ಸಿಯಾಚಿನ್ ಪ್ರದೇಶದಲ್ಲಿ ಕಳೆದೊಂದು ದಶಕದಲ್ಲಿ 163 ಸೈನಿಕರು ಹುತಾತ್ಮ: ಕೇಂದ್ರ ಸಕರ್ಾರ
ನವದೆಹಲಿ : ವಿಶ್ವದ ಅತ್ಯಂತ ಹೆಚ್ಚು ಎತ್ತರದ ಯುದ್ದಭೂಮಿ ಸಿಯಾಚಿನ್ ಪ್ರದೇಶದಲ್ಲಿ ಕಳೆದ 10 ವರ್ಷಗಳಲ್ಲಿ 163 ಸೈನಿಕರು ಹುತಾತ್ಮರಾಗಿದ್ದಾರೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ.
20 ಸಾವಿರ ಅಡಿಗಳಷ್ಟು ಎತ್ತರದಲ್ಲಿರುವ ಸಿಯಾಚಿನ್ ಪ್ರದೇಶದಲ್ಲಿ ಆರು ಮಂದಿ ಸೇನಾ ಅಧಿಕಾರಿಗಳು ಸೇರಿದಂತೆ ಒಟ್ಟಾರೇ, 163 ಮಂದಿ ಹುತಾತ್ಮರಾಗಿದ್ದಾರೆ ಎಂದು ಅವರು ಲೋಕಸಭೆಗೆ ಲಿಖಿತ ಉತ್ತರ ನೀಡಿದ್ದಾರೆ.
ಕಾರಕೊರಂ ಶ್ರೇಣಿಯಲ್ಲಿರುವ ಸಿಯಾಚಿನ್ ಪ್ರದೇಶ ಪ್ರಪಂಚದಲ್ಲಿಯೇ ಅತಿ ಎತ್ತರದಲ್ಲಿರುವ ಯುದ್ದಭೂಮಿಯಾಗಿದ್ದು, ಬೀರುಗಾಳಿ, ಕೊರೆಯುವ ಚಳಿಯನ್ನು ಲೆಕ್ಕಿಸದೆ ಹೋರಾಟ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
1984 ರಿಂದಲೂ ಇಲ್ಲಿ ಭಾರತ ಹಾಗೂ ಪಾಕಿಸ್ತಾನ ಸೈನಿಕರನ್ನು ನಿಯೋಜಿಸಲು ಆರಂಭಿಸಿದ್ದು, ಚಳಿಗಾಲದಲ್ಲಿ ಉಷ್ಣಾಂಶ ಮೈನಸ್ 60 ಡಿಗ್ರಿಯಷ್ಟು ಇರಲಿದ್ದು, ಹಿಮಪಾತ , ಭೂ ಕುಸಿತ ಸವರ್ೆ ಸಾಮಾನ್ಯ ಎಂಬಂತೆ ಇರುತ್ತದೆ. 2015ರಲ್ಲಿ 11, 2016ರಲ್ಲಿ 20 ಹಾಗೂ 2017ರಲ್ಲಿ 6 ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಹೇಳಿದರು.
ಉಗ್ರ ಚಟುವಟಿಕೆ ಇರುವ ಕಡೆಗಳಲ್ಲಿ ಭಾರತೀಯ ಸೈನಿಕರನ್ನು ನಿಯೋಜಿಸಲಾಗಿದೆ. ಹವಾಮಾನಕ್ಕೆ ತಕ್ಕಂತೆ ಸಾಧನ ಸಲಕರಣೆಗಳನ್ನು ಪೂರೈಸಲಾಗುತ್ತಿದೆ. ಪ್ರತಿಕೂಲ ಪರಿಸ್ಥಿತಿಯಲ್ಲೂ ಸವಾಲು ಎದುರಿಸುವ ರೀತಿಯಲ್ಲಿ ಸೂಕ್ತ ತರಬೇತಿ ನೀಡಲಾಗುತ್ತಿದೆ ಎಂದು ಸೀತಾರಾಮನ್ ತಿಳಿಸಿದರು.