HEALTH TIPS

No title

       ಸಮಾಜಸೇವೆಯ ಹರಿಕಾರ ಸಾಯಿರಾಂ ಗೋಪಾಲಕೃಷ್ಣ ಭಟ್-246ಮನೆಗಳನ್ನು ನಿಮರ್ಿಸಿ ಬಡಜನತೆಗೆ ನೀಡಿದ ದಾನಿ-       ಸರಣಿ ಭಾಗ- 2
   ಮಂಜೇಶ್ವರ ತಾಲೂಕು ಬದಿಯಡ್ಕ ಗ್ರಾಮ ಪಂಚಾಯಿತಿ ಕಿಳಿಂಗಾರು ನಡುಮನೆ ಗೋಪಾಲಕೃಷ್ಣ ಭಟ್ ಯಾನೆ ಸಾಯಿರಾಂ ಭಟ್ ಅವರು ತಮ್ಮ ಇಳಿವಯಸ್ಸಿನಲ್ಲೂ ಸಮಾಜ ಸೇವೆಯನ್ನು ಉಸಿರಾಗಿರಿಸಿಕೊಂಡ ಮಹಾನ್ ಚೇತನ. ಸೂರಿಲ್ಲದವರಿಗೆ ಮನೆ, ಅನಾರೋಗ್ಯಪೀಡಿತರಿಗೆ ಉಚಿತ ಔಷಧ, ನೀರಿನ ದಾಹ ತೀರಿಸಲು ಕುಡಿಯುವ ನೀರಿನ ಪೂರೈಕೆ, ಸ್ವ ಉದ್ಯೋಗ ಕೈಗೊಳ್ಳುವ ಮಹಿಳೆಯರಿಗೆ ಹೊಲಿಗೆ ಯಂತ್ರಗಳ ವಿತರಣೆ ಸಹಿತ ನಾನಾ ತರದಲ್ಲಿ ಬಡಜನತೆಯ ಸೇವೆಯನ್ನು ಕೈಗೊಳ್ಳುತ್ತಿದ್ದಾರೆ. ಸಾಯಿರಾಂ ಭಟ್ ಅವರಿಗೆ ಸಾಯಿಬಾಬಾ ಅವರೇ ಪ್ರೇರಣಾ ಶಕ್ತಿ. ಜಾತಿ, ಮತ ಬೇಧವಿಲ್ಲದೆ ನಡೆದು ಬರುತ್ತಿರುವ ಇವರ ಸಮಾಜಸೇವೆ ನಾಡಿಗೆ ಆದರ್ಶವಾಗಿದೆ.
   ಇದುವರೆಗೆ 246ಮನೆಗಳನ್ನು ನಿಮರ್ಿಸಿ, ಬಡಜನತೆಗೆ ಉಚಿತವಾಗಿ ಹಂಚಿದ್ದಾರೆ. ನೂರಾರು ಮಂದಿ ಬಡ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಿದ್ದಾರೆ. ಆರೋಗ್ಯ ಅರಸಿ ಬರುವವರಿಗೆ ಪ್ರತ್ಯೇಕ ವೈದ್ಯಕೀಯ ಶಿಬಿರ ನಡೆಸುವ ಮೂಲಕ ಉಚಿತ ಔಷಧ ವಿತರಿಸುತ್ತಿದ್ದಾರೆ. ಪ್ರತಿ ಶನಿವಾರ ಕಿಳಿಂಗಾರಿನ ಸಾಯಿ ಮಂದಿರದಲ್ಲಿ ಉಚಿತ ವೈದ್ಯಕೀಯ ಶಿಬಿರ ನಡೆಸಲಾಗುತ್ತಿದೆ. ಕಿಳಿಂಗಾರು ಆಸುಪಾಸಿನ ಹಲವು ಮನೆಗಳಿಗೆ ಸ್ವಂತ ವೆಚ್ಚದಲ್ಲಿ ಕೊಳವೆಬಾವಿ ನಿಮರ್ಿಸಿ, ಕುಡಿಯುವ ನೀರು ಪೂರೈಸುತ್ತಿದ್ದಾರೆ. ಬದಿಯಡ್ಕ ಗ್ರಾಪಂಗೆ ಸೀಮಿತವಾಗಿದ್ದ ತಮ್ಮ ಮನೆ ನಿಮರ್ಾಣದ ಯೋಜನೆಯನ್ನು ಆಸುಪಾಸಿನ ಕೆಲವೊಂದು ಪಂಚಾಯಿತಿಗಳಿಗೆ ವಿಸ್ತರಿಸಿಕೊಂಡಿದ್ದಾರೆ.
   ಬಹುಮುಖಿ ಸಮಾಜಪರ ಕಾಳಜಿಯನ್ನು ಬೆಳೆಸಿಕೊಂಡಿರುವ ಗೋಪಾಲಕೃಷ್ಣ ಭಟ್ಟರು ಹುಟ್ಟು ಶ್ರೀಮಂತರೇನಲ್ಲ. ತನ್ನ ಬಾಲ್ಯದಲ್ಲಿ ತೀರ ಬಡತನವಿತ್ತು, ಯೌವನದಲ್ಲಿದ್ದಾಗ ಹಿರಿಯರಿಂದ ದಕ್ಕಿದ ಸಣ್ಣ ಕೃಷಿ ಭೂಮಿಯಲ್ಲಿ ದಿನದ 16 ಗಂಟೆಗಳ ಕಾಲ ಅವಿರತ ದುಡಿಮೆ ನಡೆಸುತ್ತಿದ್ದೆ, ಶ್ರಮ ಜೀವನದ ಮೂಲಕ ತನಗಿಂತ ಬಡತನದಲ್ಲಿರುವ ಜನರ ವಿಷಮ ಪರಿಸ್ಥಿತಿಯನ್ನು ಅಥರ್ೈಸಿಕೊಳ್ಳಲು ಸಾಧ್ಯವಾಗಿತ್ತು ಎನ್ನುತ್ತಾರೆ ದೀನಬಂಧು ಸಾಯಿರಾಂ ಭಟ್ಟರು. ನೀಚರ್ಾಲು ಸಂಸ್ಕೃತ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪೂರೈಸಿದ ನಂತರ ಮಂಗಳೂರಿನ ಐ.ಕೆ.ಪಿ ಶರ್ಮರಿಂದ ಯೋಗ, ಆಯುವರ್ೇದ ವಿದ್ಯೆ ಕಲಿತ ಭಟ್ಟರು, ನಂತರ ಗುರುವಿನ ಅಣತಿಯಂತೆ ಯುದ್ದವಿದ್ಯೆ ಕಳರಿ ಹಾಗೂ ಕರಾಟೆಯನ್ನು ಕಲಿತಿದ್ದರು.
ಪೂರ್ವಜರು ಕುಂಬಳೆ ಸೀಮೆಯ ಮಾಯಿಪ್ಪಾಡಿ ಕದಂಬ ಅರಸರ ಆಸ್ಥಾನ ಮಾಂತ್ರಿಕರಾಗಿದ್ದರು. ಮಾಂತ್ರಿಕ ವಿದ್ಯೆ ತನಗೆ ಬಳುವಳಿಯಾಗಿ ಸಿಕ್ಕಿತು. ಹಿಂದಿನ ಕಾಲದಲ್ಲಿ ಅರಸರ ಪ್ರಧಾನ ವೈದ್ಯರಿಲ್ಲದೆ ಇದ್ದಾಗ ಮನೆಯ ಹಿರಿಯರು ವೈದ್ಯರಾಗಿಯೂ ಅರಸರ ಸೇವೆ ಸಲ್ಲಿಸುತ್ತಿದ್ದರು ಎಂದು ಹೆಮ್ಮೆಯಿಂದ ಹೇಳುತ್ತಾರೆ ಗೋಪಾಲಕೃಷ್ಣ ಭಟ್ಟರು. ಹಿಂದಿದ್ದ ವೆಂಕಟೇಶ ವರ್ಮರಾಜ ತಮ್ಮ ಆತ್ಮೀಯರಾಗಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ ಇವರು.

80 ರ ದಶಕದಲ್ಲಿ ಸಾಯಿ ಪ್ರಭಾವ
1970 ರಲ್ಲಿ ಪುಟಪತರ್ಿಯ ಸತ್ಯಸಾಯಿ ಬಾಬಾರ ಪ್ರಭಾವ ತನಗಾಯಿತು. ಹಲವು ಬಾರಿ ಅಲ್ಲಿಗೆ ತೆರಳಿದ್ದೆ, ಆಗ ಅಲ್ಲಿ ಅಷ್ಟೊಂದು ಜನಜಂಗುಳಿ ಇರುತ್ತಿರಲಿಲ್ಲ. 1990 ರಲ್ಲಿ ಪುಟಪತರ್ಿಗೆ ತೆರಳಿದ್ದ ಸಂದರ್ಭ ಬಾಬಾರವರು- ಹೇ ಕಾಸರಗೋಡಿಗ ಬಾ ಇಲ್ಲಿ ಎಂದು ತನ್ನನ್ನು ಸಮೀಪಕ್ಕೆ ಕರೆದರು, ನಂತರ ಆಶೀರ್ವದಿಸಿ ಸಮಾಜಮುಖಿ ಕಾರ್ಯಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ತಿಳಿಸಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ ಭಟ್ಟರು. ಅಂದಿನಿಂದ ಇಂದಿನವರೆಗೆ ನಿರಂತರವಾಗಿ ಬಡವರ, ದೀನರ, ಹಿಂದುಳಿದವರ ಕಲ್ಯಾಣಕ್ಕಾಗಿ ಜೀವನವನ್ನು ಮುಡಿಪಾಗಿದ್ದೇನೆ  ಎನ್ನುತ್ತಾರೆ ಭಟ್ಟರು.
1995 ರಲ್ಲಿ ಸಪತ್ನೀಕರಾಗಿ ಕಾಶಿಗೆ ಹೊರಟ್ಟಿದ್ದ ಸಂದರ್ಭವು ತನ್ನನ್ನು ಸಂಪೂರ್ಣವಾಗಿ ಸಾಮಜಮುಖಿಯಾಗಿಸಲು ಪ್ರೇರೇಪಿಸಿತು. ಅದು ಸೆಪ್ಟೆಂಬರ್ ತಿಂಗಳ ಸಮಯವಿರಬಹುದು, ಕಾಶಿಯ ವಿಶ್ವನಾಥನನ್ನು ನೋಡಬೇಕು ಹಾಗೂ ಪೂಜೆ ಸಲ್ಲಿಸಬೇಕು ಎಂಬ ಆಸೆಯು ಇತ್ತು, ಅದಕ್ಕಾಗಿ ಸುಮಾರು 34 ಸಾವಿರ ರೂ.ಗಳನ್ನು ಕೂಡಿಟ್ಟಿದ್ದೆ, ಆ ಸಮಯ ಮನೆಗೆ ತಲುಪಿದ ಕೂಲಿ ಕಾಮರ್ಿಕನೋರ್ವ ತನ್ನ ಮನೆಯ ಮೇಲ್ಛಾವಣಿ ಗಾಳಿ ಮಳೆಗೆ ಹಾರಿಹೋಗಿದೆ, ತಂಗಲು ಬದಲಿ ವ್ಯವಸ್ಥೆ ಇಲ್ಲ, ಹೆಂಡತಿ ಮಕ್ಕಳು ಮಳೆಯಲ್ಲಿ ನೆನೆಯುವಂತಾಗಿದೆ ತನಗೆ ಸಹಾಯ ಬೇಕಿದೆ ಎಂದು ಅಳುತ್ತಾ ತಿಳಿಸಿದ. ಆಗ ಭಟ್ಟರಲ್ಲಿ ಕಾಶಿಗೆ ತೆಗೆದಿರಿಸಿದ ಹಣ ಬಿಟ್ಟರೆ ಬೇರೆ ಹಣವಿರಲಿಲ್ಲ, ಆತನ ಕಷ್ಟವನ್ನು ಅರಿತ ಭಟ್ಟರು ನಿನ್ನ ಮನೆ ರಿಪೇರಿಗೆ ಹಣವನ್ನು ನೀಡುವುದಿಲ್ಲ, ಆದರೆ ಹೊಸ ಮನೆಯನ್ನು ಕಟ್ಟಿಸಿ ಕೊಡುತ್ತೇನೆ ಎಂದು ಹೇಳುತ್ತಾರೆ. ಸ್ವಲ್ಪ ದಿನದ ಮಟ್ಟಿಗೆ ಸಮೀಪದ ಮನೆಯಲ್ಲಿ ತಂಗಲು ವ್ಯವಸ್ಥೆ ಮಾಡಿ, ತಮ್ಮ ಕಾಶಿಗೆ ತೆರಳಲು ಕೂಡಿಟ್ಟಿದ್ದ ಹಣವನ್ನು ಕಾಮರ್ಿಕನ ಹೊಸ ಮನೆ ಕಟ್ಟಲು ಉಪಯೋಗಿಸುತ್ತಾರೆ. ಮನೆಯು ಕೇವಲ 28 ದಿನಗಳೊಳಗೆ ನಿಮರ್ಾಣವಾಗುತ್ತದೆ, ಮಾತ್ರವಲ್ಲದೆ ಅಂದಿನ ಎಸ್ಡಿಸಿಸಿ ಬ್ಯಾಂಕ್ ನಿದರ್ೇಶಕ ರಘುನಾಥ್ ರಾವ್ ಆಗಮಿಸಿ ಭಟ್ಟರು ಕಟ್ಟಿಸಿಕೊಟ್ಟ ಪ್ರಥಮ ಮನೆಯನ್ನು ಹಸ್ತಾಂತರಿಸುತ್ತಾರೆ. ಅಂದಿನಿಂದ ಭಟ್ಟರು ಬಡವರಿಗೆ ಮನೆ ಕಟ್ಟಿಸಿ ಕೊಡುವಂತಹ  ಕಾರ್ಯದಲ್ಲಿ ಸಕ್ರಿಯರಾಗಿ ತೊಡಗುತ್ತಾರೆ. ಅಂದಿನಿಂದ ಇಂದಿನವರೆಗೆ ಸುಮಾರು 248 ಮನೆಗಳನ್ನು ಆಥರ್ಿಕವಾಗಿ ಹಿಂದುಳಿದ ಕುಟುಂಬಗಳಿಗೆ ಕಟ್ಟಿಸಿ ಹಸ್ತಾಂತರಿಸಿರುವ ಭಟ್ಟರು, ಪ್ರಸ್ತುತ ತಿಂಗಳಲ್ಲಿ ಮೂರು ಮನೆಗಳನ್ನು ನಿಮರ್ಿಸುತ್ತಿದ್ದಾರೆ. ಫಲಾನುಭವಿಗಳ 249,250 ಹಾಗೂ 251 ನೇ ಮನೆಯ ಹಸ್ತಾಂತರವೂ ಫೆಬ್ರವರಿ ತಿಂಗಳ ಕೊನೆ ವಾರದಲ್ಲಿ ನಡೆಯಲಿದೆ ಎನ್ನುತ್ತಾರೆ ಸಾಯಿರಾಂ ಗೋಪಾಲಕೃಷ್ಣ ಭಟ್ಟರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries