HEALTH TIPS

No title

                  ಶಂಕರ್ ಸಾರಡ್ಕರದು ಸವ್ಯಸಾಚಿ ಪ್ರತಿಭೆ- ವಿದಾಯ ಕೂಟದಲ್ಲಿ ಕೃಷ್ಣ ಭಟ್
    ಬದಿಯಡ್ಕ: ನವಜೀವನ ಹೈಯರ್ ಸೆಕೆಂಡರಿ ಶಾಲೆ ಪೆರಡಾಲದಲ್ಲಿ 28 ವರ್ಷಗಳ ಕಾಲ ಅಧ್ಯಾಪಕರಾಗಿ 6 ವರ್ಷಗಳ ಕಾಲ ಮುಖ್ಯೋಪಾಧ್ಯಾಯರಾಗಿ ಮೇ 31 ರಂದು ಉದ್ಯೋಗದಿಂದ ವಿರಮಿಸಲಿರುವ ಕೇರಳ ರಾಜ್ಯ ಮತ್ತು ರಾಷ್ಟ್ರ ಉತ್ತಮ ಶಿಕ್ಷಕ ಎರಡೂ ಪ್ರಶಸ್ತಿಗಳನ್ನು ಗಳಿಸಿದ  ಉತ್ತಮ ಲೇಖಕ ವಾಗ್ಮಿ ಶಂಕರ್ ಸಾರಡ್ಕ ಇವರನ್ನು ಶಾಲಾ ವಿದ್ಯಾಥರ್ಿಳಿಂದ ಮತ್ತು ರಕ್ಷಕ ಶಿಕ್ಷಕ ಸಂಘದ ವತಿಯಿಂದ ಶುಕ್ರವಾರ ಹೃದಯ ಸ್ಪಶರ್ಿ ವಿದಾಯ ಸಮಾರಂಭವೇರ್ಪಡಿಸಿ ಬೀಳ್ಕೋಡಲಾಯಿತು.
   ಸಮಾರಂಭದಲ್ಲಿ ಮಾತನಾಡಿದ ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಕೃಷ್ಣ ಭಟ್ ಕೆ ಎನ್, ಸಾರಡ್ಕರದು ಸವ್ಯಸಾಚಿ ಪ್ರತಿಭೆ. ಶಾಲೆಯನ್ನು ಮುಂಚೂಣಿಗೆ ತರುವ ಜೊತೆಗೆ ಬದಿಯಡ್ಕ ಪಂಚಾಯತು ಅಭಿವೃದ್ದಿಯಲ್ಲಿ ಅವರ ಸಲಹೆಗಳು ಅಮೂಲ್ಯವಾಗಿತ್ತು. ಈ ಊರಿನಲ್ಲಿ ಎಲ್ಲರಿಗೂ ಚಿರಪರಿಚಿತರಾಗಿದ್ದು ಅತ್ಮೀಯರಾಗಿ ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡವರು.ಅವರ ನಿವೃತ್ತಿ ಈ ಊರಿಗೆ ದೊಡ್ಡ ನಷ್ಟ. ಅವರ ವಿಶ್ರಾಂತ ಜೀವನ ಸುಖಮಯವಾಗಲಿ ಎಂದು ಹಾರೈಸಿದರು.
   ಮಾತೃ ಸಂಘದ ಅಧ್ಯಕ್ಷೆ ಸುರೇಖಾ ಸಭೆಯ ಅಧ್ಯಕ್ಷತೆ ವಹಿದ್ದರು. ಶಾಲು, ಫಲತಾಂಬೂಲ, ಸ್ಮ್ರರಣಿಕೆ ನೀಡಿ ಶಂಕರ್ ಸಾರಡ್ಕ ಇವರನ್ನು ಸಮ್ಮಾನಿಸಿ ಗೌರವಿಸಲಾುತು. ಬದಿಯಡ್ಕ ಗ್ರಾಮ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಶ್ಯಾಮ ಪ್ರಾಸಾದ್ ಮಾನ್ಯ, ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳಾದ ಸಲೀಮ್, ದೇವೀದಾಕ್ಷನ್, ರವಿಕಾಂತ ಕೇಸರಿ ಕಡಾರ್, ರತ್ನಾಕರ ಓಡಂಗಲ್ಲು, ಶಿವಪ್ರಸಾದ್ ರೈ ಪೆರಡಾಲ, ಗೋಪಾಲಕೃಷ್ಣ ,ಸಹ ಮುಖ್ಯೋಪಾಧ್ಯಾಯ ಶ್ಯಾಮ್ ಭಟ್ ಕೆ, ಹಿರಿಯ ಅಧ್ಯಾಪಕಿ ಪಿ ಕೆ ತಂಗಮಣಿ, ಅಧ್ಯಾಪಕರಾದ ಪ್ರಭಾಕರನ್ ನಾಯರ್ , ಉಣ್ಣಿಕೃಷ್ಣನ್ ಮೊದಲಾದವರು ಇವರ ಜೊತೆಗಿನ ತಮ್ಮ ಅನುಭವವನ್ನು ಹಂಚಿಕೊಂಡರು.
   ಸಮ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಶಂಕರ್ ಸಾರಡ್ಕ ಈ ಶಾಲೆ ನನಗೆ ಅನನ್ಯ ವ್ಯಕ್ತಿತ್ವವನ್ನು ತಂದು ಕೊಟ್ಟಿದೆ. ನನ್ನ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿದ್ದೇನೆ. ಶಾಲಾ ಅಧ್ಯಾಪಕರ ,ರಕ್ಷಕ ಶಿಕ್ಷಕ ಸಂಘದ ಮತ್ತು ಊರಿನವರ ಸ್ನೇಹ ಸಹಕಾರಕ್ಕೆ ಎಂದಿಗೂ ನಾನು ಚಿರರುಣಿ ಎಂದು ನುಡಿದರು.
   ವಿದ್ಯಾಥರ್ಿ ನಾಯಕಿ ಎಸ್ ಅನನ್ಯ ಸ್ವಾಗತಿಸಿ, ಶಬ್ನ ಪಿ ವಂದಿಸಿದರು. ಶಿಕ್ಷಕ ನಾರಾಯಣ ಅಸ್ರ ಕಾರ್ಯಕ್ರಮ ನಿರೂಪಿಸಿದರು.
 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries