HEALTH TIPS

No title

                   2000 ನೋಟುಗಳ ರದ್ದತಿ ಇಲ್ಲ: ಕೇಂದ್ರ ಸಕರ್ಾರ ಸ್ಪಷ್ಟನೆ
    ನವದೆಹಲಿ: ನವೆಂಬರ್ 2016ರ ಅನಾಣ್ಯೀಕರಣದ ಬಳಿಕ ಪರಿಚಯಿಸಲಾದ 2,000 ರೂ. ಮುಖಬೆಲೆಯ ನೋಟುಗಳನ್ನು ರದ್ದು ಪಡಿಸುವ ಪ್ರಸ್ತಾಪವಿಲ್ಲ ಎಂದು ಸಕರ್ಾರ ಮತ್ತೊಮ್ಮೆ ಸ್ಪಷ್ಟಪಡಿಸಿದೆ.
   ಕೆಲ ನಗರದಲ್ಲಿ 10 ರೂ. ಮುಖಬೆಲೆಯ ಪ್ಲ್ಯಾಸ್ಟಿಕ್ ನೋಟುಗಳನ್ನು ಪರಿಚಯಿಸಲು ಸಕರ್ಾರ ಚಿಂತನೆ ನಡೆಸಿದೆ ಎಂದು ಲೋಕಸಭೆಯಲ್ಲಿ ನಡೆದ ಕಲಾಪದಲ್ಲಿ ಹಣಕಾಸು ಸಚಿವಾಲಯ ಹೇಳಿದೆ.
   "2,000 ರೂ. ಮುಖಬೆಲೆಯ ನೋಟಿನ ಮುದ್ರಣ ನಿಲ್ಲಿಸುವ ಅಥವಾ ರದ್ದುಪಡಿಸುವ ಯಾವ ಪ್ರಸ್ತಾಪವೂ ಸಕರ್ಾರದ ಮುಂದಿಲ್ಲ" ಎಂದು ಹಣಕಾಸು ಇಲಾಖೆ ರಾಜ್ಯ ಸಚಿವ ಪಿ. ರಾಧಾಕೃಷ್ಣನ್ ಹೇಳಿದ್ದಾರೆ. ಭವಿಷ್ಯದಲ್ಲಿ ನೋಟುಗಳನ್ನು ರದ್ದುಪಡಿಸುವ ಯಾವ್ ಪ್ರಸ್ತಾಪವನ್ನಾದರೂ ಹಣಕಾಸು ಸಚಿವಾಲಯ ಹೊಂದಿದೆಯೆ? ಎನ್ನುವ ಪ್ರಶ್ನೆಗೆ ಸಚಿವರು ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ.
   ಮಹಾತ್ಮಾ ಗಾಂಧಿ (ನೂತನ) ಸರಣಿಯಲ್ಲಿ ಬಿಡುಗಡೆಯಾದ ರೂ 500 ಮತ್ತು 2,000 ರೂ ನೋಟುಗಳು ಕ್ರಮವಾಗಿ 66ಎಂಎಂ ಘಿ 150ಎಂಎಂ, 66ಎಂಎಂ ಘಿ 166ಎಂಎಂ ಅಳತೆಯಲ್ಲಿದೆ.
  ದೇಶದ ಐದು ನಗರಗಳಲ್ಲಿ ಪ್ಲ್ಯಾಸ್ಟಿಕ್ ನೊಟುಗಳ ಪ್ರಾಯೋಗಿಕ ಚಲಾವಣೆ ಜಾರಿಮಾಡಲು ನಿರ್ಧರಿಸಿದ್ದೇವೆ. 10 ರೂಪಾಯಿಗಳ ಪ್ಲ್ಯಾಸ್ಟಿಕ್ ನೋಟುಗಳನ್ನು ಪ್ರಾರಂಭದಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries