HEALTH TIPS

No title

         ಅನುರಣನಗೊಂಡ ರಾಷ್ಟ್ರಕವಿಯ ಜನ್ಮದಿನ-ಕನ್ನಡದ ಕವಿಶೈಲ ಮಂಜೇಶ್ವರ ಗಿಳಿವಿಂಡು ಸ್ಮಾರಕಕ್ಕೆ ಅತ್ಯಧಿಕ ಸಂಖ್ಯೆಯ ಕನ್ನಡ ಪ್ರೇಮಿಗಳು ಹರಿದು ಬರಲಿ
     ಮಂಜೇಶ್ವರ ಗೋವಿಂದ ಪೈ 136 ನೇ ಜನ್ಮದಿನಾಚರಣೆಯಲ್ಲಿ ಕನರ್ಾಟಕ ಕೇಂದ್ರೀಯ ವಿ.ವಿ ಕುಲಪತಿ ಎಚ್.ಎಂ ಮಹೇಶ್ವರಯ್ಯ
  ಮಂಜೇಶ್ವರ: ರಾಷ್ಟ್ರಕವಿ ಮಂಜೇಶ್ವರದ ಗೋವಿಂದ ಪೈಗಳ ಜನ್ಮಸ್ಥಳದ ಭೇಟಿ ಅವಿಸ್ಮರಣೀಯವಾದುದು. ಕನ್ನಡದ ಪ್ರಥಮರಾಷ್ಟ್ರಕವಿ ಬಿರುದಾಂಕಿತ ಗೋವಿಂದ ಪೈಗಳ ಸಾಹಿತ್ಯ ರಚನೆ ಅದ್ಬುತವಾದುದು. ಪೈಗಳ ಭಾಷಾ ಪ್ರೌಢಿಮೆ, ಸಂಶೋಧನಾಸಕ್ತಿ ವಿಶೇಷವಾದುದು.ಕವಿ ನಿವಾಸವನ್ನು ಎರಡು ರಾಜ್ಯಗಳ ಸಹಕಾರದೊಂದಿಗೆ ನವೀಕರಿಸುವ ಮೂಲಕ ರಾಷ್ಟ್ರ ಸ್ಮಾರಕವಾಗಿಸಿದ ಕಾರ್ಯ ಶ್ಲಾಘನೀಯ. ಮುಂದಿನ ದಿನಗಳಲ್ಲಿ ದಕ್ಷಿಣದ ಕವಿಶೈಲ ಮಂಜೇಶ್ವರಕ್ಕೆ ಹೆಚ್ಚಿನ ಸಂಖ್ಯೆಯ ಕನ್ನಡ ಪ್ರೇಮಿಗಳು ಹರಿದು ಬರಲಿ ಎಂದು ಕನರ್ಾಟಕ ಕೇಂದ್ರೀಯ ವಿ.ವಿ ಗುಲ್ಬಗರ್ಾದ ಕುಲಪತಿ ಪ್ರೊ.ಎಚ್.ಎಂ ಮಹೇಶ್ವರಯ್ಯ ಅಭಿಪ್ರಾಯಪಟ್ಟರು.
  ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಮತ್ತು ಗೋವಿಂದ ಪೈ ಸ್ಮಾರಕ ಸಮಿತಿ ಜಂಟಿ ಆಶ್ರಯದಲ್ಲಿ ಕನರ್ಾಟಕ ಸರಕಾರದ ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಮಂಜೇಶ್ವರ ಗೋವಿಂದ ಪೈ ಅವರ 136 ನೇ ಜನ್ಮದಿನಾಚರಣೆಯನ್ನು ಗಿಳಿವಿಂಡುವಿನಲ್ಲಿ ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
  ಗಡಿಯಂಚಿನ ಈ ಭಾಗದಲ್ಲಿ ಕನ್ನಡದ ಕಾರ್ಯ ನಿರಂತರವಾಗಿರುವುದು ಸ್ತುತ್ಯರ್ಹ. ಕನ್ನಡ ಭಾಷೆಗೆ ಈಗಾಗಲೇ ಶಾಸ್ತ್ರೀಯ ಸ್ಥಾನಮಾನ ದೊರಕಿದೆ.ಧಾರವಾಡದ ಬೇಂದ್ರೇ ಟ್ರಸ್ಟ್ ಮೂಲಕ ಬೇಂದ್ರೆಯವರ ಕಾವ್ಯ ಮತ್ತು ಪೈ ಅವರ ಕಾವ್ಯಗಳ ಅನುಸಂಧಾನ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಸ್ಮಾರಕ ಕೇಂದ್ರದಲ್ಲಿ ಆಯೋಜಿಸಲಾಗುವುದು. ಗಿಳಿವಿಂಡು ಸ್ಮಾರಕದಲ್ಲಿ ಭಾರತ ಸರಕಾರದ ಸಂಸ್ಕೃತಿ ಇಲಾಖೆಯ ಅನುದಾನದೊಂದಿಗೆ ಮ್ಯೂಸಿಯಂ ನಿಮರ್ಾಣ ಮಾಡಬಹುದು ಎಂದು ಸಲಹೆ ನೀಡಿದರು.
   ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಹಂಪಿ ಕನ್ನಡ ವಿ.ವಿಯ ವಿಶ್ರಾಂತ ಕುಲಪತಿಡಾ. ಬಿ.ಎ ವಿವೇಕ ರೈ ಮಂಜೇಶ್ವರದ ಸ್ಥಳೀಯರ ನಿರಂತರ ಪ್ರೋತ್ಸಾಹ ಮತ್ತುಜನ ಪ್ರತಿನಿಧಿಗಳ ಬೆಂಬಲದಿಂದ ರಾಷ್ಟ್ರಕವಿಗಳ ಸ್ಮಾರಕ ನಿಮರ್ಾಣಗೊಂಡು ಒಂದು ವರ್ಷ ಸಂದಿದೆ. ಸ್ಮಾರಕದಲ್ಲಿ ನಿರಂತರವಾಗಿ ಸಾಂಸ್ಕೃತಿಕ, ಸಾಹಿತಿಕ ಚಟುವಟಿಕೆಗಳನ್ನು ಆಯೋಜಿಸಿ ಮಾದರಿ ಕೇಂದ್ರವನ್ನಾಗಿಸಲು ಪ್ರಯತ್ನಿಸಬೇಕು. ಪ್ರಸ್ತುತ ಕೇಂದ್ರದಲ್ಲಿ ಭಾಷಾ ಕೇಂದ್ರದಲ್ಲಿ ಭಾಷಾ ಸಮನ್ವಯ ಕಾರ್ಯಕ್ರಮಗಳು ನಡೆಯಬೇಕಿದೆ ಎಂದರು. ಡಿಜಿಟಲೀಕರಣಗೊಳ್ಳುತ್ತಿರುವ ಪೈಗಳ ಒಟ್ಟು 4,700 ಪುಸ್ತಕಗಳನ್ನು ಕೇಂದ್ರಕ್ಕೆ ತರಿಸಿ ದೇಶ,ವಿದೇಶದ ಸಂಶೋಧನಾಸಕ್ತರಿಗೆ ಪೂರಕ ವಾತಾವರಣವನ್ನು ಇಲ್ಲಿ ಸೃಷ್ಟಿಸಲಾಗುವುದು ಎಂದು ಹೇಳಿದರು. ಮಂಜೇಶ್ವರ ಗೋವಿಂದ ಪೈಗಳು ಯೇಸುಕ್ರಿಸ್ತನ ಜೀವನಚರಿತ್ರೆ ತಿಳಿಸುವ ಗೊಲ್ಗೊಥಾ, ಬುದ್ಧನ ಜೀವನವನ್ನು ಬಿಂಬಿಸುವ ವೈಶಾಖಿ ಖಂಡಕಾವ್ಯಗಳನ್ನು ಅತ್ಯಂತ ಮನೋಜ್ಞವಾಗಿ ಬರೆದಿದ್ದು, ಅವರದು ಭಾಷೆ, ಜಾತಿ, ಮತ, ಧರ್ಮವನ್ನು ಮೀರಿದ ವಿಶ್ವಮಾನವನ ಬದುಕಾಗಿತ್ತು ಎಂದು ಹೇಳಿದರು. ಶ್ರೇಷ್ಠ ಸಾಹಿತಿ ಸಂಶೋಧಕ ಪೈ ಗಳ ಜನ್ಮದಿನಾಚರಣೆ ಆಚರಿಸುವುದರೊಂದಿಗೆ ಅವರ ಬದುಕು-ಜೀವನ ಮುಂದಿನ ಜನಾಂಗಕ್ಕೆ ಮಾದರಿಯಾಗಲಿ ಎಂದು ಹಾರೈಸಿದರು.
   ಮಂಜೇಶ್ವರ ಗ್ರಾ.ಪಂ ಅಧ್ಯಕ್ಷ ಅಬ್ದುಲ್ ಅಜೀಜ್ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ ಡಾ.ರಮಾನಂದ ಬನಾರಿ, ಕನರ್ಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಡಿ.ಎಂ.ಕುಲಾಲ್, ಗ್ರಾ.ಪಂ. ಸದಸ್ಯೆ ಸುಪ್ರಿಯಾ ಶೆಣೈ, ಮಂಜೇಶ್ವರ ಗೋವಿಂದ ಪೈ ಸರಕಾರಿ ಸ್ಮಾರಕ ಕಾಲೇಜಿನ ಪ್ರಾಂಶುಪಾಲ ಡಾ.ಸುನಿಲ್ ಜಾನ್ ಟಿ ಮೊದಲಾದವರು ಭಾಗವಹಿಸಿದ್ದರು.ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಕೋಶಾಧಿಕಾರಿ ಬಿ.ಎ ಕಕ್ಕಿಲ್ಲಾಯ ಪ್ರಾಸ್ತಾವಿಕವಾಗಿ ಮಾತನಾಡಿದರು.ಗಿಳಿವಿಂಡು ಆಡಳಿತಾಧಿಕಾರಿ ಡಾ.ಕಮಲಾಕ್ಷ .ಕೆ ಸ್ವಾಗತಿಸಿ, ಸುಭಾಶ್ಚಂದ್ರ ಕಣ್ವತೀರ್ಥ ವದಿಸಿದರು. ಸ್ಮಾರಕ ಕಾಲೇಜಿನ ವಿದ್ಯಾಥರ್ಿಗಳು ಪೈಗಳ ರಚನೆ ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೇ ಗೀತೆಯನ್ನು ಪ್ರಾರ್ಥನೆಯಾಗಿ ಹಾಡಿದರು.ಗೋವಿಂದಪೈ ಜನ್ಮದಿನಾಚರಣೆಯಂಗವಾಗಿ ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಡೊಳ್ಳು ಕುಣಿತ, ವೀರಗಾಸೆ, ತೇಜಸ್ವಿನಿ ಕಡೆಂಕೋಡಿ ಅವರಿಂದ ಜಾದೂ ನೃತ್ಯ, ಹುಲಿಕುಣಿತ, ರಂಗ ಗೀತೆಗಳು, ಗೊಂಬೆಯಾಟ, ನೃತ್ಯರೂಪಕ ನಡೆಯಿತು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries