HEALTH TIPS

No title

               ಎಪ್ರಿಲ್ 27ರಂದು ಬದಿಯಡ್ಕದಲ್ಲಿ ಬೃಹತ್ ಹಿಂದೂ ಸಮಾಜೋತ್ಸವ
   ಬದಿಯಡ್ಕ : ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗದಳ ಬದಿಯಡ್ಕ ಪ್ರಖಂಡದ ನೇತೃತ್ವದಲ್ಲಿ ಎಪ್ರಿಲ್ 27ರಂದು ಬದಿಯಡ್ಕದಲ್ಲಿ ನಡೆಯಲಿರುವ ಬೃಹತ್ ಹಿಂದೂಸಮಾಜೋತ್ಸವದ ಆಮಂತ್ರಣ ಪತ್ರಿಕೆಯನ್ನು ಭಾನುವಾರ ಬದಿಯಡ್ಕ ಶ್ರೀಭಾರತೀ ವಿದ್ಯಾಪೀಠದ ಸಭಾಂಗಣದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಬಿಡುಗಡೆಗೊಳಿಸಲಾಯಿತು. ವಿಶ್ವಹಿಂದೂ ಪರಿಷತ್ ಸಂಘಟನಾ ಕಾರ್ಯದಶರ್ಿ ಬಸವರಾಜು ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ ಕರಾವಳಿಯಲ್ಲಿ ಹಿಂದೂ ಸಮಾಜವು ಬಲಿಷ್ಠವಾಗುವಂತಹ ಭದ್ರವಾದ ಅಡಿಪಾಯವನ್ನು ಹೊಂದಿದ ಸಂಘಟನೆಯು ಹಿಂದೂ ಸಮಾಜೋತ್ಸವದಲ್ಲಿ ಮೂಡಿಬರಬೇಕು. ಹಿಂದೂ ಸಮಾಜದ ಶಕ್ತಿಯಾದ ಯುವಕ, ಯುವತಿಯರು ಹಾಗೂ ತಾಯಂದಿರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳುವಂತೆ ಮನೆ ಮನೆ ಸಂಪರ್ಕವನ್ನು ನಡೆಸಬೇಕು ಎಂದು ಕಾರ್ಯಕರ್ತರಿಗೆ ಕರೆಯಿತ್ತರು.
ವಿಶ್ವಾಸ ಧೈರ್ಯ ಬಂದಾಗ ಸಮಾಜಕ್ಕೆ ಶಕ್ತಿ ಬರುತ್ತದೆ. ಮಹಾಭಾರತದಲ್ಲಿ ಅಜರ್ುನನಿಗೆ ಧೈರ್ಯ ನೀಡುವ ಸಲುವಾಗಿ ಶ್ರೀಕೃಷ್ಣಪರಮಾತ್ಮನು ವಿಶ್ವರೂಪದರ್ಶನವನ್ನು ನೀಡಿದನೋ ಅದೇ ರೀತಿಯಲ್ಲಿ ಸಮಾಜೋತ್ಸವದ ಮೂಲಕ ಹಿಂದೂ ಧರ್ಮದ ವಿರಾಟ್ ರೂಪ ದರ್ಶನವಾಗಬೇಕು, ತನ್ಮೂಲಕ ಸಮಾಜದಲ್ಲಿ ಧೈರ್ಯ, ಆತ್ಮಸ್ತೈರ್ಯ ತುಂಬಬೇಕಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿಂದೂ ಸಮಾಜೋತ್ಸವ ಸಮಿತಿಯ ಅಧ್ಯಕ್ಷ ಜಯದೇವ ಖಂಡಿಗೆ, ವಿಶ್ವಹಿಂದೂ ಪರಿಷತ್ ಜಿಲ್ಲಾ ಸಮಿತಿಯ ಗೋರಕ್ಷಾ ಪ್ರಮುಖ್ ಗೋಪಾಲ ಶೆಟ್ಟಿ ಅರಿಬೈಲು, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷ ಅಂಗಾರ ಶ್ರೀಪಾದ, ವಿಶ್ವಹಿಂದೂ ಪರಿಷತ್ ಬದಿಯಡ್ಕ ಪ್ರಖಂಡ ಅಧ್ಯಕ್ಷ ಕರಿಂಬಿಲ ಲಕ್ಷ್ಮಣ ಪ್ರಭು, ವಿಶ್ವ ಹಿಂದೂ ಪರಿಷತ್ ಮಾತೃ ಮಂಡಳಿಯ ಜಿಲ್ಲಾ ಅಧ್ಯಕ್ಷೆ ಮೀರಾ ಆಳ್ವ, ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾರ್ಯದಶರ್ಿ ಶಂಕರ ಭಟ್ ಉಳುವಾನ, ವಿಶ್ವಹಿಂದೂ ಪರಿಷತ್ ಜಿಲ್ಲಾ ಪ್ರಚಾರಕ್ ಸಂಕಪ್ಪ ಭಂಡಾರಿ, ವಿಶ್ವಹಿಂದೂ ಪರಿಷತ್ ಮಂಜೇಶ್ವರ ಪ್ರಖಂಡ ಅಧ್ಯಕ್ಷ ಗೋವಿಂದ ಪ್ರಸಾದ್,  ಭಜರಂಗ ದಳ ಜಿಲ್ಲಾ ಸಂಯೋಜಕ ಜಗನ್ನಾಥ ಶೆಟ್ಟಿ,  ಭಜರಂಗ ದಳ ಬದಿಯಡ್ಕ ಪ್ರಖಂಡ ಸಂಚಾಲಕ ಸುನಿಲ್ ಶೆಟ್ಟಿ, ಭಜರಂಗ ದಳ ಜಿಲ್ಲಾ ಸಂಚಾಲಕ ಸುರೇಶ್ ಶೆಟ್ಟಿ ಪರಂಕಿಲ, ಹಿಂದೂ ಸಮಾಜೋತ್ಸವ ಸಮಿತಿ ಕೋಶಾಧಿಕಾರಿ ಭಾಸ್ಕರ ಬದಿಯಡ್ಕ, ರಘುರಾಮ ನೆಕ್ರಾಜೆ ಹಾಗೂ ವಿವಿಧ ಪಂಚಾಯತಿ ಸಮಿತಿಗಳ ನೂರಾರು ಕಾರ್ಯಕರ್ತರು ಪಾಲ್ಗೊಂಡರು. ಹಿಂದೂ ಸಮಾಜೋತ್ಸವ ಸಮಿತಿಯ ಕಾರ್ಯದಶರ್ಿ ಹರಿಪ್ರಸಾದ್ ರೈ ಪುತ್ರಕಳ ಸ್ವಾಗತಿಸಿ, ವಿಶ್ವಹಿಂದೂ ಪರಿಷತ್ ಬದಿಯಡ್ಕ ಪ್ರಖಂಡ ಕಾರ್ಯದಶರ್ಿ ಜಯಪ್ರಕಾಶ್ ಪಟ್ಟಾಜೆ ವಂದಿಸಿದರು.
   ಬಾಕ್ಸ್:
   * ಎಪ್ರಿಲ್ 27ರಂದು ಅಪರಾಹ್ನ 2 ಘಂಟೆಯಿಂದ ಆಕರ್ಷಕ ವೈಭವದ ಮೆರವಣಿಗೆ
   * 3.30ಕ್ಕೆ ಬೋಳುಕಟ್ಟೆಯಲ್ಲಿ ಸಜ್ಜುಗೊಂಡ ಬೃಹತ್ ವೇದಿಕೆಯಲ್ಲಿ ಹಿಂದೂ ಸಂಗಮ,
    * 4 ಘಂಟೆಗೆ ಬೃಹತ್ ಹಿಂದೂ ಸಮಾಜೋತ್ಸವ
    * ಅಪ್ರತಿಮ ವಾಗ್ಮಿ ಸಾದ್ವಿ ಬಾಲಿಕಾ ಸರಸ್ವತೀ ಅವರಿಂದ ದಿಕ್ಸೂಚಿ ಭಾಷಣ
  * ನಾಡಿನ ಸಂತರು, ಗಣ್ಯರು ಹಾಗೂ ಧಾಮರ್ಿಕ ನೇತಾರರ ಸಮಾಗಮ
  * ಗೋಹತ್ಯಾ ನಿಷೇಧಕ್ಕಾಗಿ ಸಹಿ ಸಂಗ್ರಹ ಅಭಿಯಾನ
   * ಸಮಾಜ ಕಲ್ಯಾಣ ನಿಧಿಗೆ ಚಾಲನೆ
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries