ಎಂಡೋಸಲ್ಫಾನ್ ಯೋಜನೆಗೆ ಕೇಂದ್ರ ಅನುದಾನ
ಕಾಸರಗೋಡು: ಕೇರಳದ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಮತ್ತು ಚಿಕಿತ್ಸೆಗಾಗಿ ರಾಷ್ಟ್ರೀಯ ಆರೋಗ್ಯ ಮಿಷನ್ ಮೂಲಕ 2012-18ನೇ ವರ್ಷಗಳ ಅವಧಿಯಲ್ಲಿ 22.19 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ಕೇಂದ್ರ ಕೃಷಿ ಖಾತೆ ಸಚಿವ ಶೋಕತ್ತಮ ರೂಪಾಲ ಅವರು ಲೋಕಸಭೆ ಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮುಖೇನ ವಿತರಿಸಲು ದ್ವಿದಳ ಧಾನ್ಯಕ್ಕಾಗಿ ಕೇರಳ ಸರಕಾರವು ಕೇಂದ್ರದೊಂದಿಗೆ ಮಾತುಕತೆಗೆ ಬಂದಿಲ್ಲ ಎಂದು ಕೇಂದ್ರ ಆಹಾರ ಖಾತೆಯ ಸಹಾಯಕ ಸಚಿವ ಸಿ.ಆರ್.ಚೌದರಿ ಲೋಕಸಭೆಯಲ್ಲಿ ತಿಳಿಸಿದ್ದಾರೆ. ಅಲ್ಲದೆ ಅಂತ್ಯೋದಯ ಯೋಜನೆ (ಎಎವೈ) ವಿಭಾಗದವರಿಗೆ ಸಬ್ಸಿಡಿ ದರದಲ್ಲಿ ಸಕ್ಕರೆ ವಿತರಿಸುವ ನಿಟ್ಟಿನಲ್ಲಿ ಯೋಜನೆಯಲ್ಲಿ ಪಾಲುದಾರರಾಗಲು ಕೇರಳ ಸರಕಾರವು ಈ ವರೆಗೆ ಆಸಕ್ತಿ ವಹಿಸಿಲ್ಲವೆಂದೂ ಈ ಯೋಜನೆಯಲ್ಲಿ ಕೇರಳಕ್ಕೆ ಪ್ರತಿ ವರ್ಷ 7150 ಟನ್ ಸಕ್ಕರೆ ಲಭಿಸಲು ಅರ್ಹತೆ ಇದೆ ಎಂದೂ ಸಚಿವರು ಬಹಿರಂಗ ಪಡಿಸಿದರು.