HEALTH TIPS

No title

             ಕಾಸರಗೋಡು ನಗರಸಭಾ ಮುಂಗಡ ಪತ್ರ
          ಪ್ರಾಥಮಿಕ ಸೌಕರ್ಯ ಸಹಿತ ನಗರದ ಸಮಗ್ರ ಅಭಿವೃದ್ಧಿ ಗುರಿ 
    ಕಾಸರಗೋಡು: ಪ್ರಾಥಮಿಕ ಸೌಕರ್ಯಗಳ ಸಹಿತ ಕಾಸರಗೋಡು ನಗರದ ಸಮಗ್ರ ಅಭಿವೃದ್ಧಿಯನ್ನು ಗುರಿಯಿರಿಸಿಕೊಂಡು ಕಾಸರಗೋಡು ನಗರಸಭೆಯ 2018-19 ನೇ ಸಾಲಿನ ಮುಂಗಡ ಪತ್ರವನ್ನು ಉಪಾಧ್ಯಕ್ಷ ಎಲ್.ಎ.ಮುಹಮ್ಮದ್ ಶುಕ್ರವಾರ ಮಂಡಿಸಿದರು.
   ಪ್ರಾಥಮಿಕ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ನಗರದ ಪ್ರಧಾನ ರಸ್ತೆಗಳ ಅಭಿವೃದ್ಧಿ ಹಾಗೂ ರಸ್ತೆ ದುರಸ್ತಿಗೆ ರಾಜ್ಯ ಸರಕಾರದ ನಿಧಿ, ಶಾಸಕರ ಅಭಿವೃದ್ಧಿ ನಿಧಿ, ಪ್ರಾದೇಶಿಕ ಅಭಿವೃದ್ಧಿ ನಿಧಿ ಮತ್ತಿತರ ಸರಕಾರದ ಏಜನ್ಸಿಗಳ ಧನಸಹಾಯ ಒಗ್ಗೂಡಿಸಿ 7 ಕೋಟಿ ರೂ. ವ್ಯಯಿಸಲಾಗುವುದು. ಕಾಸರಗೋಡು ನಗರವನ್ನು ಸುಂದರಗೊಳಿಸುವ ಅಂಗವಾಗಿ ನಗರಸಭಾ ಕಚೇರಿಯ ಹತ್ತಿರ ಪ್ರವೇಶ ಕಮಾನು ಸ್ಥಾಪಿಸಲಾಗುವುದು.  ನಗರಸಭಾ ಕಚೇರಿ ರಸ್ತೆ ನವೀಕರಿಸುವುದು, ರಸ್ತೆಯ ಇಬ್ಬದಿಗಳಲ್ಲೂ `ಹ್ಯಾಂಡ್ ರಯಿಲ್' ಸ್ಥಾಪಿಸಿ ಇಂಟರ್ ಲಾಕ್ ಹಾಕಿ ಫುಟ್ಪಾತ್ ನಿಮರ್ಿಸಲಾಗುವುದು. ಕಲ್ಕಾಡಿ ತೋಡು, ಪ್ರಗತಿ ಪ್ರಿಂಟರ್ಸ್ ಸಮೀಪವಿರುವ ಚರಂಡಿ ಅಭಿವೃದ್ಧಿಗೊಳಿಸುವುದರೊಂದಿಗೆ ಮಳೆಗಾಲದಲ್ಲಿ ನೀರು ತಂಗಿ ನಿಲ್ಲದಂತೆ ವ್ಯವಸ್ಥೆ ಮಾಡಲಾಗುವುದು.
   ನಗರಾಭಿವೃದ್ಧಿ ಯೋಜನೆ : ನಗರದ ಪ್ರಧಾನ ರಸ್ತೆಗಳಲ್ಲಿ ದಿಕ್ಸೂಚಿ ಫಲಕಗಳನ್ನು ಸ್ಥಾಪಿಸುವುದಕ್ಕೆ ಈಗಾಗಲೇ ಟೆಂಡರ್ ನಡೆದಿದ್ದು ಕೆಲಸ ಕಾರ್ಯ ಪ್ರಗತಿಯಲ್ಲಿದೆ. ಇನ್ನೂ ಹೆಚ್ಚಿನ ಸ್ಥಳಗಳಲ್ಲಿ ದಿಕ್ಸೂಚಿ ಫಲಕಗಳ ಸ್ಥಾಪನೆಗೆ 2018-19 ವರ್ಷದ ಬಜೆಟ್ನಲ್ಲಿ  5 ಲಕ್ಷ ರೂ. ಖಾದಿರಿಸಲಾಗಿದೆ. ಮುನಿಸಿಪಲ್ ಶಾಪಿಂಗ್ ಕಾಂಪ್ಲೆಕ್ಸ್ ಮಾಕರ್ೆಟ್ ನಿಮರ್ಾಣ, ಮುನಿಸಿಪಲ್ ಗೆಸ್ಟ್ ಹೌಸ್ ನಿಮರ್ಾಣ ಕಾಮಗಾರಿಗೆ ಚಾಲನೆ ನೀಡಲಾಗುವುದು. ಶಾಪಿಂಗ್ ಕಾಂಪ್ಲೆಕ್ಸ್-ಮಾಕರ್ೆಟ್ ಕಟ್ಟಡಕ್ಕೆ 3 ಕೋಟಿ ರೂ. ಮತ್ತು ಗೆಸ್ಟ್ ಹೌಸ್ ನಿಮರ್ಾಣಕ್ಕೆ 30 ಲಕ್ಷ ರೂ. ಅಂದಾಜು ವೆಚ್ಚ ನಿರೀಕ್ಷಿಸಲಾಗಿದೆ. ಪ್ರಸ್ತುತ ವರ್ಷ ಕಾಂಪ್ಲೆಕ್ಸ್ಗೆ 1 ಕೋಟಿ ರೂ., ಗೆಸ್ಟ್ ಹೌಸ್ಗೆ 15 ಲಕ್ಷ ರೂ. ಕಾದಿರಿಸಲಾಗಿದೆ.
    ಆರೋಗ್ಯ : ಸಮಗ್ರ ಆರೋಗ್ಯ ಗುರಿಯೊಂದಿಗೆ ಜನರಲ್ ಆಸ್ಪತ್ರೆ, ಆಯುವರ್ೇದ ಆಸ್ಪತ್ರೆ, ಹೋಮಿಯೋ ಆಸ್ಪತ್ರೆ, ನಗರಸ`ಾ ಆರೋಗ್ಯ ಕೇಂದ್ರಗಳಲ್ಲಿ ವಿವಿ` ಅಭಿವೃದ್ಧಿ ಕೆಲಸಗಳನ್ನು ನಡೆಸಲಾಗುವುದು. ಜನರಲ್ ಆಸ್ಪತ್ರೆಯ ಕಾಶ್ವಲಿಟಿ ಬ್ಲಾಕ್ ಕಾಮಗಾರಿಗೆ 17,37,000 ರೂ. ಕಾದಿರಿಸಲಾಗಿದೆ.
ನಗರಸ`ೆಯ ವಿದ್ಯಾಭ್ಯಾಸ ಸಂಸ್ಥೆಗಳ ಪ್ರಾಥಮಿಕ ಸೌಕರ್ಯಗಳು, ಗುಣಮಟ್ಟ ಉತ್ತಮಗೊಳಿಸಲು ಮುತುವಜರ್ಿ ವಹಿಸಲಿದೆ. ಸರ್ವಶಿಕ್ಷಾ ಅಭಿಯಾನ್ ಯೋಜನೆಗೆ 20 ಲಕ್ಷ ರೂ. ನೀಡಲು ಉದ್ದೇಶಿಸಿದೆ. ಹೊಸ ಕಟ್ಟಡಗಳ ನಿಮರ್ಾಣ ಹಾಗೂ ದುರಿಸ್ತಿಗಳಿಗೆ ಅಗತ್ಯದ ಸಹಾಯ ನೀಡಲಾಗುವುದು. ಅಲ್ಲದೆ ಉತ್ತಮ ಗುಣಮಟ್ಟದ ಶಾಲೆಗಳಿಗೆ ಪ್ರೋತ್ಸಾಹ ಯೋಜನೆಗಳನ್ನು ರೂಪೀಕರಿಸಲಾಗುವುದು. ವಿದ್ಯಾಲಯಗಳಿಗೆ ಅಗತ್ಯದ ಪೀಠೋಪಕರಣಗಳು, ಕಂಪ್ಯೂಟರ್ಗಳು ಮತ್ತು ಅಗತ್ಯದ ಉಪಕರಣಗಳನ್ನು ನೀಡಲಾಗುವುದು. ನಗರಸಭೆಗೆ ಹಸ್ತಾಂತರಿಸಿದ ವಿದ್ಯಾಲಯಗಳ ರಕ್ಷಣೆಗೆ ಸುತ್ತುಗೋಡೆಯನ್ನು ನೀಮರ್ಿಸಲು 30 ಲಕ್ಷ ರೂ. ಕಾದಿರಿಸಲಾಗಿದೆ. ಕುಡಿಯುವ ನೀರು ವ್ಯವಸ್ಥೆಗೆ ಅಗತ್ಯದ ಕ್ರಮ ತೆಗೆದುಕೊಳ್ಳಲಾಗುವುದು. ಬೋರ್ವೆಲ್ ಕಾಮಗಾರಿ, ಬಾವಿ ರಿಚಾಜರ್್ ಮಾಡಲಾಗುವುದು. ನಗರದ ಪ್ರ`ಾನ ಒಳ ಚರಂಡಿಗಳನ್ನು ಸಂಯೋಜಿಸಿ ಸಮಗ್ರ ಒಳ ಚರಂಡಿ ಯೋಜನೆ ರೂಪೀಕರಿಸಲಾಗುವುದು. ನಾಯಕ್ಸ್ ರಸ್ತೆಯಲ್ಲಿ ಒಳ ಚರಂಡಿ ಕಾಮಗಾರಿಯ ಟೆಂಡರ್ ನಡೆದಿದೆ.
    ವಾಡರ್್ ಹಂತದ ಅಭಿವೃದ್ಧಿ : ನಗರಸಭೆಯ 38 ವಾಡರ್್ಗಳಿಗೆ ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ ತಲಾ 8 ಲಕ್ಷ ರೂ. ವ್ಯಯಿಸಲಾಗುವುದು. ಇದಕ್ಕಾಗಿ 3.04 ಕೋಟಿ ರೂ. ಕಾದಿರಿಸಲಾಗಿದೆ. ಕೃಷಿ ವಲಯದ ಸಮಗ್ರ ಅಭಿವೃದ್ಧಿಗೆ ವಾಷರ್ಿಕ ಯೋಜನೆಯಲ್ಲಿ 30 ಲಕ್ಷ ರೂ. ಕಾದಿರಿಸಲಾಗಿದೆ. ಭತ್ತ, ತೆಂಗು ಕೃಷಿಗಳಿಗೆ ಹೆಚ್ಚು ಪ್ರೋತ್ಸಾಹ ನೀಡಲಾಗುವುದು. ಮೀನು ಕಾಮರ್ಿಕರ ಕ್ಷೇಮಗಳಿಗೆ ಅಗತ್ಯದ ಕ್ರಮ, ಮೀನು ಕಾಮರ್ಿಕರ ಮಕ್ಕಳಿಗೆ ಅಗತ್ಯದ ಪೀಠೋಪಕರಣಗಳು, ಮೀನು ಕಾಮರ್ಿಕರಿಗೆ ಬಲೆಗಳು, ಬೋಟ್ಗಳು ನೀಡಲಾಗುವುದು. ಮನೆ ದುರಸ್ತಿಗೆ ಸಹಾಯ ನೀಡಲಾಗುವುದು.
    ಪರಿಶಿಷ್ಟ ವರ್ಗ ಅಭಿವೃದ್ಧಿ : ನಗರದಲ್ಲಿ ವಾಸಿಸುವ 11 ಪರಿಶಿಷ್ಟ ವರ್ಗ ಕುಟುಂಬಗಳ ಅಭಿವೃದ್ಧಿಗೆ ಮೊತ್ತವನ್ನು ಕಾದಿರಿಸಲಾಗಿದೆ. ನಗರಸಭೆಯ ಪರಿಶಿಷ್ಟ ಜಾತಿ ಕಾಲನಿಗಳಿಗೆ ರಸ್ತೆ, ಕಾಲುದಾರಿ, ಚರಂಡಿ, ಕುಡಿಯುವ ನೀರು ವ್ಯವಸ್ಥೆ ಮಾಡಲಾಗುವುದು. ಪರಿಶಿಷ್ಟ ಜಾತಿ ಕುಟುಂಬಗಳಿಗೆ ವಿವಾಹ `ನ ಸಹಾಯ ನೀಡಲಾಗುವುದು. ವಿದ್ಯಾಥರ್ಿಗಳಿಗೆ ಪೀಠೋಪಕರಣ, ಕಂಪ್ಯೂಟರ್ ಸೌಲಭ್ಯ ನೀಡಲಾಗುವುದು.
   ಕುಟುಂಬಶ್ರೀ : ಯುವತಿಯರಿಗೆ ಸ್ವೋದ್ಯೋಗ ಉದ್ದೇಶದೊಂದಿಗೆ `ಪವರ್ ಲಾಂಡ್ರಿ ಯೂನಿಟ್' ಆರಂಭಿಸಲಾಗುವುದು. ಇದಕ್ಕೆ 25 ಲಕ್ಷ ರೂ. ಖಚರ್ು ಅಂದಾಜಿಸಲಾಗಿದೆ. ಮಹಿಳೆಯರಿಗಾಗಿ ಶಿಲಾಡ್ಜ್ ನಿಮರ್ಿಸಲಾಗುವುದು. ಇದಕ್ಕಾಗಿ 35 ಲಕ್ಷ ರೂ. ಕಾದಿರಿಸಲಾಗಿದೆ. ಸ್ವೋದ್ಯೋಗ ಗುರಿಯೊಂದಿಗೆ `ಗ್ರೀನ್ ಪ್ರೊಟೋಕೋಲ್' ಪ್ರಕಾರ ಯೋಜನೆ ರೂಪಿಸಲಾಗುವುದು.
ಹೊಸ ಬಸ್ ನಿಲ್ದಾಣ, ಹಳೆ ಬಸ್ ನಿಲ್ದಾಣ, ಮೀನು ಮಾರುಕಟ್ಟೆ, ಜನರಲ್ ಆಸ್ಪತ್ರೆ ಪರಿಸರ, ರೈಲ್ವೇ ನಿಲ್ದಾಣ ಪರಿಸರ, ಕರಂದಕ್ಕಾಡ್, ಕೆಎಸ್ಆರ್ಟಿಸಿ ಜಂಕ್ಷನ್ಗಳಲ್ಲಿ ಶುಚಿತ್ವ ಮತ್ತು ಸುರಕ್ಷೆಯ ಗುರಿಯಿರಿಸಿ ಸಿಸಿಟಿವಿ ಕ್ಯಾಮರಾಗಳನ್ನು ಸ್ಥಾಪಿಸಲು 8 ಲಕ್ಷ ರೂ. ವ್ಯಯಿಸಲಾಗುವುದು.
    ಕಾಸರಗೋಡು ನಗರಸಭಾ ಅಧ್ಯಕ್ಷೆ ಬಿಫಾತಿಮಾ ಇಬ್ರಾಹಿಂ ಮುಂಗಡಪತ್ರ ಮಂಡನೆಯ ಅಧ್ಯಕ್ಷತೆ ವಹಿಸಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries