪುಸ್ತಕಗಳನ್ನು ಮಾರಾಟಕ್ಕೆ ಇರಿಸಲಾಗಿದೆ. ಈ ಮಳಿಗೆಯಲ್ಲಿ ಕಾಸರಗೋಡಿನ ಲೇಖಕರ ಕೃತಿಗಳ ಮಾರಾಟಕ್ಕೆ ಅವಕಾಶ ನೀಡಿದ ಯೋಜನೆಗೆ ಕಾಸರಗೋಡಿನ ಸಾಹಿತಿಗಳಿಂದ ಹಾಗೂ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಅನೇಕ ಮಂದಿ ಮಳಿಗೆಯನ್ನು ಸಂದಶರ್ಿಸಿ ಕಾಸರಗೋಡಿನ ಲೇಖಕರ ಅಮೂಲ್ಯ ಕೃತಿಗಳನ್ನು ಖರೀದಿಸಿದರು. ಉಳಿದಂತೆ ಪುತ್ತೂರಿನ ಜ್ಞಾನಗಂಗಾ ಪುಸ್ತಕ ಮಳಿಗೆ, ಉಡುಪಿಯ ಸುರಭಿ ಪುಸ್ತಕ ಭಂಡಾರ, ಬೆಂಗಳೂರಿನ ಸಾಧನಾ ಪ್ರಕಾಶನ ಮೊದಲಾದ ಸಂಸ್ಥೆಗಳು ಮಾರಾಟ ಮಳಿಗೆ ತೆರೆದಿದ್ದು, ಸಾಹಿತ್ಯಾಸಕ್ತರು ಪುಸ್ತಕಗಳನ್ನು ಖರೀದಿಸಿದರು. ಸಮ್ಮೇಳನದ ಅಧ್ಯಕ್ಷರಾದ ಡಾ. ನಾ ಮೊಗಸಾಲೆ ಅವರ ಸುಮಾರು 14 ಪುಸ್ತಕಗಳು ಸುರಭಿ ಪುಸ್ತಕ ಭಂಡಾರದಲ್ಲಿ ಮಾರಾಟಕ್ಕೆ ಲಭ್ಯವಿದ್ದು, ಸಾಹಿತ್ಯಾಸಕ್ತರು ಉತ್ತಮ ಸ್ಪಂದನ ನೀಡಿ ಖರೀದಿಸುತ್ತಿದ್ದಾರೆ ಎಂದು ಉಡುಪಿಯ ರಮೇಶ್ ಹೇಳಿದರು.
   ಗಣ್ಯರ ಉಪಸ್ಥಿತಿಯ ಬಲ:
    ಸಮ್ಮೇಳನದ ಒಂದನೇ ದಿನ ಶನಿವಾರ ಸಮ್ಮೇಳನ ನಗರಿಗೆ ಗಡಿನಾಡಿನ ಗಣ್ಯರು ವಿಶೇಷ ಭೇಟಿ ನೀಡಿರುವುದು ಕನ್ನಡ ಮನಸ್ಸುಗಳಿಗೆ ಹೆಚ್ಚು ಬಲ ನೀಡಿತು. ಮಂಗಳೂರು ಬಾನುಲಿ ನಿಲಯದ ತುಳು ವಿಭಾಗ ಮುಖ್ಯಸ್ಥ ಡಾ.ಸದಾನಂದ ಪೆರ್ಲ, ತಮಿಳುನಾಡು ಕಾಮರಾಜ ವಿವಿಯ ಕನ್ನಡ ವಿಭಾಗದ ನಿವೃತ್ತ  ಮುಖ್ಯಸ್ಥ ಡಾ.ಹರಿಕೃಷ್ಣ ಭರಣ್ಯ, ಜಿಲ್ಲೆಯ ಹಿರಿಯ ಸಾಹಿತಿ ಡಾ.ರಮಾನಂದ ಬನಾರಿ, ಕವಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ,     ವಯೋವೃದ್ದರೂ, ಕಟ್ಟಾ ಕನ್ನಡ ಭಾಷಾಭಿಮಾನಿ, ನಿವೃತ್ತ ನ್ಯಾಯವಾದಿ ಅಡೂರು ಉಮೇಶ್ ನಾಕ್ ಪತ್ರಕರ್ತ, ಸುಳ್ಯ ತಾಲೂಕು  ಪತ್ರಕರ್ತರ ಸಂಘದ ದುಗರ್ಾಕುಮಾರ್ ನಾಯಕರ್ೆರೆ, ಕಣ್ಣೂರು ವಿವಿಯ ಕನ್ನಡ ಅಧ್ಯಯನ ಸಂಶೋಧನಾ ಕೇಂದ್ರದ ಸಂಯೋಜಕಿ ಡಾ. ಮಹೇಶ್ವರಿ ಯು, ಕಾಸರಗೋಡು ಸರಕಾರಿ ಕಾಲೇಜಿನ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕ ಡಾ.ರತ್ನಾಕರ ಮಲ್ಲಮೂಲೆ, ಕನ್ನಡ ಅಧ್ಯಾಪಕ ಸಂಘದ ಮಾಜೀ ರಾಜ್ಯಾಧ್ಯಕ್ಷ ಮಹಾಲಿಂಗೇಶ್ವರ ಭಟ್ ಮೊದಲಾದವರು ಭಾಗವಹಿಸಿ ಮೆರುಗು ತಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries